ಟಿಪ್ಪರ್ -ಕಾರು ನಡುವೆ ಭೀಕರ ಅಪಘಾತ: ಮೂವರು ಸಾವು, ಇನ್ನೋರ್ವ ಗಂಭೀರ
Team Udayavani, Dec 3, 2022, 6:25 PM IST
ಕಾಸರಗೋಡು: ಚಾಯೋತ್‌ನಲ್ಲಿ ಸಮಾರೋಪಗೊಂಡ ಶಾಲಾ ಕಲೋತ್ಸವವನ್ನು ವೀಕ್ಷಿಸಿ ವಾಪಸಾಗುತ್ತಿದ್ದಾಗ ಕಾರಿಗೆ ಟಿಪ್ಪರ್ ಮುಖಾಮುಖಿ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸಾವಿಗೀಡಾಗಿದ್ದು, ಇನ್ನೋರ್ವ ಯುವಕ ಗಂಭೀರ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಡಿ. 2ರಂದು ರಾತ್ರಿ 8.30ಕ್ಕೆ ನೀಲೇಶ್ವರ ಚೊಯಂಕೋಡು ಮಂಞಳಕಾಡ್ ತಿರುವಿನಲ್ಲಿ ಈ ಘಟನೆ ಸಂಭವಿಸಿದ್ದು ಕಾರಿನಲ್ಲಿದ್ದ ನೀಲೇಶ್ವರ ಕೊನ್ನಕ್ಕಾಡ್ ಕೋಟಂಬಳಿಯ ಅನುಷ್ (26), ನೀಲೇಶ್ವರ ಕರಿಂದಳ ಚೆಮ್ಮಂತೋಡಿನ ಶ್ರೀರಾಗ್ (18) ಮತ್ತು ಪೆರಿಂಞನಂ ಮೀರ್‌ಕಾನದ ಕೆ. ಕೆ. ಕಿಶೋರ್(20) ಮೃತಪಟ್ಟರು.
ಗಂಭೀರ ಗಾಯಗೊಂಡಿರುವ ಕುಂಬಳಪಳ್ಳಿಯ ಬಿನು (24) ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಾಲ್ವರೂ ವಿದ್ಯುನ್ಮಂಡಳಿಯ ಗುತ್ತಿಗೆ ಕಾರ್ಮಿಕರಾಗಿದ್ದಾರೆ ಎನ್ನಲಾಗಿದೆ. ಟಿಪ್ಪರ್ ಲಾರಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಕಾಡಾನೆ ಸೆರೆ ಕಾರ್ಯಾಚರಣೆಗೆ ಮತ್ತೊಂದು ಯಶಸ್ಸು: ಮೂಡಿಗೆರೆಯಲ್ಲಿ ಎರಡನೇ ಪುಂಡಾನೆ ಸೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragod: ರಸ್ತೆಯಲ್ಲಿ ಬಿಯರ್ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು
Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Kasaragod: ಮುಖವಾಡ ಧರಿಸಿದ ವ್ಯಕ್ತಿಯಿಂದ ವಿದ್ಯಾರ್ಥಿಗೆ ಇರಿತ; ಪ್ರಕರಣ ದಾಖಲು
Kasaragodu: ನಾಪತ್ತೆಯಾಗಿದ್ದ ಯುವಜೋಡಿ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.