Kasaragod: ಇನ್ನಷ್ಟು ರೈಲುಗಳ ನಿಲುಗಡೆಗೆ ಸಂಸದ ಉಣ್ಣಿತ್ತಾನ್ ಆಗ್ರಹ
Team Udayavani, Feb 10, 2024, 11:21 PM IST
ಕಾಸರಗೋಡು: ಕಾಂಞಂಗಾಡ್-ಕಾಣಿಯೂರು ರೈಲು ಹಳಿ ಸೇವೆ ಸಾಕ್ಷಾತ್ಕಾರಗೊಳಿಸಬೇಕು, ಕಾಸರಗೋಡು ಜಿಲ್ಲೆಯಲ್ಲಿ ಇನ್ನಷ್ಟು ರೈಲುಗಳಿಗೆ ನಿಲುಗಡೆ ನೀಡಬೇಕು ಸಹಿತ ಹಲವು ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ಗೆ ಸಲ್ಲಿಸಿದ್ದಾರೆ.
ಕರ್ನಾಟಕ ಸರಕಾರದ ಸಮ್ಮತಿ ಪತ್ರ ಲಭಿಸದಿರುವುದರಿಂದ ಕಾಂಞಂಗಾಡ್-ಕಾಣಿಯೂರು ರೈಲು ಹಳಿ ಯೋಜನೆ ಕುರಿತಾದ ಎಲ್ಲ ಕ್ರಮಗಳನ್ನು 2018ರಿಂದ ಸ್ಥಗಿತಗೊಳಿಸಲಾಗಿದೆ. ಈ ವಿಷಯದಲ್ಲಿ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ಈ ಯೋಜನೆ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ದೀರ್ಘ ದೂರ ಸೇವೆಗಳ ರೈಲುಗಳ ಹಲವು ಬೋಗಿಗಳನ್ನು ಕಡಿತಗೊಳಿಸಲಾಗಿದ್ದು, ಮಂಜೇಶ್ವರ, ಕುಂಬಳೆ, ಚೆರುವತ್ತೂರು, ತೃಕ್ಕರಿಪುರ ಮತ್ತು ಕಣ್ಣಪುರಂ ನಿಲ್ದಾಣಗಳಲ್ಲಿ ಇನ್ನಷ್ಟು ರೈಲುಗಳಿಗೆ ನಿಲುಗಡೆ ನೀಡಬೇಕೆಂದು ಈ ಹಿಂದೆಯೇ ಮಂಡಿಸಿದ್ದ ಬೇಡಿಕೆಗಳನ್ನು ಅಂಗೀಕರಿಸಬೇಕು.
ಮಂಗಳೂರು-ತಿರುವನಂತಪುರ ಮಾರ್ಗದಲ್ಲಿ ಹಗಲು ಮತ್ತು ರಾತ್ರಿ ಸೇವೆ ನಡೆಸುವ ರೀತಿಯಲ್ಲಿ ಹೊಸ ರೈಲು ಸೇವೆ ಆರಂಭಿಸಬೇಕು, ಜನರಲ್ ಬೋಗಿಗಳ ಸಂಖ್ಯೆ ಹೆಚ್ಚಿಸಬೇಕು, ಮೂಕಾಂಬಿಕಾ-ಶೊರ್ನೂರು ರೈಲು ಯೋಜನೆಯನ್ನು ಪುನರಾರಂಭಿಸಬೇಕು ಅಥವಾ ರಾಮೇಶ್ವರ ತನಕ ವಿಸ್ತರಿಬೇಕೆಂದು ಸಂಸದರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.