Kasaragod ಅಪರಾಧ ಸುದ್ದಿಗಳು: ಎಂಡಿಎಂಎ ಸಹಿತ ವ್ಯಕ್ತಿ ಬಂಧನ
Team Udayavani, Dec 4, 2024, 10:15 PM IST
ಎಂಡಿಎಂಎ ಸಹಿತ ಬಂಧನ
ಕಾಸರಗೋಡು: ಕಾಸರಗೋಡು ಪೊಲೀಸರು ಡಿ.3 ರಂದು ರಾತ್ರಿ ಕೂಡ್ಲು ರಾಮದಾಸನಗರ ಸಮೀಪದ ಪಾರೆಕಟ್ಟೆ ತಿರುವು ರಸ್ತೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಸ್ಕೂಟರ್‌ನಲ್ಲಿ ಸಾಗಿಸಲಾಗುತ್ತಿದ್ದ 30.22 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದು, ಈ ಸಂಬಂಧ ಮುಳಿಯಾರು ಮಾಸ್ತಿಕುಂಡ್ ನಿವಾಸಿ ಅಶ್ರಫ್ ಅಹಮ್ಮದ್ ಅಬ್ದುಲ್ಲಾ ಶೇಖ್(44)ನನ್ನು ಬಂಧಿಸಿದ್ದಾರೆ. ಸ್ಕೂಟರ್ ವಶಪಡಿಸಲಾಗಿದೆ.
ಶ್ರೀಗಂಧ ಕೊರಡು ಸಹಿತ ಇಬ್ಬರ ಬಂಧನ
ಕಾಸರಗೋಡು: ಅರಣ್ಯ ಇಲಾಖೆಯ ಫ್ಲೆ$çಯಿಂಗ್ ಸ್ಕ್ವಾಡ್ ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ 130 ಕಿಲೋ ಶ್ರೀಗಂಧದ ಕೊರಡುಗಳನ್ನು ಪತ್ತೆಹಚ್ಚಿ ಹೊಸದುರ್ಗ ಮೂನಾಂ ಮೈಲ್‌ನ ಕಳತ್ತಿಂಗಾಲ್ ನಿವಾಸಿ ಪ್ರಸಾದ್ (34) ಮತ್ತು ಆತನಸಹಚರ ಮೂನಾಂಮೈಲಿ ನಶಿಬುರಾಜ್(43)ನನ್ನು ಬಂಧಿಸಲಾಗಿದೆ.
ಮದ್ಯ ಸಹಿತ ಬಂಧನ
ಕಾಸರಗೋಡು: ಕೂಡ್ಲು ರಾಮದಾಸ ನಗರದಿಂದ 3.24 ಲೀಟರ್ ಮದ್ಯ ವಶಪಡಿಸಿಕೊಂಡ ಕಾಸರಗೋಡು ಅಬಕಾರಿ ಸ್ಪೆಷಲ್ ಸ್ಕ್ವಾಡ್ ಈ ಸಂಬಂಧ ರಾಮದಾಸನಗರ ಸೂರ್ಲು ನಿವಾಸಿ ಯೋಗೀಶ್ (31)ನನ್ನು ಬಂಧಿಸಿದೆ. ಸ್ಕೂಟರ್ ವಶಪಡಿಸಿಕೊಂಡಿದೆ.
ವ್ಯಕ್ತಿ ನಾಪತ್ತೆ
ಬದಿಯಡ್ಕ: ವಿದ್ಯಾಗಿರಿ ಪಿಲಾತ್ತಡ್ಕ ನಿವಾಸಿ ಸುಕುಮಾರನ್ ಕೆ.ಎಂ.(65) ನಾಪತ್ತೆಯಾಗಿರುವುದಾಗಿ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿದೆ. ನ.21 ರಿಂದ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ನೇಣು ಬಿಗಿದು ಯುವಕ ಆತ್ಮಹತ್ಯೆ
ಕಾಸರಗೋಡು: ಬೇಡಡ್ಕ ಪಿಂಡಿಕಡವ್ ನಿವಾಸಿ ನಾರಾಯಣನ್ ಅವರ ಪುತ್ರ ಎನ್.ಅನೀಶ್(32) ರಬ್ಬರ್ ತೋಟದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೇಡಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Mahayuti: ಈ ಬಾರಿ ನಾನು ದೇವೇಂದ್ರ ಫಡ್ನವೀಸ್ ಹೆಸರು ಸೂಚಿಸಿ ಋಣ ತೀರಿಸಿದೆ: ಶಿಂಧೆ
Toll: ವರ್ಷದಲ್ಲೇ 438 ಕೋ.ರೂ. ಟೋಲ್ ಶುಲ್ಕ ಸಂಗ್ರಹ
Electricity Price Hike: ಮೂರು ವರ್ಷದ ವಿದ್ಯುತ್ ದರ ಒಂದೇ ಬಾರಿ ಏರಿಕೆ?
Puttur: ಎಪ್ರಿಲ್, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!
Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.