Kasaragod ಅಪರಾಧ ಸುದ್ದಿಗಳು
Team Udayavani, Sep 1, 2024, 8:32 PM IST
ಬಾಲಕಿ ಅಪಹರಣ: ಬಂಧನ
ಕಾಸರಗೋಡು: ಎರಡು ವರ್ಷದ ಬಾಲಕಿಯನ್ನು ಅಪಹರಿಸಿದ್ದ ಎರ್ನಾಕುಳಂ ನಿವಾಸಿ ಅನೀಶ್ ಕುಮಾರ್(49)ನನ್ನು ಕಾಸರಗೋಡು ರೈಲ್ವೇ ಪೊಲೀಸ್ ಹಾಗೂ ಆರ್‌ಪಿಎಫ್ ಬಂಧಿಸಿದೆ.
ಮಂಗಳೂರಿನ ಕಂಕನಾಡಿಯಿಂದ ಈ ಮಗುವನ್ನು ಅಪಹರಿಸಲಾಗಿತ್ತು. ಈ ಮಗುವನ್ನು ಗೋವಾದಿಂದ ಅಪಹರಿಸಲಾಗಿದೆ ಎಂದು ವಿಚಾರಣೆಯ ಸಂದರ್ಭ ಆತ ಆರಂಭದಲ್ಲಿ ಹೇಳಿದ್ದ. ಆ ಬಳಿಕ ತನ್ನ ಹೇಳಿಕೆಯನ್ನು ಬದಲಾಯಿಸಿ ಕಂಕನಾಡಿಯಿಂದ ಅಪಹರಿಸಲಾಗಿದೆ ಎಂದಿದ್ದಾನೆ.
ಗಾಂಧಿ ಧಾಂ – ನಾಗರಕೋವಿಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದ. ಈತನ ನಡವಳಿಕೆ ಕಂಡು ಸಂಶಯಿಸಿದ ಇತರ ಪ್ರಯಾಣಿಕರು ಆರ್‌ಪಿಎಫ್‌ಗೆ ಮಾಹಿತಿ ನೀಡಿದ್ದರು. ಅದರಂತೆ ಮಗು ಸಹಿತ ಈತನನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಈ ಮಗುವನ್ನು ಹೇಗೆ ಅಪಹರಿಸಲಾಯಿತು ಎಂಬ ಬಗ್ಗೆ ಯಾವುದೇ ಮಾಹಿತಿ ಈವರೆಗೂ ಲಭಿಸಿಲ್ಲ. ಹೆಚ್ಚಿನ ತನಿಖೆಯ ಬಳಿಕವಷ್ಟೇ ಸಂಪೂರ್ಣ ಮಾಹಿತಿ ಲಭಿಸಲಿದೆ. ವ್ಯಕ್ತಿ ಹಾಗೂ ಮಗುವನ್ನು ಕಂಕನಾಡಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಎರಡಂತಸ್ತಿನ ಕಟ್ಟಡ ಕುಸಿತ
ಕಾಸರಗೋಡು: ನಗರದ ಎಂ.ಜಿ. ರಸ್ತೆಯ ಹಳೆಯ ಎರಡಂತಸ್ತಿನ ಕಟ್ಟಡ ಆ. 31ರಂದು ರಾತ್ರಿ ಕುಸಿದು ಬಿದ್ದಿದೆ. ಈ ಕಟ್ಟಡದಲ್ಲಿದ್ದ ಅಂಗಡಿಗಳನ್ನು ವ್ಯಾಪಾರಿಗಳು ಮುಚ್ಚಿ ಹೋಗಿದ್ದರಿಂದ ಸಂಭವನೀಯ ದುರಂತ ತಪ್ಪಿತು.
ಹಳೆ ಬಸ್ ನಿಲ್ದಾಣ ಸಮೀಪದ ಮೀನು ಮಾರುಕಟ್ಟೆ ರಸ್ತೆಯ ಹೆಂಚು ಹಾಸಿದ ಹಳೆಯ ಕಟ್ಟಡ ಮುರಿದು ಬಿದ್ದಿದೆ. ಮಳೆಯಿಂದಾಗಿ ಎಲ್ಲ ವ್ಯಾಪಾರಿಗಳು ಬೇಗನೆ ಮನೆಗೆ ಹೋಗಿದ್ದರು. ಏಳು ಅಂಗಡಿಗಳು ಕುಸಿದು ಬಿದ್ದಿದೆ. ತರಕಾರಿ, ಒಣಗಿದ ಮೀನು ಮಾರಾಟದ ಅಂಗಡಿಗಳು ಕುಸಿದಿವೆ. ಇದರ ಸಮೀಪದ ಅಂಗಡಿಗಳು ಯಾವುದೇ ಕ್ಷಣದಲ್ಲೂ ಕುಸಿದು ಬೀಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪೊಲೀಸರು ಅತ್ತ ಸಾಗದಂತೆ ತಡೆಹಿಡಿದಿದ್ದಾರೆ. ಲಕ್ಷಾಂತರ ರೂ. ನಷ್ಟ ಅಂದಾಜಿಸಲಾಗಿದೆ.
ಕಾರು ಢಿಕ್ಕಿ: ಬೈಕ್ ಸವಾರ ಸಾವು
ಕುಂಬಳೆ: ಸೀತಾಂಗೋಳಿ ಸೂರಂಬೈಲ್‌ನಲ್ಲಿ ಕಾರು ಢಿಕ್ಕಿ ಹೊಡೆದು ಬೈಕ್ ಸವಾರ ವಸಂತ (53) ಸಾವಿಗೀಡಾದರು. ಕಾರು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ವಸಂತ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.