Kasaragod: ಅಪರಾಧ ಸುದ್ದಿಗಳು
Team Udayavani, Oct 28, 2024, 10:15 PM IST
ಹ್ಯಾಶಿಸ್ ಆಯಿಲ್ ಸಾಗಾಟ ಪ್ರಕರಣ; ಹತ್ತು ವರ್ಷ ಕಠಿನ ಸಜೆ
ಕಾಸರಗೋಡು: ಅಮಲು ಪದಾರ್ಥ ಹ್ಯಾಶಿಸ್ ಆಯಿಲ್ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಹೊಸದುರ್ಗ ಪಡನ್ನಕ್ಕಾಡ್ ಬಿಸ್ಮಿಲ್ಲಾ ಮಂಜಿಲ್‌ನ ರಿಯಾಸ್ ಎ.ಸಿ.(29)ಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(ದ್ವಿತೀಯ) ಹತ್ತು ವರ್ಷ ಕಠಿನ ಸಜೆ ಮತ್ತು ಒಂದು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸದಿದ್ದಲ್ಲಿ ಮೂರು ತಿಂಗಳು ಹೆಚ್ಚುವರಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದೆ. 2022 ಸೆ.29 ರಂದು ಬೇಕಲ ಕೋಟೆ ಸಮೀಪ ರಿಯಾಸ್‌ನನ್ನು ಬೇಕಲ ಪೊಲೀಸರು ಬಂಧಿಸಿದ್ದರು.
ಕೆರೆಗೆ ಬಿದ್ದು ಸಾವು
ಕಾಸರಗೋಡು: ಮರದ ರೆಂಬೆ ಕಡಿಯಲು ಮರಕ್ಕೆ ಹತ್ತಿದ ಬೆಳ್ಳೂರು ಕಕ್ಕೆಬೆಟ್ಟು ನಿವಾಸಿ ಬಾಬು ನಾಯ್ಕ(60) ಅವರು ಕೆರೆಗೆ ಬಿದ್ದು ಸಾವಿಗೀಡಾದರು. ಮರ ಕಡಿಯುತ್ತಿದ್ದ ಸಂದರ್ಭದಲ್ಲಿ ಆಯ ತಪ್ಪಿ ಕೆರೆಗೆ ಬಿದ್ದಿದ್ದು, ಅಗ್ನಿಶಾಮಕ ದಳ ಅವರನ್ನು ಮೇಲಕ್ಕೆತ್ತಿದರೂ, ರಕ್ಷಿಸಲು ಸಾಧ್ಯವಾಗಲಿಲ್ಲ.
ಯುವತಿಗೆ ಕಿರುಕುಳ : ಕೇಸು ದಾಖಲು
ಕಾಸರಗೋಡು: ಇಪ್ಪತ್ತರ ಯುವತಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ತಿರುವನಂತಪುರ ಆಟಿಂಗಲ್ ನಿವಾಸಿ ಶ್ಯಾಂಜಿತ್(26) ವಿರುದ್ಧ ನೀಲೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.
ಯುವಕನ ಅಪಹರಣ : ಬಂಧನ
ಕಾಸರಗೋಡು: ಚಟ್ಟಂಚಾಲ್ ಕುನ್ನಾರದ ಕೆ.ಅರ್ಶಾದ್(26) ಅವರನ್ನು ಕಾರಿನಲ್ಲಿ ಬಂದು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಆಲಂಪಾಡಿ ಅಕ್ಕರಪಳ್ಳ ನಿವಾಸಿ ಅಮೀರಲಿ(26)ನನ್ನು ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ.
ಮನೆಯಿಂದ ಕಳವು
ಕುಂಬಳೆ: ಪೆರ್ಮುದೆಯ ಹೊಟೇಲ್ ವ್ಯಾಪಾರಿ ರಾಮಕೃಷ್ಣ ಅವರ ಮನೆಯಿಂದ ಬೆಳ್ಳಿ ಆಭರಣಗಳು, 20 ಸಾವಿರ ರೂ. ನಗದು, ದಾಖಲೆ ಪತ್ರಗಳನ್ನು ಕಳವು ಮಾಡಿದ ಘಟನೆ ನಡೆದಿದೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.