ಕಾಸರಗೋಡು ಭಾಗದ ಅಪರಾಧ ಸುದ್ಧಿಗಳು


Team Udayavani, Aug 5, 2019, 5:20 AM IST

Crime-545

ಮುಂಬಯಿಗೆ ಕೆಲಸಕ್ಕೆಂದು
ಹೋಗಿದ್ದ ಯುವಕ ನಾಪತ್ತೆ
ಕಾಸರಗೋಡು: ಒಂದೂವರೆ ವರ್ಷ ಹಿಂದೆ ಕೆಲಸಕ್ಕಾಗಿ ಮುಂಬಯಿಗೆ ಹೋಗಿದ್ದ ಕೋಟೆಕಣಿ ನಿವಾಸಿ ದಾಮೋದರ ಅವರ ಪುತ್ರ ದೀಪಕ್‌(25) ನಾಪತ್ತೆಯಾಗಿದ್ದಾನೆಂದು ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ.

2018 ಫೆಬ್ರವರಿ 5 ರಂದು ದೀಪಕ್‌ ಮುಂಬಯಿಯ ಜೆಟ್‌ ಏರ್‌ವೆàಸ್‌ನಲ್ಲಿ ಕೆಲಸ ದೊರಕಿರುವುದಾಗಿ ತಿಳಿಸಿ ಮನೆಯಿಂದ ತೆರಳಿದ್ದನು. ಆರು ತಿಂಗಳು ತರಬೇತಿ ಇರುವುದಾಗಿಯೂ ಫೋನ್‌ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗಲಾರೆನೆಂದು ತಿಳಿಸಿದ ಹಿನ್ನೆಲೆಯಲ್ಲಿ ಮನೆಯವರು ಸಂಪರ್ಕಿಸಿರಲಿಲ್ಲ. ಅನಂತರ ಸಂಪರ್ಕಿಸಲು ಪ್ರಯತ್ನಿಸಿದಾಗ ಫೋನ್‌ ಕರೆ ಸ್ವೀಕರಿಸುತ್ತಿಲ್ಲವೆಂದೂ, ಪುತ್ರನ ಕುರಿತು ಯಾವುದೇ ಮಾಹಿತಿ ಇಲ್ಲವೆಂದು ತಂದೆ ದಾಮೋದರನ್‌ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹಲ್ಲೆ ಪ್ರಕರಣ : ಕೇಸು ದಾಖಲು
ಉಪ್ಪಳ: ಬೈಕ್‌ ತಡೆದು ಸವಾರ ಬಾಯಾರು ಸೊಸೈಟಿ ಬಳಿ ನಿವಾಸಿ ಮಂಗಳೂರಿನಲ್ಲಿ ಬ್ಯಾಂಕ್‌ ಉದ್ಯೋಗಿಯಾಗಿರುವ ಮಂಜುನಾಥ ಭಟ್‌ ಯು.ಎಸ್‌. (33) ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕೈಕಂಬದ ಆಟೋ ಚಾಲಕ ದೀಪು (35) ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಆ.2 ರಂದು ರಾತ್ರಿ 8 ಗಂಟೆಗೆ ಸೋಂಕಾಲು ಪರಿಸರದಲ್ಲಿ ಹಲ್ಲೆ ಮಾಡಿದ ಘಟನೆ ನಡೆದಿತ್ತು. ಗಾಯಾಳು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

25 ಸಾವಿರ ರೂ. ಅಪಹರಣ : ಕೇಸು ದಾಖಲು
ಬದಿಯಡ್ಕ: ಬ್ಲಾ ಕ್‌ ಮೈಲ್‌ಗೊಳಿಸಿ 25 ಸಾವಿರ ರೂಪಾಯಿ ಅಪಹರಿಸಿ, ಅನಂತರ ಇನ್ನಷ್ಟು ಹಣಕ್ಕೆ ಬೇಡಿಕೆಯೊಡ್ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಗ್ರಾಮಾಧಿಕಾರಿ ನೀಡಿದ ದೂರಿನಂತೆ ಯುವಕನ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ.

ಬೇಳ ವಿಲೇಜ್‌ ಆಫೀಸರ್‌ ಕೊಲ್ಲಂಗಾನದ ನೋಯೆಲ್‌ ರೋಡ್ರಿಗಸ್‌ ನೀಡಿದ ದೂರಿನಂತೆ ನೆಲ್ಲಿಕಟ್ಟೆ ಸಾಲೆತ್ತಡ್ಕದ ಕ್ವಾರ್ಟರ್ಸ್‌ ನಲ್ಲಿ ವಾಸಿಸುವ ಸತೀಶನ್‌ ಯಾನೆ ಉದಯನ ವಿರುದ್ಧ ಕೇಸು ದಾಖಲಿಸಲಾಗಿದೆ.

ಘಟನೆಯ ಕುರಿತು ಪೊಲೀಸರು ನೀಡಿದ ಮಾಹಿತಿ : ಸ್ವಂತವಾಗಿ ಸ್ಥಳವಿಲ್ಲದ ಸತೀಶನ್‌ ಬೇಳ ವಿಲೇಜ್‌ ಆಫೀಸ್‌ನಲ್ಲಿ ಅರ್ಜಿ ಸಲ್ಲಿಸಿದ್ದ. ಸ್ಥಳವಿಲ್ಲದವರಿಗೆ ಮನೆ ನಿರ್ಮಿಸಲು ಸರಕಾರ ಸ್ಥಳ ನೀಡುವ ಯೋಜನೆ ಪ್ರಕಾರ ಅರ್ಜಿ ಸಲ್ಲಿಸಲಾಗಿತ್ತು. ಸತೀಶನ್‌ನ ಬೆನ್ನಲ್ಲೇ ಅರ್ಜಿ ಸಲ್ಲಿಸಿದವರಿಗೆ ಸ್ಥಳ ಲಭಿಸಿದರೂ ಸತೀಶನ್‌ನ ಅರ್ಜಿಯನ್ನು ಪರಿಗಣಿಸಿರಲಿಲ್ಲ. ಈ ಬಗ್ಗೆ ಗ್ರಾಮ ಕಚೇರಿಗೆ ನೇರವಾಗಿ ಬಂದು ವಿಚಾರಿಸಿದರೂ ಸೂಕ್ತ ಪ್ರತಿಕ್ರಿಯೆ ಲಭಿಸಿಲ್ಲ.

ತನಗೆ ಸ್ಥಳ ಲಭಿಸದ ಬಗ್ಗೆ ಸತೀಶನ್‌ ಸಂಬಂಧಿಯಾದ ಮಹಿಳೆಯಲ್ಲಿ ತಿಳಿಸಿದ್ದನು. ಪ್ರಸ್ತುತ ಮಹಿಳೆ ವಿಲೇಜ್‌ ಆಫೀಸರ್‌ಗೆ ಫೋನ್‌ ಕರೆ ಮಾಡಿ ಸ್ಥಳ ನೀಡದುದರ ಕಾರಣ ಕೇಳಿದ್ದಾರೆ. ಈ ವೇಳೆ ಸತೀಶನ್‌ ಬಗ್ಗೆ ಕೆಟ್ಟ ರೀತಿಯಲ್ಲಿ ವಿಲೇಜ್‌ ಆಫೀಸರ್‌ ಪ್ರತಿಕ್ರಿಯಿಸಿದ್ದಾರೆ. ಫೋನ್‌ ಕರೆ ಮಾಡಿದ ಮಹಿಳೆ ಸಂಭಾಷಣೆಯನ್ನು ರೆಕಾರ್ಡ್‌ ಮಾಡಿ ಅದನ್ನು ಸತೀಶನ್‌ಗೆ ತಿಳಿಸಿದ್ದಾರೆ. ಅನಂತರ ವಿಲೇಜ್‌ ಆಫೀಸ್‌ಗೆ ಬಂದು ಸತೀಶನ್‌ ತನ್ನ ಕುರಿತು ಕೆಟ್ಟ ರೀತಿಯಲ್ಲಿ ಮಾತನಾಡಿರುವುದನ್ನು ರೆಕಾರ್ಡ್‌ ಮಾಡಲಾಗಿದೆಯೆಂದೂ, ಅದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದು ಬಿಡುವುದು ಬೇಡವೆಂದಾದರೆ ಒಂದು ಲಕ್ಷ ರೂ. ನೀಡಬೇಕೆಂದು ತಿಳಿಸಿದ್ದಾನೆ.

ಇದರಂತೆ 25 ಸಾವಿರ ರೂ. ಆ.1 ರಂದು ಹಸ್ತಾಂತರಿಸಲಾಯಿತು. ಎರಡರಂದು ಮತ್ತೆ ವಿಲೇಜ್‌ ಆಫೀಸ್‌ಗೆ ಬಂದು ಸತೀಶನ್‌ ಬಾಕಿ ಮೊತ್ತ ಕೇಳಿದ್ದಾನೆ. ಆದರೆ ಹಣ ನೀಡದುದರಿಂದ ಕರ್ತವ್ಯಕ್ಕೆ ಅಡ್ಡಿಪಡಿಸಿ, ಬೆದರಿಕೆಯೊಡ್ಡಿದ್ದಾನೆ. ಈ ದೂರಿನಂತೆ ಕೇಸು ದಾಖಲಿಸಿರುವುದಾಗಿಯೂ, ಇದರ ಸತ್ಯಾಂಶವನ್ನು ಸಮಗ್ರ ತನಿಖೆ ನಡೆಸುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.

ಮಿನಿಟ್ಸ್‌ ಹರಿದು ನಾಶ
ಜಾಮೀನು ರಹಿತ ಕೇಸು
ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್‌ ಕೊಡಿಯಮ್ಮೆ ವಾರ್ಡ್‌ ಗ್ರಾಮ ಸಭೆಯಲ್ಲಿ ಕ್ಷುಪಿತರಾದ ಸ್ಥಳೀಯರು ಸಭೆಯ ಮಿನಿಟ್ಸ್‌ ಹರಿದು ನಾಶಗೊಳಿಸಿದ ಘಟನೆಗೆ ಸಂಬಂಧಿಸಿ 9 ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ.
ಕುಂಬಳೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಕೆ.ಎಲ್‌.ಪುಂಡರೀಕಾಕ್ಷ ಅವರು ನೀಡಿದ ದೂರಿನಂತೆ ಪಳ್ಳತ್ತಮಾರ್‌ನ ಜಲೀಲ್‌, ಚತ್ರಂಪಳ್ಳದ ಜಾಫರ್‌, ಕೊಡಿಯಮ್ಮೆಯ ಅನ್ಸಾರ್‌, ಊಜಾರಿನ ಫೈಜಲ್‌ ಸಹಿತ ಕಂಡರೆ ಪತ್ತೆ ಹಚ್ಚಬಹುದಾದ 9 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ.

ವಾಹನಗಳಿಗೆ, ಸಾರ್ವಜನಿಕರಿಗೆ
ಸಂಚಾರಕ್ಕೆ ತಡೆ : 7 ಮಂದಿಗೆ ದಂಡ
ಕಾಸರಗೋಡು: 2018ರ ಸೆ. 29ರಂದು ಚೆಂಬರಿಕ ಖಾಝಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ನಗರದ ಹಳೆ ಬಸ್‌ ನಿಲ್ದಾಣ ಪರಿಸರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದಾಗ ರಸ್ತೆಯಲ್ಲಿ ವಾಹನಗಳ ಮತ್ತು ಸಾರ್ವಜನಿಕರಿಗೆ ಸಂಚಾರಕ್ಕೆ ಅಡಚಣೆ ಮಾಡಿದ ಆರೋಪದಂತೆ 7 ಮಂದಿಯ ವಿರುದ್ಧ ಕಾಸರಗೋಡು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ(1) ತಲಾ 5,000 ರೂ. ನಂತೆ ದಂಡ ವಿಧಿಸಿ ತೀರ್ಪು ನೀಡಿದೆ.

ಗಾಂಜಾ ಪ್ರಕರಣ :
ಇಬ್ಬರಿಗೆ 10 ಸಾವಿರ ರೂ. ದಂಡ
ಕಾಸರಗೋಡು: ಹೊಸಂಗಡಿ ಆನೆಕಲ್ಲು ರಸ್ತೆ ಬಳಿಯಿಂದ 2018 ಸೆ.12 ರಂದು ಕುಂಬಳೆ ರೇಂಜ್‌ನ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 36 ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಮೂಡಂಬೈಲ್‌ ಕಳವಯಲಿನ ಬಿಸ್ಮಿಲ್ಲಾ ಮಂಜಿಲ್‌ನ ಮೊಹಮ್ಮದ್‌ ಮುಸ್ತಫಾ (21)ನಿಗೆ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್‌ ನ್ಯಾಯಾಲಯ(ಪ್ರಥಮ) ಹತ್ತು ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಅದೇ ರೀತಿ 2019 ಫೆ.20 ರಂದು ಕುಂಬಳೆ ಪೇಟೆಯಲ್ಲಿ 50 ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ವೆಳ್ಳರಿಕುಂಡ್‌ ಪರಪ್ಪ ಕನಕಪಳ್ಳಿಯ ಅಬ್ಟಾಸ್‌ ಎಂ(45)ಗೆ ಇದೇ ನ್ಯಾಯಾಲಯ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಟಾಪ್ ನ್ಯೂಸ್

1-sham

Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್‌ ಮೂಲದವರು

INDIA ಕೂಟದ ನಾಯಕತ್ವ ಕಾಂಗ್ರೆಸ್‌ಗೆ ಬೇಡ: ಮಣಿಶಂಕರ್‌ ಅಯ್ಯರ್‌

INDIA ಕೂಟದ ನಾಯಕತ್ವ ಕಾಂಗ್ರೆಸ್‌ಗೆ ಬೇಡ: ಮಣಿಶಂಕರ್‌ ಅಯ್ಯರ್‌

ಪರೀಕ್ಷಾ ಫಾರಂ ಮೇಲೆ ಜಿಎಸ್‌ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ

GST: ಪರೀಕ್ಷಾ ಫಾರಂ ಮೇಲೆ ಜಿಎಸ್‌ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ

JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ

JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ

Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್‌ಡಿಎ ಸ್ಪರ್ಧೆ: ಬಿಜೆಪಿ

Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್‌ಡಿಎ ಸ್ಪರ್ಧೆ: ಬಿಜೆಪಿ

Hindu Temple: ಸಂಭಲ್‌ ಬಳಿಕ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ

Hindu Temple: ಸಂಭಲ್‌ ಬಳಿಕ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ

Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್‌ ವಶದಲ್ಲಿ ವ್ಯಕ್ತಿ ಕೊ*ಲೆ

Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್‌ ವಶದಲ್ಲಿ ವ್ಯಕ್ತಿ ಕೊ*ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-sham

Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್‌ ಮೂಲದವರು

INDIA ಕೂಟದ ನಾಯಕತ್ವ ಕಾಂಗ್ರೆಸ್‌ಗೆ ಬೇಡ: ಮಣಿಶಂಕರ್‌ ಅಯ್ಯರ್‌

INDIA ಕೂಟದ ನಾಯಕತ್ವ ಕಾಂಗ್ರೆಸ್‌ಗೆ ಬೇಡ: ಮಣಿಶಂಕರ್‌ ಅಯ್ಯರ್‌

ಪರೀಕ್ಷಾ ಫಾರಂ ಮೇಲೆ ಜಿಎಸ್‌ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ

GST: ಪರೀಕ್ಷಾ ಫಾರಂ ಮೇಲೆ ಜಿಎಸ್‌ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ

JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ

JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ

puttige-6-

Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.