Kasaragodu: ಮುಖ್ಯಮಂತ್ರಿಯ ಅವಹೇಳನ: ಜಿಲ್ಲಾ ಕಾನೂನು ಅಧಿಕಾರಿ ಅಮಾನತು
Team Udayavani, Dec 13, 2024, 2:06 AM IST
ಕಾಸರಗೋಡು: ಮುಖ್ಯಮಂತ್ರಿಯನ್ನು ಅವಹೇಳನಗೈದ ಆರೋಪದಲ್ಲಿ ಕಾಸರಗೋಡು ಜಿಲ್ಲಾ ಕಾನೂನು ಅಧಿಕಾರಿ ಆಕಾಶ್ ರವಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಕಾನೂನು ಇಲಾಖೆಯ ಡೆಪ್ಯುಟಿ ಸೆಕ್ರೆಟರಿ ಹಾಗೂ ಕೇರಳ ಸೆಕ್ರೆಟರಿಯೇಟ್ ಎಂಪ್ಲಾಯೀಸ್ ಸಂಘದ ಅಧ್ಯಕ್ಷರಾದ ಆಕಾಶ್ ರವಿ ಮುಖ್ಯಮಂತ್ರಿ ವಿರುದ್ಧ ಅವಮಾನಕರ ರೀತಿಯಲ್ಲಿ ಸಂಘಟನೆ ಹೆಸರಿನಲ್ಲಿ ನೋಟಿಸ್ ಪ್ರಕಟಿಸಿದ್ದರು ಎಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದೆ.
ಜತೆಗೆ ಪಾಲಕ್ಕಾಡ್ ಜಿಲ್ಲಾ ಕಾನೂನು ಅಧಿಕಾರಿಯಾಗಿರುವಾಗ ಪಾಲಕ್ಕಾಡ್ ತಹಶೀಲ್ದಾರ್, ಡೆಪ್ಯುಟಿ ತಹಶೀಲ್ದಾರ್ ಎಲ್.ಆರ್. ಜತೆಗೆ ಸೇರಿಕೊಂಡು ಕಾನೂನು ವಿರೋಧಿ ಚಟುವಟಿಕೆ ನಡೆಸಿದ್ದರು ಹಾಗೂ ಲಂಚ ಪಡೆದಿದ್ದರು ಎಂದು ದೂರಿನ ಬಗ್ಗೆ ವಿಜಿಲೆನ್ಸ್ ತನಿಖೆಗೆ ಜಿಲ್ಲಾಧಿಕಾರಿಗಳು ಶಿಫಾರಸು ಮಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.