ಕಾಸರಗೋಡು ಭಾಗದ ಅಪರಾಧ ಸುದ್ದಿಗಳು
Team Udayavani, Jun 4, 2019, 6:00 AM IST
ಲಾರಿ-ಬೈಕ್ ಢಿಕ್ಕಿ : ಟೈಲರ್ ಸಾವು
ಹೊಸದುರ್ಗ: ಕೊವ್ವಲ್‌ಪಳ್ಳಿಯಲ್ಲಿ ಜೂ.2 ರಂದು ರಾತ್ರಿ 8.30ಕ್ಕೆ ಲಾರಿ-ಬೈಕ್ ಢಿಕ್ಕಿ ಹೊಡೆದು ಬೈಕ್ ಸವಾರ, ವೆಳ್ಳಿಕೋತ್ ಪಣಿಕ್ಕರ್ ವೀಟಿಲ್ ನಿವಾಸಿ ಪಿ. ಶಶಿ (50) ಸಾವಿಗೀಡಾದರು. ಮೃತರು ಅಜಾನೂರು ಇಕ್ಬಾಲ್ ಜಂಕ್ಷನ್‌ನಲ್ಲಿ ಟೈಲರಿಂಗ್ ವೃತ್ತಿ ನಡೆಸುತ್ತಿದ್ದರು.
ಮನೆಯಿಂದ ಕಳವು
ಹೊಸದುರ್ಗ: ಅಂಬಲತ್ತರ ಮೂರನೇ ಮೈಲಿನಲ್ಲಿ ವಿನೋದ್ ಕುಮಾರ್ ಅವರ ಮನೆಯಿಂದ 25 ಸಾವಿರ ರೂ. ಕಳವು ಮಾಡಲಾಗಿದೆ ಎಂದು ಅಂಬತ್ತರ ಪೊಲೀಸರಿಗೆ ದೂರು ನೀಡಲಾಗಿದೆ. ಮನೆಯವರು ಕಾಂಞಂಗಾಡ್ ಪೇಟೆಗೆ ಹೋಗಿದ್ದಾಗ ಮನೆಯಿಂದ ಕಳವಾಗಿದೆ. ಈ ಬಗ್ಗೆ ಅಂಬಲತ್ತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುಂಜಾಗ್ರತೆ: ಮೂವರ ಬಂಧನ
ಕಾಸರಗೋಡು: ನಗರದ ವಿವಿಧ ಪ್ರದೇಶಗಳಿಂದ ಮುಂಜಾಗ್ರತಾ ಕ್ರಮವಾಗಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಬಿಗ್‌ಬಜಾರ್ ಪರಿಸರದಿಂದ ಪೆರುಂಬಳದ ಸಂತೋಷ್ ಕುಮಾರ್ (42), ಭಗವತಿನಗರದಿಂದ ಮೊಗ್ರಾಲ್‌ಪುತ್ತೂರಿನ ಶೋಭಿತ್(28) ಮತ್ತು ಅಜಯ್ (30)ನನ್ನು ಬಂಧಿಸಿದ್ದಾರೆ.
ನಕಲಿ ದಾಖಲೆಪತ್ರ ತಯಾರಿಸಿ ಸ್ಥಳ
ಮಾರಾಟ : ಆರು ಮಂದಿ ವಿರುದ್ಧ ಕೇಸು ದಾಖಲು
ಮುಳ್ಳೇರಿಯ: ಸ್ಥಳದ ಮಾಲಕನಿಗೆ ತಿಳಿಯದೆ ನಕಲಿ ದಾಖಲೆಪತ್ರಗಳನ್ನು ತಯಾರಿಸಿ ಸ್ಥಳವನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆದೂರು ಪೊಲೀಸರು ಆರು ಮಂದಿ ವಿರುದ್ಧ ಕೇಸು ದಾಖಲಿಸಿದ್ದಾರೆ.
ಕೋಟೂರು ನಿವಾಸಿ ಜಯಪ್ರಕಾಶ್ ನೀಡಿದ ದೂರಿನಂತೆ ಶ್ರೀಧರ, ವೇಣು, ಬಶೀರ್, ಅಹಮ್ಮದ್, ವಿನೋದ್, ಸುನಿಲ್ ವಿರುದ್ಧ ಕೇಸು ದಾಖಲಿಸಲಾಗಿದೆ. ಮುಳ್ಳೇರಿಯದಲ್ಲಿರುವ ಸ್ಥಳವನ್ನು ಶ್ರೀಧರ ಹಾಗೂ ವೇಣು ಸೇರಿ ನಕಲಿ ದಾಖಲೆಪತ್ರ ತಯಾರಿಸಿ ಬಶೀರ್ ಮತ್ತು ಅಹಮ್ಮದ್‌ಗೆ ಮಾರಾಟ ಮಾಡಿದ್ದಾಗಿಯೂ, ಅದಕ್ಕೆ ವಿನೋದ್ ಮತ್ತು ಸುನಿಲ್ ಸಹಾಯವೊದಗಿಸಿದ್ದಾಗಿ ದೂರು ನೀಡಲಾಗಿತ್ತು.
ಗಾಂಜಾ ಸಹಿತ ಬಂಧನ
ಮುಳ್ಳೇರಿಯ: ಐವತ್ತು ಗ್ರಾಂ ಗಾಂಜಾ ಸಹಿತ ಮುಳ್ಳೇರಿಯ ಬಳಿಯ ಪಾರ್ಥಕೊಚ್ಚಿ ನಿವಾಸಿ ಸಚಿನ್(24)ನನ್ನು ಮುಳ್ಳೇರಿಯ ಅಬಕಾರಿ ದಳ ಬಂಧಿಸಿದೆ. ಮುಳ್ಳೇರಿಯದಲ್ಲಿ ಬೈಕ್‌ನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ ಗಾಂಜಾ ಪತ್ತೆಯಾಗಿತ್ತು.
ಹಣ ಕಸಿದು ಪರಾರಿ
ಹೊಸದುರ್ಗ: ಕಾಂಞಂಗಾಡ್ ಆರಂಗಾಡಿ ತೋಯಮ್ಮಲ್‌ನ ಮೊಹಮ್ಮದ್ ಕುಂಞಿ ಮುಸ್ಲಿಯಾರ್(75) ಅವರನ್ನು ಬೈಕ್‌ನಲ್ಲಿ ಕರೆದೊಯ್ದು 18 ಸಾವಿರ ರೂ. ಕಸಿದು ಪರಾರಿಯಾದ ಘಟನೆ ನಡೆದಿದೆ. ಈ ಬಗ್ಗೆ ಹೊಸದುರ್ಗ ಪೊಲೀಸರಿಗೆ ದೂರು ನೀಡಲಾಗಿದೆ.
ಯುವಕನ ಕೊಲೆ : ವಿಚಾರಣೆ ಆರಂಭ
ಕಾಸರಗೋಡು: ಅಡೂರು ಗ್ರಾಮದ ಜಾಮಕೊಚ್ಚಿ ಮಲ್ಲಂಪಾರದ ಶಿವಪ್ಪ ಎಂ(25) ಅವರನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ ಪ್ರಕರಣದ ವಿಚಾರಣೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(ತೃತೀಯ)ದಲ್ಲಿ ಆರಂಭಗೊಂಡಿತು.ಅಡೂರು ಚಾಮಕೊಚ್ಚಿ ಮಲ್ಲಂಪಾರದ ನಿವಾಸಿಗಳಾದ ಸೋಮಶೇಖರ (26), ಜನಾರ್ದನ ಎಂ. (28), ವೆಂಕಪ್ಪ ಯಾನೆ ಅಪ್ಪಿ(32), ಸೀತಾರಾಮ ಎಂ. (32) ಮತ್ತು ಸುಬ್ರಾಯ ಎಂ. (38) ಪ್ರಕರಣದ ಆರೋಪಿಗಳಾಗಿದ್ದಾರೆ. 2013ರ ಫೆ.23 ರಂದು ಕುತ್ತಿಗೆಗೆ ಬೈರಾಸಿನಿಂದ ಬಿಗಿದು ಉಸಿರುಗಟ್ಟಿಸಿ ಪ್ರಜ್ಞಾಹೀನಗೊಳಿಸಿ ಪಕ್ಕದ ಕೆರೆಗೆ ಒಯ್ದು ನೀರಿನಲ್ಲಿ ಮುಳಗಿಸಿ ಕೊಲೆ ಮಾಡಿದ್ದಾಗಿ ಎಂ. ಹರೀಶ್ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.