![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Feb 6, 2024, 11:53 PM IST
ಕಾಸರಗೋಡು: ಸ್ಮಾರ್ಟ್ ಫೋನ್‌ನ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸಲು ಸ್ಥಳೀಯಾಡಳಿತ ಸಂಸ್ಥೆಗಳ ಸಹಕಾರದೊಂದಿಗೆ ಜಿಲ್ಲಾ ಪಂಚಾಯತ್ ಜಾರಿಗೊಳಿಸಿರುವ ಸಂಪೂರ್ಣ ಡಿಜಿಟಲ್ ಸಾಕ್ಷರತಾ ಯೋಜನೆ ಕೊನೆಯ ಹಂತದಲ್ಲಿದೆ.
38 ಗ್ರಾಮ ಪಂಚಾಯತ್‌ಗಳಲ್ಲೂ, 3 ನಗರಸಭೆಗಳಲ್ಲೂ ಜಾರಿಗೊಳ್ಳಲಿರುವ ಯೋಜನೆಯ ಶೇ. 80ಕ್ಕೂ ಹೆಚ್ಚು ತರಗತಿಗಳನ್ನು ಪೂರ್ತಿಗೊಳಿಸಲಾಗಿದೆ. 1,01,272 ಮಂದಿ ಯೋಜನೆಯ ಮೂಲಕ ಡಿಜಿಟಲ್ ಸಾಕ್ಷರತೆ ಗಳಿಸಿದ್ದಾರೆ.
ಜಿಲ್ಲೆಯಲ್ಲಿ ಸ್ಮಾರ್ಟ್ ಫೋನ್ ಉಪಯೋಗಿಸುವ 30ರಿಂದ 60ರ ನಡುವಿನ ಪ್ರಾಯದವರಿಗೆ ಇ-ಮೇಲ್ ಐಡಿ, ಖಾಸಗಿ ತನ ಹಾಗೂ ಸುರಕ್ಷಿತ, ಬಿಲ್ ಪಾವತಿ ವ್ಯವಹಾರ, ಕ್ಯು ಆರ್ ಕೋಡ್ ಸ್ಕ್ಯಾನಿಂಗ್, ಗೂಗಲ್ ಪೇ ಆಧಾರದಲ್ಲಿರುವ ವ್ಯವಹಾರಗಳು, ಸರಕಾರಿ ಸೇವೆಗಳು, ಡಿಜಿಟಲ್ ಲಾಕರ್ ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸುವ ಬಗ್ಗೆ ಈ ಯೋಜನೆಯಲ್ಲಿ ತಿಳಿಸಲಾಗುತ್ತಿದೆ. 20ರಿಂದ 30 ಮಂದಿ ಒಂದು ತರಗತಿಯಲ್ಲಿದ್ದು, 2 ಗಂಟೆ ತರಗತಿ ನಡೆಸಲಾಗುತ್ತದೆ.
ಜಿಲ್ಲೆ ಸಂಪೂರ್ಣ ಡಿಜಿಟಲ್ ಸಾಕ್ಷರತೆ ಘೋಷಣೆಯನ್ನು ಮುಂದಿನ ತಿಂಗಳ ಕೊನೆಗೆ ನಡೆಸಲು ಉದ್ದೇಶಿಸಲಾಗಿದೆ. ಜಿಲ್ಲಾ ಮಟ್ಟದ ಘೋಷಣೆಯೊಂದಿಗೆ ಕಾಸರಗೋಡು ಜಿಲ್ಲೆ ಭಾರತದಲ್ಲೇ ಪ್ರಥಮವಾಗಿ ಡಿಜಿಟಲ್ ಸಾಕ್ಷರತೆ ಪೂರ್ತಿಗೊಳಿಸಿದ ಜಿಲ್ಲೆಯಾಗಿ ಬದಲಾಗಲಿದೆ. ಜಿಲ್ಲೆಯಲ್ಲಿ ಮೊದಲು ಡಿಜಿಟಲ್ ಪಂಚಾಯತ್ ಆಗಿ ಅಜಾನೂರು ಪಂಚಾಯತನ್ನು ಘೋಷಿಸಲಾಗಿದೆ.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.