Kasaragodu ವಿಭಾಗದ ಅಪರಾಧ ಸುದ್ದಿಗಳು
Team Udayavani, Jul 16, 2024, 9:15 PM IST
ವಿದ್ಯುತ್ ಶಾಕ್: ಮಹಿಳೆಯ ಸಾವು
ಕಾಸರಗೋಡು: ವಿದ್ಯುತ್ ಶಾಕ್ ತಗಲಿ ಮಹಿಳೆಯೋರ್ವರು ಸಾವಿಗೀಡಾದ ಘಟನೆ ಮಾಯಿಪ್ಪಾಡಿ ಸಮೀಪದ ಕುದ್ರೆಪ್ಪಾಡಿಯಲ್ಲಿ ಸಂಭವಿಸಿದೆ.
ಕುದ್ರೆಪ್ಪಾಡಿ ಕಾರ್ತಿಕ ನಿಲಯದ ಗೋಪಾಲ ಗಟ್ಟಿ ಅವರ ಪತ್ನಿ ಹೇಮಾವತಿ (53) ಅವರು ಜು. 15ರಂದು ರಾತ್ರಿ 7.30ರ ವೇಳೆಗೆ ಅಡುಗೆ ಮನೆಯ ವಿದ್ಯುತ್ ದೀಪದ ಸ್ವಿಚ್ ಹಾಕುತ್ತಿದ್ದಾಗ ವಿದ್ಯುತ್ ಆಘಾತವಾಯಿತು. ತತ್‌ಕ್ಷಣ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಿದರೂ ರಕ್ಷಿಸಲು ಸಾಧ್ಯವಾಗಿಲ್ಲ.
ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
——————————————————————
ನವಜಾತ ಶಿಶುವನ್ನುಉಪೇಕ್ಷಿಸಿದ ಮಹಿಳೆಯ ಗುರುತು ಪತ್ತೆ
ಅಡೂರು: ಪಂಜಿಕಲ್ಲು ಶ್ರೀಕೃಷ್ಣಮೂರ್ತಿ ಎಯುಪಿ ಶಾಲೆಯ ಆವರಣದಲ್ಲಿ ಜು. 14ರಂದು ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾದ ಒಂದು ದಿನದ ಹೆಣ್ಣು ಮಗುವಿನ ತಾಯಿಯ ಗುರುತು ಹಚ್ಚಲಾಗಿದೆ ಎಂದು ಆದೂರು ಪೊಲೀಸರು ತಿಳಿಸಿದ್ದಾರೆ.
ದೇಲಂಪಾಡಿಯಾದ್ಯಂತ ತನಿಖೆ ಮಾಡಿದಾಗ ಮನೆಯೊಂದರ 32ರ ಹರೆಯದ ಮಹಿಳೆ ಈ ಮಗುವಿನ ತಾಯಿ ಎಂಬುದಾಗಿ ತಿಳಿದು ಬಂದಿದೆ.
ಆಕೆಯಯನ್ನು ವಿಚಾರಿಸಿದಾಗ ಮಗು ತನ್ನದೆಂದು ಒಪ್ಪಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರು ಮುಂದಿನ ಕ್ರಮ ಆರಂಭಿಸಿದ್ದಾರೆ.
——————————————————————–
ವಿದ್ಯಾರ್ಥಿಗಳ ಘರ್ಷಣೆ: ನಾಲ್ವರ ವಿರುದ್ಧ ಕೇಸು
ಕಾಸರಗೋಡು: ಚಟ್ಟಂಚಾಲ್ ಎಂ.ಐ.ಸಿ. ಕಾಲೇಜಿನ ಮುಂಭಾಗದ ರಸ್ತೆಯಲ್ಲಿ ವಿದ್ಯಾರ್ಥಿಗಳಾದ ನೆಲ್ಲಿಕಟ್ಟೆಯ ಸಫಾನ್ (19), ಪೈಕ ಮಣವಾಟಿ ನಗರದ ಪಿ.ಎಸ್. ಅಬ್ದುಲ್ ಜಂಷೀದ್ (19), ನೆಕ್ರಾಜೆಯ ಪಿ.ಎ. ಮೊಹಮ್ಮದ್ ನೌರಿನ್ (20) ಮತ್ತು ಬೆಳ್ಳೂರು ನಾಟಕಲ್ಲಿನ ತನ್‌ಶಿàಫ್ ರಹ್ಮಾನ್ (19) ವಿರುದ್ಧ ಮೇಲ್ಪರಂಬ ಪೊಲೀಸರು ಪ್ರಕರಣ ಕೇಸು ದಾಖಲಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.