ಕಾಸರಗೋಡು ರಾಜ್ಯದ ಪ್ರಥಮ ಸಂಪೂರ್ಣ ಬೆಳೆ ವಿಮೆ ಜಿಲ್ಲೆ


Team Udayavani, Jan 13, 2020, 5:44 AM IST

12KSDE9

ಕಾಸರಗೋಡು: ಕಾಸರಗೋಡು ರಾಜ್ಯದ ಪ್ರಥಮ ಸಂಪೂರ್ಣ ಬೆಳೆ ವಿಮೆ ಜಿಲ್ಲೆಯಾಗಿ ಘೋಷಿಸವಾಗಿದೆ. ಜುಲೈ 1ರಿಂದ 7ರ ವರೆಗೆ ರಾಜ್ಯ ಮಟ್ಟದ ಬೆಳೆ ವಿಮೆ ಸಪ್ತಾಹ ಆಚರಣೆ ನಡೆಸಿದ ಹಿನ್ನೆಲೆಯಲ್ಲಿ ಜಿಲ್ಲೆ ಅತ್ಯಧಿಕ ಜನಪರವಾಗಿದೆ.

ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಅವರ ವಿಶೇಷ ಕಾಳಜಿಯ ಹಿನ್ನೆಲೆಯಲ್ಲಿ ಮಾಜಿ ಪ್ರಧಾನ ಕೃಷಿ ಅಧಿಕಾರಿ ಮಧು ಜಾರ್ಜ್‌ ಮತ್ತಾಯಿ ಅವರ ನೇತೃತ್ವದಲ್ಲಿ ಜಿಲ್ಲೆಯ ಕೃಷಿ ಭವನಗಳ ಮುಖಾಂತರ ತೀವ್ರ ಯಜ್ಞ ಕಾರ್ಯಕ್ರಮ ನಡೆಸಲಾಗಿತ್ತು. ಈ ಮೂಲಕ ಜಿಲ್ಲೆಯಲ್ಲಿ ಕೃಷಿಯನ್ನೇ ಆಶ್ರಯಿಸಿ ಬದುಕುವ ಎಲ್ಲ ಮಂದಿಗೂ ಬೆಳೆಗಳನ್ನು ಯಥಾ ಸಮಯದಲ್ಲಿ ಆರ್ಥಿಕ ಸಹಾಯ ಮತ್ತು ವಿಮೆ ನಡೆಸಲು ಸಾಧ್ಯವಾಗಿದೆ.

2017-18ನೇ ಸಾಲಿನ‌ಲ್ಲಿ 6,286 ಮಂದಿ, 2018-19ನೇ ವರ್ಷ 5,061 ಮಂದಿ ಸದಸ್ಯತ್ವ ಪಡೆದ ಈ ಯೋಜನೆಯಲ್ಲಿ 2018-19ನೇ ಸಾಲಿನ‌ಲ್ಲಿÉ ಶೇ. 100 ಮಂದಿ ಸದಸ್ಯರಾಗಿದ್ದಾರೆ. ಬರಗಾಲ, ನೆರೆ, ಬಂಡೆಕಲ್ಲು ಉರುಳುವಿಕೆ, ಮಣ್ಣು ಕುಸಿತ, ಭೂಕಂಪ, ಕಡಲ್ಕೊರೆತ, ಸುಳಿಗಾಳಿ, ಕಡಲ್ಕೊರೆತ, ಸಿಡಿಲು, ಕಾಳಿYಚ್ಚು, ಕಾಡುಮೃಗಗಳ ಹಾವಳಿ ಸಹಿತ ವಿಕೋಪಗಳಿಂದ ಉಂಟಾಗುವ ನಾಶನಷ್ಟಗಳಿಗೆ ಸರಕಾರದ ವತಿಯಿಂದ ಕೃಷಿಕರಿಗೆ ಲಭಿಸುವ ಈ ಸೌಲಭ್ಯ ದೊಡ್ಡ ಪ್ರಮಾಣದ ಸಾಂತ್ವನವಾಗಿದೆ.

ಯೋಜನೆಯಲ್ಲಿ ಸೇರ್ಪಡೆಗೊಳ್ಳುವ ಕೃಷಿಕರಿಗೆ ಸರಕಾರ ಆಯಾ ಸಮಯದಲ್ಲಿ ನಿಗದಿತ ಪ್ರೀಮಿಯಂ ಮೊಬಲಗು ಪಾವತಿಸಬೇಕು. ಪ್ರೀಮಿಯಂ ಪಾವತಿಸಿದ ದಿನದಿಂದ 7 ದಿನಗಳ ನಂತರ ನಷ್ಟಪರಿಹಾರಕ್ಕೆ ಅರ್ಹತೆ ಲಭಿಸುತ್ತದೆ.

1995ರಲ್ಲಿ ರಾಜ್ಯದಲ್ಲಿ ಬೆಳೆ ವಿಮೆ ಯೋಜನೆ ಆರಂಭಿಸಲಾಗಿತ್ತು. 21 ವರ್ಷಗಳ ಅನಂತರ ಪರಿಷ್ಕೃತ ನಷ್ಟಪರಿಹಾರ ಮೊಬಲಗು ಕೃಷಿಕರಿಗೆ ಲಭಿಸಲಿದೆ. ವಿವಿಧ ಹಿನ್ನೆಲೆಗಳ ತಳಹದಿಯಲ್ಲಿ ಹಂತ ಹಂತವಾಗಿ ಮೊಬಲಗು ಪ್ರಮಾಣ ಹೆಚ್ಚಿಸುತ್ತಿರುವುದು ಸರಕಾರದ ಕೊಡುಗೆಯಾಗಿದೆ.

ವಿಮೆ ಸದಸ್ಯತ್ವಕ್ಕೆ ಸ್ವಂತವಾಗಿ, ಲೀಸ್‌ಗೆ ಜಾಗ ಪಡೆದು ಕೃಷಿ ನಡೆಸುವವರು ಅರ್ಹರಾಗಿದ್ದಾರೆ. ಭತ್ತದ ಕೃಷಿಯಲ್ಲಿ ಪ್ರತಿ ಕೃಷಿಕನೂ ಬೆಳೆ ವಿಮೆ ನಡೆಸಬೇಕು. ಆದರೆ ಸಾಮೂಹಿಕವಾಗಿ ಕೃಷಿ ನಡೆಸುವ ಗದ್ದೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಸಮಿತಿಗಳ ಕಾರ್ಯದರ್ಶಿ ಯಾ ಅಧ್ಯಕ್ಷ ಹೆಸರಲ್ಲಿ, ಗುಂಪು ಹಿನ್ನೆಲೆಯಲ್ಲಿ ಸದಸ್ಯತನ ಪಡೆಯಬಹುದು. ನೋಂದಣಿ ನಡೆಸಿದ ಗದ್ದೆಗಳಲ್ಲಿ ಒಬ್ಬರ ಗದ್ದೆಯಲ್ಲಿ ನಷ್ಟ ಸಂಭವಿಸಿದರೂ ಪರಿಹಾರ ಲಭಿಸಲಿದೆ.

ಕೃಷಿಭವನ ಸಂಪರ್ಕಿಸಿ
ಯೋಜನೆ ಪಂಚಾಯತ್‌ ಮಟ್ಟದಲ್ಲಿ ವಿವಿಧ ಕೃಷಿ ಭವನಗಳಲ್ಲಿ ಕೃಷಿಕರಿಗೆ ವಿಮೆ ಯೋಜನೆಯಲ್ಲಿ ಸದಸ್ಯತನ ಪಡೆಯುವ ಸೌಲಭ್ಯ ಏರ್ಪಡಿಸಲಾಗಿದೆ. ಕೃಷಿ ಸಿಬಂದಿ ಜಾಗ ಸಂದರ್ಶನ ನಡೆಸಿ ಪ್ರೀಮಿಯಂ ಮೊಬಲಗು ಪರಿಶೀಲನೆ ನಡೆಸುವರು. ಈ ಮೊಬಲಗು ಯೋಜನೆಗಾಗಿ ನೇಮಿಸಿದ ಏಜೆಂಟ್‌ ಮೂಲಕ ಯಾ ನೇರವಾಗಿ ಸಮೀಪದ ಗ್ರಾಮೀಣ ಬ್ಯಾಂಕ್‌ ಶಾಖೆಯಲ್ಲಿ ಯಾ ಸಹಕಾರಿ ಬ್ಯಾಂಕ್‌ನಲ್ಲಿ ಪಾವತಿಸಬಹುದು. ಯೋಜನೆಯನ್ನು ಗರಿಷ್ಠ ಮಟ್ಟದಲ್ಲಿ ಕೃಷಿಕರಿಗೆ ತಲಪಿಸುವ ಮಟ್ಟಿಗೆ ಕೃಷಿ ಅಧಿಕಾರಿ ಸಿಬಂದಿಗೆ ಸಾರ್ವಜನಿಕ ಮಾನದಂಡಗಳಿಗೆ ಅನುಗುಣವಾಗಿ ಏಜೆಂಟರನ್ನು ನೇಮಿಸುವರು. ಕೃಷಿಕರಿಗೆ, ಏಜೆಂಟರಿಗೆ ಪ್ರೀಮಿಯಂ ಪಾವತಿಸಿ ಕೃಷಿ ಭವನಕ್ಕೆ ರಶೀದಿ ಸಲ್ಲಿಸಬೇಕು. ಈ ರಶೀದಿಯ ಹಿನ್ನೆಲೆಯಲ್ಲಿ ಕೃಷಿಕನಿಗೆ ಪಾಲಿಸಿ ಲಭಿಸಲಿದೆ.
ಬೆಳೆ ವಿಮೆ ಸಂರಕ್ಷಣೆ ಹೊಂದಿರುವ ಬೆಳೆಗಳ ಪರಿಹಾರ ಮೊಬಲಗನ್ನು 2017ರಿಂದ ಪುನಾರಚಿಸಿ 12 ಪಟ್ಟು ಅಧಿಕಗೊಳಿಸಲಾಗಿದೆ. ತೆಂಗು, ಬಾಳೆ, ರಬ್ಬರ್‌, ಕರಿಮೆಣಸು, ಏಲಕ್ಕಿ, ಗೇರುಬೀಜ, ಅನಾನಾಸು, ಕಾಫಿ, ಶೂಂಠಿ, ಚಹಾ, ಹಳದಿ, ಕೊಕ್ಕೋ, ಎಳ್ಳು, ತರಕಾರಿ, ವೀಳ್ಯದೆಲೆ, ಗೆಡ್ಡೆ-ಗೆಣಸು, ಹೊಗೆಸೊಪ್ಪು, ಭತ್ತ, ಮಾವಿನ ಕಾಯಿ, ಕಿರುಧಾನ್ಯಗಳು ಇತ್ಯಾದಿ ಬೆಳೆಗಳಿಗೆ ವಿಮೆ ಸಂರಕ್ಷಣೆಯಿದೆ.

ರಾಜ್ಯದ ಎಲ್ಲ ಭತ್ತದ ಕೃಷಿಕರೂ ಈ ಯೋಜನೆಯ ಸದಸ್ಯರಾಗಿದ್ದಾರೆ. ಕೀಟಬಾಧೆಯಿಂದ ಭತ್ತದ ಕೃಷಿಗೆ ಉಂಟಾಗುವ ನಾಶ-ನಷ್ಟಕ್ಕೂ ವಿಮೆ ಸಂರಕ್ಷಣೆ ದೊರೆಯಲಿದೆ.

ನಷ್ಟ ಪರಿಹಾರಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು?
ನಾಶ-ನಷ್ಟ ಸಂಭವಿಸಿದ 15 ದಿನಗಳೊಳಗೆ ನಿಗದಿತ ಫಾರಂನಲ್ಲಿ ಕೃಷಿ ಭವನದಲ್ಲಿ ಅರ್ಜಿ ಸಲ್ಲಿಸಬೇಕು. ಕೃಷಿ ಭವನ ಸಿಬಂದಿ ಆಗಮಿಸಿ ತಪಾಸಣೆ ನಡೆಸುವವರೆಗೆ ನಷ್ಟ ಸಂಭವಿಸಿದ ಬೆಳೆಯನ್ನು ಅದೇ ರೂಪದಲ್ಲಿ ಇರಿಸಬೇಕು. ಕೃಷಿ ಭವನಕ್ಕೆ ಅರ್ಜಿ ಸಲ್ಲಿಸಿದ 4 ದಿನಗಳಲ್ಲಿ ಸಿಬಂದಿಗೆ ನಷ್ಟ ಸಂಭವಿಸಿದ ಜಾಗಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿ, ಪ್ರಧಾನ ಕೃಷಿ ಅಧಿಕಾರಿಗೆ ವರದಿ ಸಲ್ಲಿಸುವರು.

ಪ್ರೀಮಿಯಂ-ಪರಿಹಾರ
ಹತ್ತು ತೆಂಗಿನ ಮರಗಳಿರುವ ಕೃಷಿಕನಿಗೆ ಒಂದು ತೆಂಗಿನಮರಕ್ಕೆ 2 ರೂ. ರೂಪದಲ್ಲಿ ಒಂದು ವರ್ಷಕ್ಕೆ 5 ರೂ.ಗಳಂತೆ ಮೂರು ವರ್ಷ ಪ್ರೀಮಿಯಂ ಪಾವತಿಸಬೇಕು. ಈ ಮೂಲಕ ತೆಂಗಿನ ಮರವೊಂದಕ್ಕೆ 2 ಸಾವಿರ ರೂ. ನಷ್ಟ ಪರಿಹಾರ ಲಭಿಸಲಿದೆ. ಹತ್ತು ಮರಗಳಿರುವ ಕರಿಮೆಣಸು ಕೃಷಿಕನಿಗೆ 1.50 ರೂ. ಒಂದು ವರ್ಷಕ್ಕೆ, ಮೂರು ರೂ. ಮೂರು ವರ್ಷಕ್ಕೆ ಪಾವತಿಸಿದರೆ ಮರವೊಂದಕ್ಕೆ 200 ರೂ. ಪರಿಹಾರ ಲಭಿಸಲಿದೆ. 25 ರಬ್ಬರ್‌ ಮರಗಳಿರುವ ಕೃಷಿಕನಿಗೆ ಮರವೊಂದಕ್ಕೆ ತಲಾ 3 ರೂ. ವರ್ಷಕ್ಕೆ, 7.5 ರೂ.ನಂತೆ ಮೂರು ವರ್ಷ ಪಾವತಿಸಿದರೆ ಮರವೊಂದಕ್ಕೆ ಒಂದು ಸಾವಿರ ರೂ. ನಷ್ಟ ಪರಿಹಾರ ಲಭಿಸಲಿದೆ. ಇದೇ ರೀತಿಯಲ್ಲಿ ವಿವಿಧ ಬೆಳೆಗಳಿಗೆ ಸಂರಕ್ಷಣೆ ಲಭಿಸಲಿದೆ. ದೀರ್ಘಾವಧಿ ಬೆಳೆಗಳಿಗೆ ಪ್ರತ್ಯೇಕ ಸಂರಕ್ಷಣೆ ಇರುವುದು.

ಟಾಪ್ ನ್ಯೂಸ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

de

Guttigar: ಮಾವಿನಕಟ್ಟೆ; ಮರದಿಂದ ಬಿದ್ದು ವ್ಯಕ್ತಿ ಸಾವು

9

Kaup: ಬೀಚ್‌ನಲ್ಲಿನ್ನು ಪ್ಯಾರಾ ಮೋಟರಿಂಗ್‌

8(1

Udupi: ಸ್ಥಾಪಕರು ಜೀವನ ಪಾಠ ಮಾಡಿದ್ದ ಎಂಜಿಎಂ ಕಾಲೇಜಿಗೆ ಅಮೃತೋತ್ಸವ

7

Kollur: ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂಗಡಿ ಮುಂಗಟ್ಟು ತೆರವು ಆರಂಭ

6

Kundapura: ವಿಶ್ವ ವಿಖ್ಯಾತ ಮರವಂತೆಯಲ್ಲಿ ಬಸ್‌ ನಿಲ್ದಾಣವೇ ಇಲ್ಲ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.