ಕಾಸರಗೋಡು ಕೋವಿಡ್ ಸೋಂಕಿಗೆ ಶಿಕ್ಷಕ, ಬಾಣಂತಿ ಸಾವು : 242 ಮಂದಿಗೆ ಸೋಂಕು
Team Udayavani, Oct 12, 2020, 2:02 PM IST
ಕಾಸರಗೋಡು: ಜಿಲ್ಲೆಯಲ್ಲಿ ರವಿವಾರ 242 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. 505 ಮಂದಿ ಗುಣಮುಖರಾಗಿದ್ದಾರೆ. 233 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ವಿದೇಶದಿಂದ ಬಂದ 9 ಮಂದಿ ಬಾಧಿತರಾಗಿದ್ದಾರೆ.
ಪುತ್ತಿಗೆ ನಿವಾಸಿ 45 ವರ್ಷದ ಅಧ್ಯಾಪಕ ಮತ್ತು ಮುಳ್ಳೇರಿಯಾದ 36 ವರ್ಷದ ಮಹಿಳೆ ಕೊರೊನಾ ಬಾಧೆಯಿಂದ ಮೃತಪಟ್ಟಿದ್ದಾರೆ. ಮಹಿಳೆಯನ್ನು ಅ. 8ರಂದು ಪರಿಯಾರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿಗೆ ಜನ್ಮ ನೀಡಿದ ಬಳಿಕ ಅವರು ಸಾವಿಗೀಡಾದರು. ಮಗುವನ್ನು ವೆಂಟಿಲೇಟರ್ನಲ್ಲಿರಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕೇರಳದಲ್ಲಿ 9,347 ಪ್ರಕರಣ
ಕೇರಳದಲ್ಲಿ ರವಿವಾರ 9,347 ಮಂದಿಗೆ ಸೋಂಕು ದೃಢವಾಗಿದೆ. 25 ಮಂದಿ ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ 1,003ಕ್ಕೇರಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.