Kasaragod: ಎಡನೀರು ಶ್ರೀಗಳ ಕಾರಿಗೆ ಹಾನಿ; ಇಬ್ಬರ ವಿರುದ್ಧ ಕೇಸು ದಾಖಲು
Team Udayavani, Nov 11, 2024, 7:57 PM IST
ಕಾಸರಗೋಡು: ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಪಾದರ ಕಾರನ್ನು ಆಕ್ರಮಿಸಿ ಹಾನಿಗೈದ ಪ್ರಕರಣಕ್ಕೆ ಸಂಬಂಧಿಸಿ ಕಾರಿನ ಚಾಲಕ ಮಧೂರಿನ ಸತೀಶ್ ಕೆ.ಎಸ್. ನೀಡಿದ ದೂರಿನಂತೆ ಕಂಡರೆ ಗುರುತು ಹಚ್ಚಬಹುದಾದ ಇಬ್ಬರ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ನ. 3ರಂದು ಮುಳಿಯಾರು ಬೋವಿಕ್ಕಾನ ರಸ್ತೆ ಜಂಕ್ಷನ್‌ನಲ್ಲಿ ಕಾರಿಗೆ ತಡೆಯೊಡ್ಡಿ ಗಾಜನ್ನು ಹಾನಿಗೊಳಿಸಲಾಗಿತ್ತು. ಸುಮಾರು 5,000 ರೂ. ನಷ್ಟವಾಗಿತ್ತು. ಕಾರಿಗೆ ಹಾನಿ ಸಂಬಂಧ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿತ್ತು. ಬಿಜೆಪಿ ಕೇರಳ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಡಿಜಿಪಿಗೆ ದೂರು ನೀಡಿದ್ದರು.