Kasaragod ಅಪರಾಧ ವಾರ್ತೆ; ಆನೆಯ ತುಳಿತಕ್ಕೆ ಮಾವುತ ಸಹಿತ ಇಬ್ಬರ ಸಾವು
Team Udayavani, Nov 19, 2024, 8:42 PM IST
ಕಾಸರಗೋಡು: ತಿರುವನಂತಪುರ ತಿರುಚ್ಚೆಂದೂರು ದೇವಸ್ಥಾನದಲ್ಲಿ ಆನೆಯ ತುಳಿತಕ್ಕೆ ಮಾವುತ ಸಹಿತ ಇಬ್ಬರು ಸಾವಿಗೀಡಾಗಿದ್ದಾರೆ. ತಿರುಚ್ಚೆಂದೂರು ನಿವಾಸಿ ಮಾವುತ ಉದಯ ಕುಮಾರ್(45) ಮತ್ತು ಪಾರಶಾಲೆ ನಿವಾಸಿ ಶಿಶುಪಾಲನ್(55) ಸಾವಿಗೀಡಾಗಿದ್ದಾರೆ. ತಿರುಚ್ಚೆಂದೂರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ.
ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕಾಡಿನಲ್ಲಿ ಪತ್ತೆ
ಬದಿಯಡ್ಕ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮೂಲತಃ ಮಂಗಳೂರು ಬಜ್ಪೆ ನಿವಾಸಿಯೂ, ಬದಿಯಡ್ಕ ಸಮೀಪ ಕಾಡಮನೆ ಮಾಡತ್ತಡ್ಕದಲ್ಲಿ ವಾಸಿಸುತ್ತಿದ್ದ ಕೃಷ್ಣ ನಾಯ್ಕ(65) ಅವರ ಮೃತದೇಹ ಮನೆ ಸಮೀಪದ ಕಾಡಿನಲ್ಲಿ ಪತ್ತೆಯಾಗಿದೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ದೃಷ್ಟಿದೋಷವಿದ್ದ ಅವರು ಹೃದಯ ಸಂಬಂಧ ರೋಗದಿಂದ ಬಳಲುತ್ತಿದ್ದರು. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳವಾಗಿದ್ದ ಧ್ವಜಸ್ತಂಭ ಪತ್ತೆ
ಕಾಸರಗೋಡು: ಅಣಂಗೂರಿನಲ್ಲಿ ಆರಂಭಗೊಂಡಿರುವ ಸಿಪಿಎಂ ಕಾಸರಗೋಡು ಏರಿಯಾ ಸಮ್ಮೇಳನ ನಗರದಲ್ಲಿ ಸ್ಥಾಪಿಸಲೆಂದು ಕೂಡ್ಲು ರಾಮದಾಸನಗರ ಸುರೇಂದ್ರನ್ ಸ್ಮಾರಕ ಸಂಸ್ಮರಣಾ ಮಂಟಪದ ಬಳಿ ಸಿದ್ಧಪಡಿಸಿ ಇರಿಸಲಾಗಿದ್ದ ಧ್ವಜಸ್ತಂಭ ಕಳವಾದ ಬೆನ್ನಲ್ಲೇ 500 ಮೀಟರ್ ದೂರದಲ್ಲಿ ಹಿತ್ತಿಲೊಂದರಲ್ಲಿ ಪತ್ತೆಯಾಗಿದೆ. ಧ್ವಜಸ್ತಂಭ ಕಳವಾದ ಬಗ್ಗೆ ಸಿಪಿಎಂ ಕಾಸರಗೋಡು ಏರಿಯಾ ಕಾರ್ಯದರ್ಶಿ ಕೆ.ಮೊಹಮ್ಮದ್ ಹನೀಫಾ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದರು.
ಯುವಕ ನಾಪತ್ತೆ
ಕಾಸರಗೋಡು: ತಳಂಗರೆ ಕೆಕೆಪುರದ ಅಲ್ತಾಫ್(35) ನಾಪತ್ತೆಯಾಗಿರುವುದಾಗಿ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ. ಈ ಬಗ್ಗೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶೋಧ ನಡೆಸುತ್ತಿದ್ದಾರೆ.
ಸಿಡಿಲು ಬಡಿದು ಮನೆಗೆ ಹಾನಿ
ಮಂಜೇಶ್ವರ: ಸಿಡಿಲು ಬಡಿದು ಬಂಗ್ರಮಂಜೇಶ್ವರ ನಿವಾಸಿ ಇಲೆಕ್ಟ್ರೀಶಿಯನ್ ಪದ್ಮನಾಭ ಅವರ ಮನೆ ಹಾನಿಗೀಡಾಗಿದೆ. ಮನೆಯ ಗೋಡೆ ಬಿರುಕು ಬಿಟ್ಟಿದ್ದು, ವಿದ್ಯುತ್ ಉಪಕರಣಗಳು ಉರಿದು ನಾಶಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ
Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್ ಸ್ಥಾಪನೆ: ಸಿಎಂ ಸಿದ್ದರಾಮಯ್ಯ
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
Kaup: ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಮೃತ್ಯು
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.