Kasaragod ಅಪರಾಧ ಸುದ್ದಿಗಳು
Team Udayavani, Nov 13, 2024, 10:30 PM IST
ನೇಣು ಬಿಗಿದು ಮಹಿಳೆ ಆತ್ಮಹತ್ಯೆ
ನೀರ್ಚಾಲು: ಬೇಳ ಕುಮಾರಮಂಗಲ ದೇವಸ್ಥಾನ ಬಳಿಯ ನಿವಾಸಿ ವಾಸುದೇವ ಆಸ್ರ ಅವರ ಪತ್ನಿ ಸವಿತಾ (43) ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಲೆ ಪ್ರಕರಣ: ಬಂಧಿತನಿಗೆ ನ್ಯಾಯಾಂಗ ಬಂಧನ
ಕಾಸರಗೋಡು:ಚೆಮ್ನಾಡು ಮಾವಿಲ ಕೋಡು ಪೆರುವಳಪ್ಪಿಲ್ ನಿವಾಸಿ ಕೂಲಿ ಕಾರ್ಮಿಕ ಎಂ.ಚಂದ್ರನ್ ನಾಯರ್ (52) ಅವರನ್ನು ಕೊಲೆಗೈದ ಸಂಬಂಧ ಮೇಲ್ಪರಂಬ ಪೊಲೀಸರು ಬಂಧಿಸಿದ ಎಂ.ಗಂಗಾಧರನ್(45)ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಯು.ಕೆ.ವೀಸಾ ಭರವಸೆ; 16.8 ಲಕ್ಷ ರೂ. ವಂಚನೆ
ಕಾಸರಗೋಡು: ಯು.ಕೆ. ವೀಸಾ ಭರವಸೆ ನೀಡಿ 16,80,000 ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಚಿತ್ತಾರಿಕ್ಕಲ್ ಪೊಲೀಸರು ಇಬ್ಬರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಚಿತ್ತಾರಿಕ್ಕಲ್ನ ಜೈಸನ್ ಜೇಮ್ಸ್ ಅವರ ಪತ್ನಿ ದಿವ್ಯಾ ಪಿ.ಥೋಮಸ್ ನೀಡಿದ ದೂರಿನಂತೆ ತಳಿಪರಂಬ ನಡುವಿಲ್ ಚೊವ್ವೆàಲಿ ಕುಡಿಯಿಲ್ ಹೌಸ್ನ ಜೋಸೆಫ್(38) ಮತ್ತು ಚಿತ್ತಾರಿಕ್ಕಲ್ ಪಿಲಿಯನಾಡ್ ಹೌಸ್ನ ನಿತಿನ್ ಪಿ.ಜೋಯ್(34) ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.
ಬಾಲಕಿಗೆ ಲೈಂಗಿಕ ಕಿರುಕುಳ: ಬಂಧನ
ಕಾಸರಗೋಡು: ಇನ್ಸ್ಟಾಗ್ರಾಮ್ ಮೂಲಕ ಪರಿಚಯಗೊಂಡ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪುಲ್ಲೂರು ವೇಲೇಶ್ವರ ಭಾಗಂ ಆಲಂಕೋಟ್ ವೀಟಿಲ್ ಶ್ರೀಹರಿ(23)ಯನ್ನು ಪೊಲೀಸರು ಬಂಧಿಸಿದ್ದಾರೆ.
ಚೋಟ್ಟಾನಿಕರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಕಿಗೆ ವಿವಾಹ ಭರವಸೆ ನೀಡಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ಶ್ರೀಹರಿ ವಿರುದ್ಧ ಫೋಕ್ಸೋ ಕೇಸು ದಾಖಲಿಸಿಕೊಳ್ಳಲಾಗಿದೆ.
ಮದ್ಯ ಸಹಿತ ಬಂಧನ
ಕುಂಬಳೆ: ಕೊಯಿಪ್ಪಾಡಿ ಗ್ರಾಮದ ಕುಂಟಂಗೇರಡ್ಕದಿಂದ 3.6 ಲೀಟರ್ ಮದ್ಯ ವಶಪಡಿಸಿಕೊಂಡ ಅಬಕಾರಿ ದಳ ಈ ಸಂಬಂಧ ಶಾಂತಿಪಳ್ಳದ ಮನೋಜ್ ಕುಮಾರ್ ಕೆ.ನನ್ನು ಬಂಧಿಸಿದೆ.
ಪಾಂಡಿಯಲ್ಲಿ ಚಿರತೆ ಪತ್ತೆ?
ಅಡೂರು: ಮುಳಿಯಾರು ಪಂಚಾಯತ್ನ ಅರಣ್ಯದಲ್ಲಿ ಕಾಣಿಸಿಕೊಂಡ ಚಿರತೆಗಾಗಿ ಶೋಧ ನಡೆಯುತ್ತಿದ್ದಂತೆ ಪಾಂಡಿಯ ಭಜನ ಮಂದಿರ ಪರಿಸರದಲ್ಲಿ ಎರಡು ಚಿರತೆಗಳು ಕಂಡು ಬಂದಿರುವುದಾಗಿ ವದಂತಿ ಹರಡಿದೆ. ನ.12ರಂದು ರಾತ್ರಿ ಬೇತೂರುಪಾರಕ್ಕೆ ಹೋಗುತ್ತಿದ್ದ ಮಂದಿಗೆ ಚಿರತೆ ಕಂಡು ಬಂದಿರುವುದಾಗಿ ಹೇಳಲಾಗಿದೆ. ಚಿರತೆ ಪತ್ತೆಯಾದ ಹಿನ್ನೆಲೆಯಲ್ಲಿ ಪಾಂಡಿಯಲ್ಲಿ ಆತಂಕ ಸೃಷ್ಟಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.