ಕಾಸರಗೋಡು ಭಾಗದ ಅಪರಾಧ ಸುದ್ದಿಗಳು


Team Udayavani, Jun 27, 2019, 5:55 AM IST

Crime-545

ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ
ಕಳವು : ಕುಖ್ಯಾತ ಆರೋಪಿ ಬಂಧನ
ಕಾಸರಗೋಡು: ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ನಡೆದ ಹಲವು ಕಳವು ಪ್ರಕರಣಗಳಲ್ಲಿ ಕುಖ್ಯಾತ ಆರೋಪಿಯಾಗಿರುವ ತೃಕ್ಕರಿಪುರದ ಕೊಕ್ಕಡವು ಎಡಚ್ಚಾಕೈ ನಿವಾಸಿ ತುರುತ್ತಿ ಮಡತ್ತಿಲ್‌ ಮಣಿ ಯಾನೆ ಮಣಿಕಂಠನ್‌ (51)ನನ್ನು ಪೊಲೀಸರು ಬಂಧಿಸಿದ್ದಾರೆ.

ಈತನನ್ನು ಪಯ್ಯನ್ನೂರು ರೈಲು ನಿಲ್ದಾಣದಿಂದ ಬಂಧಿಸಲಾಗಿದೆ. ನೀಲೇಶ್ವರದ ಹೊಟೇಲೊಂದರಿಂದ 4,500 ರೂ. ಕಳವು ಮಾಡಿದ ಪ್ರಕರಣ, ಪಯ್ಯನ್ನೂರಿನಲ್ಲಿ ನಡೆದ ಕಳವು ಮೊದಲಾದ ಪ್ರಕರಣಗಳ ಆರೋಪಿಯಾಗಿದ್ದಾನೆ.

ಮೀನುಗಾರಿಕೆಗೆ ತೆರಳಿದ್ದ
ವ್ಯಕ್ತಿಯ ಶವ ಪತ್ತೆ
ಕಾಸರಗೋಡು: ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿದ್ದ ಕಾಂಞಂಗಾಡ್‌ ಒಳಿಂವಳಪ್‌ ನಿವಾಸಿ ರಾಘವನ್‌ (55) ಅವರ ಮೃತದೇಹ ಸಮುದ್ರ ದಡದಲ್ಲಿ ಬುಧವಾರ ಬೆಳಗ್ಗೆ ಪತ್ತೆಯಾಗಿದೆ.

ಜೂ. 25ರಂದು ಸಂಜೆ ಮೀನು ಹಿಡಿಯಲು ಸಮುದ್ರಕ್ಕೆ ತೆರಳಿದ್ದರು. ದಡದಲ್ಲಿ ನಿಂತು ರಾತ್ರಿ 11 ಗಂಟೆಯ ವರೆಗೆ ಮೀನು ಹಿಡಿಯುತ್ತಿದ್ದರು. ಆದರೆ ಬುಧವಾರ ಬೆಳಗ್ಗೆ ಅವರ ಮೃತದೇಹ ದಡದಲ್ಲಿ ಪತ್ತೆಯಾಯಿತು. ಸಾವಿಗೆ ಕಾರಣ ತಿಳಿದು ಬಂದಿಲ್ಲ.

ಮದ್ಯ ಸಹಿತ ಬಂಧನ
ಅಡೂರು: ಅಬಕಾರಿ ದಳ ನಡೆಸಿದ ಕಾರ್ಯಾ ಚರಣೆಯಲ್ಲಿ 180 ಮಿಲ್ಲಿಯ 28 ಪ್ಯಾಕೆಟ್‌ ವಿದೇಶಿ ಮದ್ಯ ವಶಪಡಿಸಿಕೊಂಡಿದ್ದು, ಈ ಸಂಬಂಧ ಅಡೂರು ನಿವಾಸಿ ಚಂದ್ರ (36)ನನ್ನು ಬಂಧಿಸಿದ್ದಾರೆ.

ಬೈಕ್‌ ಕಳವು
ಪೆರ್ಲ: ಅಮೆಕ್ಕಳ ಪರ್ಪಕರಿಯದ ಪ್ರಶಾಂತ ಪೈ ಅವರ ಬೈಕ್‌ ಕಳವಿಗೀಡಾಗಿದೆ. ಜೂ. 24ರಂದು ರಾತ್ರಿ ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್‌ 25ರಂದು ಬೆಳಗ್ಗೆ ನಾಪತ್ತೆಯಾಗಿತ್ತು. ಈ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ.

ಪೋಕೊÕà ಪ್ರಕರಣ : ಆರೋಪಿಯ
ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಕಾಸರಗೋಡು: ಬಾಲಕಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಕರಣದ ಆರೋಪಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ಕಾಸರಗೋಡು ಜಿಲ್ಲಾ ಪ್ರಿನ್ಸಿಪಲ್‌ ಸೆಶನ್ಸ್‌ ನ್ಯಾಯಾಲಯ ತಿರಸ್ಕರಿಸಿ ಆತನಿಗೆ ಜಾಮೀನು ನಿರಾಕರಿಸಿದೆ.

ಚೆಂಗಳ ನೆಕ್ರಾಜೆ ವೆಳ್ಳಾರ್ಮ ನಿವಾಸಿ ಹಾಗು ಆಟೋ ರಿಕ್ಷಾ ಚಾಲಕನಾಗಿರುವ ಇಕ್ಬಾಲ್‌ (32)ಗೆ ನಿರೀಕ್ಷಣಾ ಜಾಮೀನು ತಿರಸ್ಕರಿಸಿದೆ.

ಘಟನೆ ವಿವರ
2019ರ ಜೂ. 6ರಂದು ಆರೋಪಿ ಇಕ್ಬಾಲ್‌ನ ಆಟೋ ರಿಕ್ಷಾದಲ್ಲಿ ಪ್ರಯಾಣಿಸಿದ 15, 12 ಮತ್ತು 9 ವರ್ಷ ಪ್ರಾಯದ ಮೂವರು ಬಾಲಕಿಯರು ಚೂರಿಪಳ್ಳದಲ್ಲಿ ಇಳಿದು ರಿಕ್ಷಾದ ಬಾಡಿಗೆ ಹಣ ನೀಡುವ ವೇಳೆ ಅವರೊಂದಿಗೆ ಅನುಚಿತ ರೀತಿಯಲ್ಲಿ ವರ್ತಿಸಿದ ದೂರಿನಂತೆ ಬದಿಯಡ್ಕ ಪೊಲೀಸರು ಪೋಕೊÕà ಕೇಸು ದಾಖಲಿಸಿದ್ದರು.

ಮದ್ಯ ಸಹಿತ ಬಂಧನ
ಬಂದಡ್ಕ: 95 ಪ್ಯಾಕೆಟ್‌ ವಿದೇಶಿ ಮದ್ಯ ಸಹಿತ ಮಾಣಿಮೂಲೆ ನಿವಾಸಿ ಕೃಷ್ಣಪ್ಪ ಪಿ.ಬಿ. (47)ನನ್ನು ಅಬಕಾರಿ ದಳ ಬಂಧಿಸಿದೆ. ಬಂದಡ್ಕದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಸ್ಕೂಟರ್‌ನಿಂದ ಮದ್ಯವನ್ನು ವಶಪಡಿಸಲಾಯಿತು.

ಟಯರ್‌ ರಿಸೋಲಿಂಗ್‌
ಘಟಕ ಬೆಂಕಿಗಾಹುತಿ
ಉಪ್ಪಳ: ಪೆರಿಂಗಡಿ ಕೋಲಾರಗುಡ್ಡೆ ನಿವಾಸಿ ಮಾಧವ ಅವರ ಟಯರ್‌ ರಿಸೋಲಿಂಗ್‌ ಘಟಕ ಬೆಂಕಿಗಾಹುತಿ ಯಾಗಿದೆ. ಯಂತ್ರ ಸಹಿತ ವಿವಿಧ ಸಾಮಗ್ರಿಗಳು ಉರಿದು ನಾಶವಾಗಿದೆ.

ಇವರ ಮನೆಗೆ ತಾಗಿ ಕೊಂಡಿರುವ ಈ ಘಟಕ ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ನಿಂದ ಬೆಂಕಿ ತಗಲಿರಬೇಕೆಂದು ಶಂಕಿಸಲಾಗಿದೆ. ಬೆಂಕಿ ಹೆಂಚು ಹಾಕಿದ ಮನೆಯ ಒಂದು ಭಾಗಕ್ಕೂ ಹರಡಿದೆ. ಉಪ್ಪಳದ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಆರಿಸಿತು.

ಮುತ್ತಲಿಬ್‌ ಕೊಲೆಪ್ರಕರಣ : ಮಂಜೇಶ್ವರ ಇನ್‌ಸ್ಪೆಕ್ಟರ್‌ಗೆ
ಶೋಕಾಸ್‌ ನೋಟಿಸ್‌
ಕಾಸರಗೋಡು: ಉಪ್ಪಳ ಕೋಡಿಬೈಲು ಮಣ್ಣಂಗುಳಿ ಮೈದಾನ ಬಳಿ ನಿವಾಸಿ ಎ.ಪಿ. ಅಬ್ದುಲ್ಲ ಅವರ ಪುತ್ರ ಅಬ್ದುಲ್‌ ಮುತ್ತಲಿಬ್‌ (38) ಕೊಲೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಹಾಜರಾಗದ ಸಾಕ್ಷಿದಾರ ಮಂಜೇಶ್ವರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ಗೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದೆ.

ವಿದ್ಯುತ್‌ ಶಾಕ್‌ : ಮಹಿಳೆ ಸಾವು
ಹೊಸದುರ್ಗ: ಮನೆಯೊಳಗೆ ವಿದ್ಯುತ್‌ ಶಾಕ್‌ನಿಂದ ನೀಲೇಶ್ವರ ಕರಿಂದಳ ಕುಂಬಳಪಳ್ಳಿ ನಿವಾಸಿ ಕಾತ್ಯಾìಯಿನಿ (68) ಅವರು ಸಾವಿಗೀಡಾದರು.

ಟಾಪ್ ನ್ಯೂಸ್

1-horoscope

Daily Horoscope: ವಧೂವರಾನ್ವೇಷಿಗಳಿಗೆ ಯಶಸ್ಸಿನ ಭರವಸೆ, ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ

Child-care

Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Donald-Trumph

Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-horoscope

Daily Horoscope: ವಧೂವರಾನ್ವೇಷಿಗಳಿಗೆ ಯಶಸ್ಸಿನ ಭರವಸೆ, ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ

Child-care

Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.