![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Jun 20, 2023, 5:26 AM IST
ಬೈಕ್ ಅಪಘಾತ : ವಿದ್ಯಾರ್ಥಿಯ ಸಾವು
ಕುಂಬಳೆ: ಇಲ್ಲಿಗೆ ಸಮೀಪದ ಪೆರ್ವಾಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್‌ಗೆ ಢಿಕ್ಕಿ ಹೊಡೆದು ಬೈಕ್ ಸವಾರ ವಿದ್ಯಾರ್ಥಿ ಸಾವಿಗೀಡಾದ ಘಟನೆ ನಡೆದಿದೆ.
ಬೈಕ್ ಅಪಘಾತಕ್ಕೀಡಾಗಿ ಶಿರಿಬಾಗಿಲು ನೀರಾಳ ನಿವಾಸಿ ಸದಾಶಿವ ಅವರ ಪುತ್ರ ಆಕಾಶ್ ಶೆಟ್ಟಿ(19) ಸಾವಿಗೀಡಾದರು. ಡಿವೈಡರ್‌ಗೆ ಬೈಕ್ ಢಿಕ್ಕಿ ಹೊಡೆದು ಮಗುಚಿ ಬಿದ್ದು ಗಂಭೀರ ಗಾಯಗೊಂಡ ಆಕಾಶ್ ಶೆಟ್ಟಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಯಿತ್ತಾದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಆಕಾಶ್ ಶೆಟ್ಟಿ ಪೆರಿಯ ಪಾಲಿಟೆಕ್ನಿಕ್‌ನ ವಿದ್ಯಾರ್ಥಿಯಾಗಿದ್ದರು.
ನೇಣು ಬಿಗಿದು ಯುವಕ ಆತ್ಮಹತ್ಯೆ
ಕಾಸರಗೋಡು: ವಿದ್ಯಾನಗರ ಕೋಪಾ ಚಾಲಕುನ್ನು ನಿವಾಸಿ ಅಬ್ದುಲ್ ಶುಕೂರ್ (33) ಅವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮರಳು ಸಾಗಾಟ : ಲಾರಿ ವಶಕ್ಕೆ
ಕುಂಬಳೆ: ಹೊಳೆಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಕುಂಬಳೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಲಾರಿಯ ಚಾಲಕ ಪೈವಳಿಕೆಯ ಅಬ್ದುಲ್ ಅಸೀಸ್(34) ನನ್ನು ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡಿನಿಂದ ಕಳವುಗೈದ ಬೈಕ್ ಉಪೇಕ್ಷಿಸಿ ಸ್ಕೂಟರ್‌ನಲ್ಲಿ ಪರಾರಿ
ಕಾಸರಗೋಡು: ಕಾಸರಗೋಡಿನಿಂದ ಕಳವುಗೈದ ಬೈಕನ್ನು ಪಯ್ಯನ್ನೂರಿನಲ್ಲಿ ಉಪೇಕ್ಷಿಸಿ ಅಲ್ಲಿ ನಿಲ್ಲಿಸಿದ್ದ ಸ್ಕೂಟರ್‌ನಲ್ಲಿ ಕಳ್ಳ ಪರಾರಿಯಾಗಿದ್ದಾನೆ. ರಾಮಂತಳಿ ಸೆಂಟ್ರಲ್‌ನ ಕಾರ್ತಿಕ್ ಫನೀìಚರ್ ಅಂಗಡಿ ಮಾಲಕ ಕುನ್ನಾರು ನಿವಾಸಿ ಕೆ.ವೈಶಾಖ್ ಅವರ ಸ್ಕೂಟರ್ ಕಳವು ಮಾಡಲಾಗಿದೆ.
ಸ್ಕೂಟರನ್ನು ರಸ್ತೆ ಬದಿ ನಿಲ್ಲಿಸಿ ವೈಶಾಖ್ ಅಂಗಡಿಗೆ ತೆರಳಿದ್ದರು. ಹತ್ತು ನಿಮಿಷಗಳಲ್ಲಿ ಮರಳಿದಾಗ ಸ್ಕೂಟರ್ ನಾಪತ್ತೆಯಾಗಿತ್ತು. ಸ್ಕೂಟರ್ ನಿಲ್ಲಿಸಿದ್ದ ಸ್ಥಳದಲ್ಲಿ ಬೈಕನ್ನು ನಿಲ್ಲಿಸಿ ಕಳ್ಳ ಪರಾರಿಯಾಗಿದ್ದಾನೆ. ಪೊಲೀಸರು ತಲುಪಿ ಪರಿಶೀಲಿಸಿದಾಗ ಬೈಕ್ ಕಾಸರಗೋಡಿನಿಂದ ಕಳವಿಗೀಡಾದುದೆಂದು ಪತ್ತೆಯಾಯಿತು. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ರೈಲು ಢಿಕ್ಕಿ : ವೃದ್ಧನಿಗೆ ಗಾಯ
ಕುಂಬಳೆ: ಕುಂಬಳೆ ರೈಲು ನಿಲ್ದಾಣದ ಬಳಿ ಗೂಡ್ಸ್ ರೈಲು ಗಾಡಿ ಢಿಕ್ಕಿ ಹೊಡೆದು ನೀರ್ಚಾಲು ನಿವಾಸಿ ಕೃಷ್ಣನ್(85) ಗಾಯಗೊಂಡಿದ್ದಾರೆ. ಅವರನ್ನು ಕುಂಬಳೆಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಿಳೆಯರ ಕತ್ತಿನಿಂದ ಚಿನ್ನದ ಸರ ಕಸಿದು ಪರಾರಿ
ಕಾಸರಗೋಡು: ಬೇಕಲ ಮಾಂಙಾಡ್ ಅರಮಂಗಾನ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಕಾತ್ಯಾìಯಿನಿ(65) ಅವರ ಕತ್ತಿನಿಂದ ಬೈಕ್‌ನಲ್ಲಿ ಬಂದ ವ್ಯಕ್ತಿಯೋರ್ವ ಎರಡೂವರೆ ಪವನಿನ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾನೆ.
ಬೇಕಲ ಪೂಚಕ್ಕಾಡ್‌ನ ಶ್ರೀ ಮಹಾವಿಷ್ಣು ದೇವಸ್ಥಾನ ಬಳಿಯ ನಾರಾಯಣಿ (73) ಅವರ ಕತ್ತಿನಿಂದ ನಾಲ್ಕು ಪವನ್‌ನ ಚಿನ್ನದ ಸರವನ್ನು ಬೈಕ್‌ನಲ್ಲಿ ಬಂದ ವ್ಯಕ್ತಿ ಕಸಿದು ಪರಾರಿಯಾಗಲು ಯತ್ನಿಸಿದ್ದನು. ಪಳ್ಳಿಕೆರೆ ಚರುಚ್ಚುರಿ ಕಣ್ಣಂಬೈಲಿನ ಮಾಧವಿ(90) ಅವರ ಕತ್ತಿನಿಂದ ಒಂದೂವರೆ ಪವನಿನ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾನೆ. ಎಲ್ಲಾ ಪ್ರಕರಣದ ಬಗ್ಗೆ ಪೊಲೀಸರು ಕೇಸು ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.
ಎಂ.ಡಿ.ಎಂ.ಕೆ. ಬಳಕೆ : ಮೂವರ ಬಂಧನ
ಉಪ್ಪಳ: ಎಂ.ಡಿ.ಎಂ.ಕೆ. ಬಳಸುತ್ತಿದ್ದ ಮೂವರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಸೋಂಕಾಲ್ ನಿವಾಸಿ ಅಬ್ದುಲ್ ಮಹಾಸ್(19)ನನ್ನು ಉಪ್ಪಳ ಬಸ್ ನಿಲ್ದಾಣ ಪರಿಸರದಿಂದ ಬಂಧಿಸಲಾಗಿದೆ. ಉಪ್ಪಳ ರೈಲು ನಿಲ್ದಾಣ ಬಳಿಯ ಮೊಹಮ್ಮದ್ ಶಹಬಾಸ್(25)ನನ್ನು ಉಪ್ಪಳ ರೈಲು ನಿಲ್ದಾಣ ರಸ್ತೆಯಿಂದ ಬಂಧಿಸಲಾಗಿದೆ. ಕಣ್ವತೀರ್ಥ ರೈಲ್ವೇ ಗೇಟ್ ಬಳಿಯ ಅಬ್ದುಲ್ ಹ್ಯಾರಿಸ್(31)ನನ್ನು ಕುಂಜತ್ತೂರು ರಸ್ತೆ ಬದಿಯಿಂದ ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಯುವಕನಿಗೆ ಹಲ್ಲೆ
ಕುಂಬಳೆ: ಪೆರಿಂಗಡಿ ನಿವಾಸಿ ಮೊಹಮ್ಮದ್ ಶರೀಫ್(30) ಅವರಿಗೆ ನಯಾಬಜಾರ್‌ನಲ್ಲಿ ಅದಿಲ್ ಅಲಿ ಸಹಿತ ನಾಲ್ವರ ತಂಡ ಹಲ್ಲೆ ಮಾಡಿದ ಘಟನೆ ನಡೆದಿದೆ. ಪೂರ್ವ ದ್ವೇಷ ಹಲ್ಲೆಗೆ ಕಾರಣವೆಂದು ಗಾಯಾಳು ತಿಳಿಸಿದ್ದಾರೆ. ಪೊಲೀಸರಿಗೆ ದೂರು ನೀಡಲಾಗಿದೆ.
ನೇಣು ಬಿಗಿದು ಯುವಕ ಆತ್ಮಹತ್ಯೆ
ಕಾಸರಗೋಡು: ಬೇಕಲ ಪಾಕಂ ಕರುವಕ್ಕೋಡು ನಿವಾಸಿ ಕೃಷ್ಣನ್ ಅವರ ಪುತ್ರ ಸತೀಶ್ ಕುಮಾರ್(33) ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.