ಕುಟುಂಬಶ್ರೀ ಯಶಸ್ವಿ ಯೋಜನೆ: ಊರ ಸಂತೆಗಳು ಜನಪ್ರಿಯ
Team Udayavani, Dec 13, 2018, 12:23 PM IST
ಕಾಸರಗೋಡು: ಕುಟುಂಬಶ್ರೀ ಜಿಲ್ಲಾ ಮಿಷನ್ ಆಶ್ರಯದಲ್ಲಿ ಎಂ.ಕೆ.ಎಸ್.ಪಿ. ಯೋಜನೆಯ ಅಂಗವಾಗಿ ಚಟುವಟಿಕೆ ನಡೆಸುತ್ತಿರುವ ಊರಸಂತೆಗಳು ಜನಪ್ರಿಯ ಉದ್ಯಮಗಳಾಗಿ ಬೆಳೆಯುತ್ತಿದೆ. ಜಿಲ್ಲೆಯ ಸಿ.ಡಿ.ಎಸ್.ಗಳ ನೇತೃತ್ವದಲ್ಲಿ ಊರ ಸಂತೆಗಳು ಚಟುವಟಿಕೆ ನಡೆಸುತ್ತಿವೆ. ವಾರದಲ್ಲಿ ಮೂರು ದಿನಗಳು ವಿವಿಧೆಡೆ ತೆರೆದಿರುತ್ತವೆ. ಅ. 10ರಿಂದ ಈ ವರೆಗೆ ಒಟ್ಟು 202 ಸಂತೆಗಳನ್ನು ನಡೆಸಲಾಗಿದ್ದು, 8,92,228 ರೂ. ನ ಆದಾಯ ಲಭಿಸಿದೆ. ಕುಟುಂಬಶ್ರೀ ಕೃಷಿಕರು ಬೆಳೆಯುವ ಜೈವಿಕ ತರಕಾರಿಗಳು, ಅರಿಶ್ರೀ ಅಕ್ಕಿ, ಸಫಲಂ ಗೇರು ಬೀಜ, ಕರಕುಶಲ ಸಾಮಾಗ್ರಿಗಳು ಇತ್ಯಾದಿಗಳಿಂದ ತೊಡಗಿ ಗ್ರಾಮೀಣ ಉತ್ಪನ್ನಗಳ ವರೆಗೆ ಊರ ಸಂತೆಯಲ್ಲಿ ಲಭ್ಯವಿದೆ. ಕೇಕ್ ಹಬ್ಬ, ಪಾಯಸ ಮೇಳ ಇತ್ಯಾದಿಗಳೂ ಊರ ಸಂತೆಯ ಆಶ್ರಯದಲ್ಲಿ ನಡೆದು ಈಗಾಗಲೇ ಗಮನ ಸೆಳೆದಿವೆ.
ಸ್ಪರ್ಧೆಗಳೂ ಉಂಟು
ಊರ ಸಂತೆಯ ಜಿಲ್ಲಾ ಮಟ್ಟದ ಸ್ಪರ್ಧೆಗಳೂ ನಡೆಯುವುದಿದೆ. ಆಯಾ ಸಿಡಿಎಸ್ ನಡೆಸಿದ ಮಾರಾಟದ ಹಿನ್ನೆಲೆಯಲ್ಲಿ ವಿಜೇತರನ್ನು ಆಯ್ಕೆ ಮಾಡಲಾಗುತ್ತಿದೆ. ಕೃಷಿ ಸಂಸ್ಕಾರವನ್ನು ಮರಳಿ ತರುವ ಉದ್ದೇಶ, ಜನತೆಗೆ ನ್ಯಾಯ ಬೆಲೆಗೆ ಜೈವಿಕ ಉತ್ಪನ್ನಗಳನ್ನು ಒದಗಿಸುವ ನಿಟ್ಟಿನಲ್ಲಿ ಊರ ಸಂತೆಗಳು ಯಶಸ್ವಿಯಾಗಿವೆ. ಹಂತಹಂತವಾಗಿ ಸಾರ್ವಜನಿಕ ಬೆಂಬಲ ಹೆಚ್ಚುತ್ತಿರುವುದು ಊರ ಸಂತೆಯ ಚಟುವಟಿಕೆಗಳ ಉತ್ಸಾಹ ಹೆಚ್ಚಿಸುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.