ಕಾಸರಗೋಡು: 432 ಮಂದಿಗೆ ಕೋವಿಡ್ ಪಾಸಿಟಿವ್
Team Udayavani, Oct 8, 2020, 12:25 PM IST
ಕಾಸರಗೋಡು : ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 432 ಮಂದಿಗೆ ಕೊರೊನಾ ದೃಢಪಟ್ಟಿದೆ. 417 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಬಾಧಿತರಲ್ಲಿ ಒಬ್ಬರು ಇತರ ರಾಜ್ಯದಿಂದ, 14 ಮಂದಿ ವಿದೇಶದಿಂದ ಬಂದವರು. 177 ಮಂದಿ ಗುಣಮುಖರಾಗಿದ್ದಾರೆ.
ಕಾಸರಗೋಡು ಪೊಲೀಸ್ ಠಾಣೆಯ ಇಬ್ಬರು ಎಸ್‌ಐಗಳ ಸಹಿತ 8 ಮಂದಿಗೆ ಕೊರೊನಾ ಬಾಧಿಸಿದೆ. ಇದರೊಂದಿಗೆ ಅಧಿಕಾರಿಗಳ ಸಹಿತ 67 ಮಂದಿ ಪೊಲೀಸರಿರುವ ಠಾಣೆಯಲ್ಲಿ 28 ಮಂದಿಗೆ ಕೋವಿಡ್ ದೃಢವಾಗಿದೆ. ಐವರು ಗುಣಮುಖರಾಗಿದ್ದಾರೆ. ಆದೂರು ಠಾಣೆಯ ಮೂವರು ಪೊಲೀಸರಿಗೂ ಕೊರೊನಾ ತಗಲಿದೆ. ಪ್ರಧಾನ ಅಂಚೆ ಕಚೇರಿ ಬಂದ್ ನೌಕರರಿಗೆ ಸೋಂಕು ತಗಲಿದ ಹಿನ್ನೆಲೆಯಲ್ಲಿ ಕಾಸರಗೋಡು ಪ್ರಧಾನ ಅಂಚೆ ಕಚೇರಿ ಹಾಗೂ ಅದೇ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಪಾಸ್‌ಪೋರ್ಟ್
ಸೇವಾ ಕೇಂದ್ರವನ್ನು ಮುಚ್ಚಲಾಗಿದೆ.
ಕೇರಳದಲ್ಲಿ 10,606 ಪ್ರಕರಣ
ಕೇರಳದಲ್ಲಿ ಬುಧವಾರ 10,606 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ದಿನವೊಂದರಲ್ಲಿ 10 ಸಾವಿರಕ್ಕೂ ಅಧಿಕ ಮಂದಿಗೆ ಕೋವಿಡ್ ದೃಢಗೊಂಡಿರುವುದು ಇದೇ ಪ್ರಥಮ. 22 ಮಂದಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ :ಹುಬ್ಬಳ್ಳಿಯಲ್ಲಿ ಮಂಜು ಕವಿದ ವಾತಾವರಣ: 25 ನಿಮಿಷ ಸುತ್ತಾಡಿ ಲ್ಯಾಂಡ್ ಆದ ವಿಮಾನ
ಜಿಲ್ಲಾಸ್ಪತ್ರೆಯಲ್ಲಿ ಪ್ಲಾಸ್ಮಾ ಚಿಕಿತ್ಸೆಗೆ ಸಿದ್ಧತೆ
ಗಂಭೀರ ಸ್ಥಿತಿಯ ಕೋವಿಡ್ ರೋಗಿಗಳಿಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಚಿಕಿತ್ಸೆಗೆ ಸಿದ್ಧತೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ತಿಳಿಸಿದರು. ಕೊರೊನಾ ಬಾಧೆಗೊಳಗಾಗಿ ಗುಣಮುಖರಾಗಿ 28 ದಿನಗಳು ಕಳೆದವರಿಂದ ರಕ್ತ ಸಂಗ್ರಹಿಸಿ ಚಿಕಿತ್ಸೆಗೆ ಬೇಕಾದ ಪ್ಲಾಸ್ಮಾ ವಿಂಗಡಿಸಲಾಗುವುದು.
ಕೋವಿಡ್ ರೋಗಮುಕ್ತರು ಜಿಲ್ಲಾ ಆಸ್ಪತ್ರೆಯ ಬ್ಲಿಡ್ ಬ್ಯಾಂಕನ್ನು ಸಂಪರ್ಕಿಸುವಂತೆ ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ವಿ. ರಾಮದಾಸ್ ತಿಳಿಸಿದರು.
ಮಾಹಿತಿಗೆ ದೂರವಾಣಿ: 0467 2204333.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.