Kasaragod: ಮದ್ಯದ ಅಮಲಿನಲ್ಲಿ ಡೀಸೆಲ್ ಕುಡಿದ ಯುವಕ; ಸಾವು
Team Udayavani, Dec 4, 2024, 9:30 PM IST
ಬದಿಯಡ್ಕ: ಮದ್ಯದ ಅಮಲಿನಲ್ಲಿ ಡೀಸೆಲ್ ಕುಡಿದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಸಾವಿಗೀಡಾದ ಘಟನೆ ನಡೆದಿದೆ. ಚರ್ಲಡ್ಕ ಬಳಿಯ ಎರ್ಪಕಟ್ಟೆ ನಿವಾಸಿ ತಂಗಚ್ಚನ್ ಅವರ ಪುತ್ರ ರಾಜನ್ (35) ಸಾವಿಗೀಡಾದವರು.
ನ. 15ರಂದು ರಾತ್ರಿ 8.30ಕ್ಕೆ ರಾಜನ್ ಡೀಸೆಲ್ ಕುಡಿದಿದ್ದರೆನ್ನಲಾಗಿದೆ. ಗಂಭೀರ ಸ್ಥಿತಿಯಲ್ಲಿ ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಬದಿಯಡ್ಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶ್ರೀಗಂಧ ಕೊರಡು ಸಹಿತ ಇಬ್ಬರ ಬಂಧನ
ಕಾಸರಗೋಡು: ಅರಣ್ಯ ಇಲಾಖೆಯ ಫ್ಲೈಯಿಂಗ್ ಸ್ಕ್ವಾಡ್ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ 130 ಕಿಲೋ ಶ್ರೀಗಂಧದ ಕೊರಡುಗಳನ್ನು ಪತ್ತೆಹಚ್ಚಿ ಹೊಸದುರ್ಗ ಮೂನಾಂಮೈಲ್‌ನ ಕಳತ್ತಿಂಗಾಲ್ ನಿವಾಸಿ ಪ್ರಸಾದ್ (34) ಮತ್ತು ಆತನ ಸಹಚರ ಮೂನಾಂಮೈಲ್‌ನ ಶಿಬುರಾಜ್(43)ನನ್ನು ಬಂಧಿಸಲಾಗಿದೆ. ಎರಡು ಕಾರಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಹಸ್ಯ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿತ್ತು. ಶ್ರೀಗಂಧದ ಕೊರಡುಗಳಿಗೆ ಸುಮಾರು 6.5 ಲಕ್ಷ ರೂ. ಮೌಲ್ಯ ಅಂದಾಜಿಸಲಾಗಿದೆ. ಪ್ರಸಾದ್‌ನ ಮನೆಯಲ್ಲಿ ಐದು ಗೋಣಿ ಚೀಲದಲ್ಲಿ ತುಂಬಿ ಶ್ರೀಗಂಧದ ಕೊರಡುಗಳನ್ನು ಬಚ್ಚಿಡಲಾಗಿತ್ತು.
ರೈಲು ಪ್ರಯಾಣಿಕನ ಬ್ಯಾಗ್ ಕಳವು
ಕಾಸರಗೋಡು: ಚೆನ್ನೈ-ಮಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಚೆನ್ನೈ ನಿವಾಸಿ ಜೆರಿನ್ ಥೋಮಸ್ (27) ಅವರ ಬ್ಯಾಗ್ ಅನ್ನು ಹೊಸದುರ್ಗ ಸಮೀಪ ಕಳವು ಮಾಡಲಾಗಿದೆ. ಬ್ಯಾಗ್‌ನಲ್ಲಿ 20 ಸಾವಿರ ರೂ. ಮೌಲ್ಯದ ಕ್ರಿಸ್ಟಲ್ ಬ್ರಾಸ್‌ಲೆಟ್, 12 ಸಾವಿರ ರೂ. ಮೌಲ್ಯದ ಕನ್ನಡಕ, 3 ಸಾವಿರ ರೂ. ಮೌಲ್ಯದ ವಯರ್‌ಲೆಸ್ ಚಾರ್ಜರ್, 33,315 ರೂ. ಮೌಲ್ಯದ ವಾಲೆಟ್, 16,445 ರೂ. ಮೌಲ್ಯದ ಇಯರ್‌ಫೋನ್ ಇತ್ಯಾದಿಗಳಿದ್ದವು. ಒಟ್ಟು 83,760 ರೂ. ಮೌಲ್ಯದ ಸಾಮಗ್ರಿಗಳು ಕಳವಾಗಿದೆ. ಈ ಬಗ್ಗೆ ಕಾಸರಗೋಡು ರೈಲ್ವೇ ಪೊಲೀಸರಿಗೆ ದೂರು ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Mahayuti: ಈ ಬಾರಿ ನಾನು ದೇವೇಂದ್ರ ಫಡ್ನವೀಸ್ ಹೆಸರು ಸೂಚಿಸಿ ಋಣ ತೀರಿಸಿದೆ: ಶಿಂಧೆ
Toll: ವರ್ಷದಲ್ಲೇ 438 ಕೋ.ರೂ. ಟೋಲ್ ಶುಲ್ಕ ಸಂಗ್ರಹ
Electricity Price Hike: ಮೂರು ವರ್ಷದ ವಿದ್ಯುತ್ ದರ ಒಂದೇ ಬಾರಿ ಏರಿಕೆ?
Puttur: ಎಪ್ರಿಲ್, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!
Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.