ಕಾಸರಗೋಡು: 133 ಕೋವಿಡ್ ಪಾಸಿಟಿವ್ ಕೇಸ್ ದೃಢ
Team Udayavani, Sep 4, 2020, 12:15 AM IST
ಸಾಂದರ್ಭಿಕ ಚಿತ್ರ
ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರ 133 ಮಂದಿಗೆ ಕೋವಿಡ್ ದೃಢಪಟ್ಟಿದೆ. 120 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗಲಿದೆ. 8 ಮಂದಿ ವಿದೇಶದಿಂದ, ಐವರು ಇತರ ರಾಜ್ಯಗಳಿಂದ ಬಂದವರು. 170 ಮಂದಿ ಗುಣಮುಖರಾಗಿದ್ದಾರೆ.
ಕಾಸರಗೋಡು-26, ಮಧೂರು -13, ಚೆಮ್ನಾಡ್-12, ಉದುಮ-11, ಕಾಞಂಗಾಡ್ -10, ಚೆಂಗಳ-8, ಮೊಗ್ರಾಲ್ ಪುತ್ತೂರು, ಪಳ್ಳಿಕ್ಕರೆ, ಅಜಾನೂರು – ತಲಾ 6, ಮುಳಿಯಾರು, ಕುಂಬಳೆ- ತಲಾ 5, ಎಣ್ಮಕಜೆ-3, ಪೈವಳಿಕೆ, ಪುತ್ತಿಗೆ, ಪಡನ್ನ, ನೀಲೇಶ್ವರ, ಕಯ್ಯೂರು ಚೀಮೇನಿ, ಕಾರಡ್ಕ, ಮಂಜೇಶ್ವರ, ಮಂಗಲ್ಪಾಡಿ – ತಲಾ 2, ಮಡಿಕೈ, ಕಿನಾನೂರು ಕರಿಂದಳಂ, ಪುಲ್ಲೂರು ಪೆರಿಯ, ಕುತ್ತಿಕೋಲು ತಲಾ -1 ಪ್ರಕರಣ ವರದಿಯಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 1,292 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಸಂಬಂಧ 42 ಮಂದಿ ಮೃತಪಟ್ಟಿದ್ದಾರೆ.
ಕೇರಳದಲ್ಲಿ 1,553 ಪ್ರಕರಣ
ಕೇರಳದಲ್ಲಿ ಗುರುವಾರ 1,553 ಮಂದಿಗೆ ಸೋಂಕು ದೃಢವಾಗಿದೆ. 1,950 ಮಂದಿ ಗುಣಮುಖರಾಗಿದ್ದಾರೆ. 10 ಮಂದಿಯ ಸಾವಿಗೆ ಕೋವಿಡ್ ಕಾರಣ ಎನ್ನಲಾಗಿದೆ.
ವಿದೇಶದಿಂದ ಬರುವವರಿಗೆ ನೋಂದಣಿ ಕಡ್ಡಾಯ
ವಿದೇಶದಿಂದ ಆಗಮಿಸುವವರು ಕೋವಿಡ್ 19 ಜಾಗ್ರತಾ ಪೋರ್ಟಲ್‌ನಲ್ಲಿ ನೋಂದಾಯಿಸಬೇಕು. 14 ದಿನಗಳ ಕ್ವಾರಂಟೈನ್ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಗುರುವಾರ ನಡೆದ ಜಿಲ್ಲಾ ಮಟ್ಟದ ಕೊರೊನಾ ಕೋರ್ ಸಮಿತಿಯ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಅವರು ಈ ವಿಚಾರ ತಿಳಿಸಿದರು.
ಕೊಡಗು: 61 ಪ್ರಕರಣ; ಮಕ್ಕಳಲ್ಲಿ ಸೋಂಕು ಹೆಚ್ಚಳ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗುರುವಾರ 61 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಸೋಂಕಿತರಲ್ಲಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಆತಂಕ್ಕೆ ಕಾರಣವಾಗಿದೆ.
ಕೂಡಿಗೆ ಸೈನಿಕ ಶಾಲೆಯ 3 ವರ್ಷದ ಬಾಲಕಿ, ಗೋಣಿಕೊಪ್ಪ ಸೀಗೇತೋಡಿನ 10 ವರ್ಷದ ಬಾಲಕಿ, ಕುಶಾಲನಗರ ಕುಡ್ಲುರುವಿನ 10ರ ಬಾಲಕ ಮತ್ತು 11ರ ಬಾಲಕಿ, ಹೆಬ್ಟಾಲೆಯ ಕನಕ ಬಾಕ್‌ನ 17ರ ಬಾಲಕಿ, ಸುಂಟಿಕೊಪ್ಪ ಗುಂಡಿಗುಟ್ಟಿ ಪ್ರಾಥಮಿಕ ಶಾಲೆ ಬಳಿಯ 16ರ ಬಾಲಕಿ, ಚೆಟ್ಟಳ್ಳಿ ಶ್ರೀಮಂಗಲದ ಚೇರಳ ಮಸೀದಿ ಬಳಿಯ 11ರ ಬಾಲಕ, ವೀರಾಜಪೇಟೆ ಪಾಲಿಬೆಟ್ಟದ ಅತ್ತೂರು ನಲ್ಲಕೋಟೆ ಎಸ್ಟೇಟ್‌ನ 10 ವರ್ಷದ ಬಾಲಕಿಯಲ್ಲಿ ಸೋಂಕು ದೃಢವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragod: ಹೊಳೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು
Kasaragod Crime News: ಮೂವರು ಮಕ್ಕಳ ಸಹಿತ ತಾಯಿ ನಾಪತ್ತೆ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರ ಕೊ*ಲೆ ಪ್ರಕರಣ: 14 ಮಂದಿ ತಪ್ಪಿತಸ್ಥರು
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.