ಕಾಸರಗೋಡು: ಪ್ರವಾಸಿಗರಿಗಾಗಿ ತೆರೆದ ಬೇಕಲ್ ಕೋರ್ನಿಸ್
Team Udayavani, May 8, 2023, 2:29 PM IST
ಕಾಸರಗೋಡು: ಬೇಕಲ ಹೊಳೆಯ ತಟದಲ್ಲಿ ರಾಜ್ಯ ಹೆದ್ದಾರಿಯಿಂದ ಅರ್ಧ ಕಿಲೋ ಮೀಟರ್ ದೂರದಲ್ಲಿ ಪ್ರವಾಸೋದ್ಯಮ ಉದ್ದಿಮೆಯನ್ನು ನವೀಕರಿಸಲಾಗಿದೆ. ಅದರೊಂದಿಗೆ ಜಿಲ್ಲಾ ಟೂರಿಸಂ ಕೌನ್ಸಿಲ್ನ ಫ್ಲೋಟಿಂಗ್ ಜೆಟ್ಟಿ ನೀಲೇಶ್ವರ ಕೋಟ್ಟಪುರದಿಂದ ಬೇಕಲ ಹೊಳೆಯಲ್ಲಿ ಸ್ಥಾಪಿಸಿದ ಫ್ಲೋಟಿಂಗ್ ರೆಸ್ಟೋರೆಂಟ್ ಆಗಿ ಪರಿವರ್ತಿಸಲಾಗಿದ್ದು, ಇದು ಜಿಲ್ಲೆಯ ಪ್ರಪ್ರಥಮ ಫ್ಲೋಟಿಂಗ್ ರೆಸ್ಟೋರೆಂಟ್ ಆಗಿದೆ.
ಕಯಾಕಿಂಗ್, ಸ್ಪೀಡ್ ಬೋಟಿಂಗ್, ಪೆಡಲ್ ಬೋಟಿಂಗ್ ಹಾಗು ಮೊದಲಾದ ಸೌಕರ್ಯಗಳೊಂದಿಗೆ ಮಕ್ಕಳಿಗೆ ಕಯಾಕಿಂಗ್ ತರಬೇತಿ ಲಭ್ಯ ವಿದೆ. ಇನ್ನು ಮುಂದೆ ಇದು ಬೇಕಲ್ ಕೋರ್ನಿಶ್ ರಿವರ್ ಸೈಡ್ ರೆಸ್ಟೋರೆಂಟ್ ಆ್ಯಂಡ್ ವಾಟರ್ ನ್ಪೋರ್ಟ್ಸ್ -ಆಕ್ಟಿವಿಟಿ ಸೆಂಟರ್ ಎಂಬ ಹೆಸರಿನಲ್ಲಿ ಕರೆಯಲ್ಪಡಲಿದೆ. ಇದು ಪಳ್ಳಿಕೆರೆ ಪಂ.ವ್ಯಾಪ್ತಿಯಲ್ಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.