Kasaragod: ಸ್ತನ್ಯಪಾನ ಗಂಟಲಲ್ಲಿ ಸಿಲುಕಿ ಮಗುವಿನ ಸಾವು
Team Udayavani, Nov 7, 2024, 8:43 PM IST
ಕುಂಬಳೆ: ಸ್ತನ್ಯಪಾನ ಮಾಡುತ್ತಿದ್ದಾಗ ಹಾಲು ಗಂಟಲಲ್ಲಿ ಸಿಲುಕಿ ಹೇರೂರು ವೆಂಕೂಮೂಲೆ ನಿವಾಸಿ ನೌಶಾದ್ – ರಾಹಿಲ ದಂಪತಿಯ ಪುತ್ರಿ ಸಫೀಯತ್ ನೈಫ್ ಸಾವಿಗೀಡಾದ ಘಟನೆ ನಡೆದಿದೆ.
ಗುರುವಾರ ಮುಂಜಾನೆ 4 ಗಂಟೆಗೆ ಹಾಲುಣಿಸಿ ಮಗುವನ್ನು ಮಲಗಿಸಲಾಗಿತ್ತು. ಬೆಳಗ್ಗೆ ಮಗು ಎಚ್ಚರಗೊಂಡಿರಲಿಲ್ಲ. ಇದರಿಂದ ಕೂಡಲೇ ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಮಗುವನ್ನು ಕರೆದೊಯ್ದಿದ್ದು, ಅಷ್ಟರೊಳಗೆ ಸಾವು ಸಂಭವಿಸಿತ್ತು. ಹಾಲು ಗಂಟಲಲ್ಲಿ ಸಿಲುಕಿ ಮಗು ಸಾವಿಗೀಡಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆಂದು ಮನೆಯವರು ತಿಳಿಸಿದ್ದಾರೆ.
ಪಾಣೂರಿನಲ್ಲಿ ನಾಯಿಯನ್ನು ಕಚ್ಚಿಕೊಂಡ ಹೋದ ಚಿರತೆ
ಮುಳಿಯಾರು: ಪಂಚಾಯತ್ ವ್ಯಾಪ್ತಿಯ ಪಾಣೂರು ತೋಟದಮೂಲೆಯಲ್ಲಿ ಚಿರತೆ ಕಂಡು ಬಂದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.ಇಲ್ಲಿನ ಮಣಿಕಂಠನ್ ಅವರ ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರಿನ ಅಡಿಭಾಗದಲ್ಲಿ ನಿದ್ದೆ ಮಾಡಿದ ಸಾಕು ನಾಯಿಯನ್ನು ಚಿರತೆ ಕಚ್ಚಿಕೊಂಡು ಹೋಗಿದೆ. ಗುರುವಾರ ಮುಂಜಾನೆ 3.30 ಕ್ಕೆ ಈ ಘಟನೆ ನಡೆದಿದೆ. ನಾಯಿ ಬೊಗಳುವುದನ್ನು ಕೇಳಿ ಮನೆ ಮಂದಿ ಎಚ್ಚರಗೊಂಡು ಹೊರಗೆ ಬಂದು ನೋಡಿದಾಗ ನಾಯಿಯನ್ನು ಚಿರತೆ ಕಚ್ಚಿಕೊಂಡು ಹೋಗುವ ದೃಶ್ಯವನ್ನು ಕಂಡಿದ್ದಾರೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.ಶಾಲೆ, ಅಂಗನವಾಡಿ ಮಕ್ಕಳು ನಡೆದು ಹೋಗುವ ದಾರಿ ಮಧ್ಯೆ ಇರುವ ಮನೆಯಲ್ಲಿ ನಾಯಿಗೆ ಚಿರತೆ ಆಕ್ರಮಿಸಿ ಕಚ್ಚಿಕೊಂಡು ಹೋಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ಪರಿಶೀಲಿಸುತ್ತಿದ್ದಾರೆ. ಹೆಜ್ಜೆ ಗುರುತನ್ನು ನೋಡಿ ನಾಯಿಯನ್ನು ಕಚ್ಚಿಕೊಂಡು ಹೋಗಿರುವುದು ಚಿರತೆ ಎಂಬುದಾಗಿ ಖಚಿತಪಡಿಸಿದ್ದಾರೆ.
ಲಾರಿ ಢಿಕ್ಕಿ ಹೊಡೆಸಿ ಸ್ಕೂಟರ್ ಸವಾರನ ಹತ್ಯೆಗೆ ಯತ್ನ : ಆರೋಪಿಯ ಬಂಧನ
ಕಾಸರಗೋಡು: ಲಾರಿ ಢಿಕ್ಕಿ ಹೊಡೆಸಿ ಸ್ಕೂಟರ್ ಸವಾರ ಎಡನೀರು ಚಾಪಾಡಿ ಬಲ್ಕಿàಸ್ ಹೌಸ್‌ನ ಅಬ್ದುಲ್ ರಹಮಾನ್(65) ಅವರನ್ನು ಮೇಲಿನ ಎಡನೀರಿನಲ್ಲಿ ಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಎಡನೀರು ಚಾಪಾಡಿ ನಿವಾಸಿ ಅಬ್ದುಲ್ಲ ಕುಂಞಿ(52)ಯನ್ನು ವಿದ್ಯಾನಗರ ಠಾಣೆ ಪೊಲೀಸರು ಸುರತ್ಕಲ್‌ನಿಂದ ಬಂಧಿಸಿದ್ದಾರೆ. ನ.6 ರಂದು ಬೆಳಗ್ಗೆ ಸ್ಕೂಟರ್‌ನಲ್ಲಿ ಮಸೀದಿಗೆ ಹೋಗುತ್ತಿದ್ದಾಗ ಲಾರಿ ಢಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ್ದಾಗಿ ನೀಡಿದ ದೂರಿನಂತೆ ಕೇಸು ದಾಖಲಿಸಿಕೊಂಡಿದ್ದರು. ಬಂಧಿತ ಆರೋಪಿಯ ವಿರುದ್ಧ ಆದೂರು ಪೊಲೀಸ್ ಠಾಣೆಯಲ್ಲಿ ಇತರ ಮೂರು ಕೇಸುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಢಿಕ್ಕಿ ಹೊಡೆದ ಲಾರಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಗಾಯಾಳು ಅಬ್ದುಲ್ ರಹಮಾನ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಮತ್ತು ಆರೋಪಿಯ ನಡುವೆ ಸೊತ್ತು ಹಾಗು ದಾರಿ ವಿವಾದವಿದೆಯೆಂದೂ ಈ ಕಾರಣದಿಂದ ಹತ್ಯೆಯತ್ನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.