Kasaragod: ಮೆಟ್ರೋಲಜಿ ಅಧಿಕಾರಿಗಳಿಂದ ತಪಾಸಣೆ; ವಂಚನೆ ಪತ್ತೆ
Team Udayavani, Sep 14, 2024, 10:57 PM IST
ಕಾಸರಗೋಡು: ಜಿಲ್ಲೆಯಲ್ಲಿ ಎಲೆಕ್ಟ್ರಾನಿಕ್ಸ್ ಹೋಂ ಅಪ್ಲಾಯನ್ಸ್ ಶೋರೂಂ, ಮೊಬೈಲ್ ಫೋನ್ ಹಾಗು ಅದಕ್ಕೆ ಸಂಬಂಧಪಟ್ಟ ಸಾಮಗ್ರಿಗಳನ್ನು ಮಾರಾಟ ಮಾಡುವ ಅಂಗಡಿಗಳಲ್ಲಿ ವ್ಯಾಪಕ ವಂಚನೆ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಲೀಗಲ್ ಮೆಟ್ರೋಲಜಿ ಇಲಾಖೆ ಅಧಿಕಾರಿಗಳು ಅಂಗಡಿಗಳಿಗೆ ದಾಳಿ ನಡೆಸಿದರು.
ಮೊಬೈಲ್ ಚಾರ್ಜರ್ ಡಾಟಾ ಕೇಬಲ್ಗಳ ಉದ್ದ ದಾಖಲಿಸದ ಹಿನ್ನೆಲೆಯಲ್ಲಿ ಮೂರು ಕಂಪೆನಿಗಳ ಪ್ಯಾಕೆಟ್ಗಳನ್ನು ವಶಪಡಿಸಿ ಕೇಸು ದಾಖಲಿಸಿದೆ. ಎಂಆರ್ಪಿ 299 ರೂ.ಗಳಿದ್ದ ಪ್ಯಾಕೆಟ್ಗಳಲ್ಲಿ ಸ್ಟಿಕ್ಕರ್ ಬಳಸಿ 499 ರೂ. ಎಂದು ದಾಖಲಿಸಿದ ಇಯರ್ ಫೋನ್ ಪ್ಯಾಕೆಟ್ಗಳನ್ನು ವಶಪಡಿಸಲಾಗಿದೆ.
ಇಯರ್ ಫೋನ್ ಪ್ಯಾಕೆಟ್ಗಳಲ್ಲಿ ತಯಾರಿ ದಿನಾಂಕ ಅಕ್ಟೋಬರ್ 2024, ನವಂಬರ್ 2024 ಎಂದು ದಾಖಲಿಸಿದವುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.