![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Apr 7, 2024, 12:39 AM IST
ಕಾಸರಗೋಡು: ಚೆಂಗಳ ಸಮೀಪದ ಸಂತೋಷ್ ನಗರದಲ್ಲಿ ವಾಹನ ಸರ್ವೀಸ್ ಸ್ಟೇಶನ್‌ನಿಂದ 2022ರ ಮಾರ್ಚ್ 20ರಂದು ಎರಡು ಕಾರುಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆಲಪ್ಪುಳ ಸೌತ್ ತಲವಡಿ ಗ್ರಾಮದ ಕುತ್ತನ್‌ಪರಂಬಿಲ್ ನಿವಾಸಿ ವಿನೋದ್ ಆಲಿಯಾಸ್ ವಿನೋದ್ ಮ್ಯಾಥ್ಯೂ ಆಲಿಯಾಸ್ ಇಟ್ಟೂಪು (45)ನನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ಬೇರೊಂದು ಕಳವು ಪ್ರಕರಣಕ್ಕೆ ಸಂಬಂಧಿಸಿ ಈತನನ್ನು ಶೊರ್ನೂರು ಪೊಲೀಸರು ಬಂಧಿಸಿದ್ದರು. ಪೊಲೀಸರು ಈತನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಕಾಸರಗೋಡಿನ ಸರ್ವೀಸ್ ಸ್ಟೇಶನ್‌ನಿಂದ ಎರಡು ಕಾರುಗಳನ್ನು ಕಳವು ಮಾಡಿದ್ದು ಬಯಲಾಯಿತು. ಅದರಂತೆ ಆತನನ್ನು ಬಂಧಿಸಲಾಗಿದೆ. ಕಳವು ಮಾಡಿದ ಕಾರುಗಳನ್ನು ಕೊಯಮತ್ತೂರಿನಲ್ಲಿ ಮಾರಾಟ ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ. ಈ ಕಾರುಗಳನ್ನು ಪತ್ತೆಹಚ್ಚುವ ಯತ್ನದಲ್ಲಿ ಪೊಲೀಸರು ತೊಡಗಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.