Crime: ಕಾಸರಗೋಡು ಅಪರಾಧ ಸುದ್ದಿಗಳು
Team Udayavani, Aug 20, 2024, 7:57 PM IST
ವಿದ್ಯುತ್ ತಗಲಿ ಯುವಕನ ಸಾವು
ಉಪ್ಪಳ: ಮನೆಯ ಛಾವಣಿಗೆ ತಾಗಿಕೊಂಡಿದ್ದ ತೆಂಗಿನ ಮಡಲನ್ನು ಎಳೆದು ತೆಗೆಯುತ್ತಿದ್ದಂತೆ ಹೈಟೆನ್ಶನ್ ವಿದ್ಯುತ್ ತಂತಿಯಿಂದ ವಿದ್ಯುತ್ ತಗಲಿ ಮಂಜೇಶ್ವರ ಗೋವಿಂದ ಪೈ ಕಾಲೇಜು ರಸ್ತೆಯ ಹೊಸಬೆಟ್ಟು ನಿವಾಸಿ ರಾಮಚಂದ್ರ ಅವರ ಪುತ್ರ ಯಶವಂತ್ (23) ಮೃತಪಟ್ಟಿದ್ದಾರೆ.
ಯಶವಂತ್ ಉಪ್ಪಳದ ಪೆಟ್ರೋಲ್ ಬಂಕ್‌ನಲ್ಲಿ ಉದ್ಯೋಗಿಯಾಗಿದ್ದು, ಕೆಲಸಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದಂತೆ ಮನೆಯ ಛಾವಣಿಗೆ ತೆಂಗಿನ ಮಡಲು ಬಾಗಿ ನಿಂತಿರುವುದನ್ನು ಕಂಡರು. ಅದನ್ನು ತೆಗೆದೇ ಕೆಲಸಕ್ಕೆ ಹೋಗೋಣವೆಂದುಕೊಂಡು ಮೇಲಂತಸ್ತಿಗೆ ಏರಿ ಮಡಲನ್ನು ತೆಗೆಯುತ್ತಿದ್ದಂತೆ ಎಚ್.ಟಿ. ವಿದ್ಯುತ್ ಲೈನ್ ತಗಲಿ ಮನೆಯ ಅಂಗಳಕ್ಕೆ ಅಳವಡಿಸಿದ ಕಬ್ಬಿಣದ ಶೀಟ್‌ನ ಮೇಲೆ ಬಿದ್ದರು. ಮನೆಯವರು ಕೂಡಲೇ ಮಂಜೇಶ್ವರದ ಆಸ್ಪತ್ರೆಗೆ ಕರೆದೊಯ್ದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯುವಕನನ್ನು ಅಪಹರಿಸಿ ಹಲ್ಲೆ
ಮುಳ್ಳೇರಿಯ: ಪ್ರಿಯತಮೆಯನ್ನು ಭೇಟಿಯಾಗಲು ಬಂದ ಯುವಕನನ್ನು ಅಪಹರಿಸಿ ಹಲ್ಲೆಗೈದ ಘಟನೆ ಆದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆ ವಿಷಯ ತಿಳಿದು ಪ್ರಿಯತಮೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಯುವತಿಯ ಸಹೋದರರ ಸಹಿತ 17 ಮಂದಿಯ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಯುವಕ ಹಾಗೂ ಯುವತಿ ಹತ್ತಿರದ ಸಂಬಂಧಿಕರಾಗಿದ್ದು, ಇಬ್ಬರೂ ಪ್ಲಸ್ ಟುನಲ್ಲಿ ಜತೆಯಾಗಿ ಕಲಿಯುತ್ತಿದ್ದರು. ಯುವಕ ಯುವತಿಯ ಮನೆಗೆ ಬಂದಿದ್ದ. ಈ ಸಮಯದಲ್ಲಿ ಯುವತಿಯ ತಾಯಿ ಮಾತ್ರವೇ ಮನೆಯಲ್ಲಿದ್ದರು. ಯುವಕ ಮನೆಗೆ ಬಂದಿರುವ ವಿಚಾರ ತಿಳಿದ ಯುವತಿಯ ಸಹೋದರರು ಆತನನ್ನು ಅಪಹರಿಸಿ ಹಲ್ಲೆ ಮಾಡಿರುವುದಾಗಿ ದೂರಲಾಗಿದೆ. ಅಲ್ಲದೆ ಮನೆಗೆ ಬೆಂಕಿ ಹಚ್ಚುವ ಬೆದರಿಕೆಯೊಡ್ಡಿರುವರೆಂದೂ ಹೇಳಲಾಗಿದೆ. ಇದೇ ಸಂದರ್ಭದಲ್ಲಿ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಂಜಾ ವಶಕ್ಕೆ ; ಮೂವರ ಬಂಧನ
ಕಾಸರಗೋಡು: ಅಬಕಾರಿ ತಂಡ ಜಿಲ್ಲೆಯ ವಿವಿಧೆಡೆಗಳಲ್ಲಿ ನಡೆಸಿದ ಕಾರ್ಯಾಚರಣೆಗಳಲ್ಲಿ ಒಟ್ಟು 6.10 ಕಿಲೋ ಗಾಂಜಾ ವಶಪಡಿಸಿಕೊಂಡು ಮೂವರನ್ನು ಬಂಧಿಸಿದೆ.
ಪನಯಾಲ್ ಗ್ರಾಮದ ಪಳ್ಳಾರಂನಲ್ಲಿ ಹೊಸದುರ್ಗ ಅಬಕಾರಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 6 ಕಿಲೋ ಗಾಂಜಾ ವಶಪಡಿಸಿಕೊಂಡು, ಈ ಸಂಬಂಧ ಪನಯಾಲ್ ತೊಂಡೋಳಿ ನಿವಾಸಿಗಳಾದ ಆಶಿಕ್ ಮತ್ತು ಹ್ಯಾರಿಸ್‌ನನ್ನು ಬಂಧಿಸಿ ಎನ್‌ಡಿಪಿಎಸ್ ಕಾನೂನು ಪ್ರಕಾರ ಕೇಸು ದಾಖಲಿಸಿದೆ. ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ.
ಚೆರ್ಲಡ್ಕದಲ್ಲಿ ಕಾಸರಗೋಡು ಅಬಕಾರಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ 10 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದು, ಈ ಸಂಬಂದ ನೆಕ್ರಾಜೆ ಬೀಟಿಯಡ್ಕದ ನಿಹಾಲ್(19)ನನ್ನು ಬಂಧಿಸಿದೆ.
ಪತ್ರ ಬರೆದಿಟ್ಟು ಯುವಕ ನಾಪತ್ತೆ
ಕುಂಬಳೆ: ಮನೆಯಲ್ಲಿ ಪತ್ರ ಬರೆದಿಟ್ಟು ಕುಬಣೂರು ನಿವಾಸಿ ಮಮ್ಮಂಞಿ ಗುರ್ಮಾ ಖಾದರ್ ಅವರ ಪುತ್ರ ರಾಸಿಕ್ (23) ನಾಪತ್ತೆಯಾಗಿದ್ದಾರೆ.
ಮಂಗಳವಾರ ಮುಂಜಾನೆ 4.30ಕ್ಕೆ ಮನೆಯವರು ಎಚ್ಚೆತ್ತು ನೋಡಿದಾಗ ರಾಸಿಕ್ ಮನೆಯಲ್ಲಿ ಕಾಣಿಸಲಿಲ್ಲ. ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಇದೇ ಸಂದರ್ಭದಲ್ಲಿ ಮನೆಯೊಳಗೆ ರಾಸಿಕ್ ಬರೆದಿಟ್ಟ ಪತ್ರವೊಂದು ಪತ್ತೆಯಾಗಿದೆ. ಅದರಲ್ಲಿ “ನನ್ನನ್ನು ಹುಡುಕಬೇಡಿ. ನಾನು ಸ್ಕೂಟರ್‌ನಲ್ಲಿ ಹೋಗುತ್ತಿದ್ದೇನೆ. ಸ್ಕೂಟರ್ ಕಾಸರಗೋಡು ಅಥವಾ ಮಂಗಳೂರಿನಲ್ಲಿರಬಹುದು’ ಎಂದು ತಿಳಿಸಲಾಗಿದೆ. ಸ್ಕೂಟರ್ ಮಂಗಳೂರು ರೈಲು ನಿಲ್ದಾಣದಲ್ಲಿ ಪತ್ತೆಯಾಗಿದೆ.
ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಸ್ ಢಿಕ್ಕಿ: ಪಾದಚಾರಿ ಸಾವು
ಕಾಸರಗೋಡು: ತೃಕ್ಕರಿಪ್ಪುರದ ಕರೋಳಂನ ಬಸ್ ತಂಗುದಾಣ ಪರಿಸರದಲ್ಲಿ ಬಸ್ ಢಿಕ್ಕಿ ಹೊಡೆದು ಸೌತ್ ತೃಕ್ಕರಿಪುರದ ಇಳಂಬಚ್ಚಿ ವಡಕ ನಿವಾಸಿ ಪಾದಚಾರಿ ಕೆ.ಎಂ. ಕುಂಞಿಕೃಷ್ಣನ್ ಸಾವಿಗೀಡಾದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಲ್ಲೆ ಪ್ರಕರಣ: ಬಂಧನ
ಕಾಸರಗೋಡು: ಪತ್ನಿಯ ತಾಯಿಯ ಮೇಲೆ ಹಲ್ಲೆ ಮಾಡಿ ಅವರ ಕೈ ಮೂಳೆ ಮುರಿದ ಪ್ರಕರಣಕ್ಕೆ ಸಂಬಂಧಿಸಿ ಹೊಸದುರ್ಗ ಕುರುವಿಳದ ಪಿ. ಶಾಜಹಾನ್(35)ನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Election: ಆಪ್ ಸೋಲಿಸಲು ಬಿಜೆಪಿ ಜತೆ ಕಾಂಗ್ರೆಸ್ ಮೈತ್ರಿ: ಕೇಜ್ರಿವಾಲ್
ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ
Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.