ಕಾಸರಗೋಡು: 7 ಮಂದಿಗೆ ಸೋಂಕು ದೃಢ
Team Udayavani, May 23, 2020, 6:08 AM IST
ಸಾಂದರ್ಭಿಕ ಚಿತ್ರ
ಕಾಸರಗೋಡು: ಕೇರಳದಲ್ಲಿ ಶುಕ್ರವಾರ ಒಂದೇ ದಿನ 42 ಕೋವಿಡ್ ಪ್ರಕರಣಗಳು ದೃಢಗೊಂಡಿವೆ. ಕೇರಳಕ್ಕೆ ಇದು ಕೋವಿಡ್ ಇತಿಹಾಸದ ಕರಾಳ ಶುಕ್ರವಾರವಾಗಿದೆ. ಇದೇ ವೇಳೆ ಇಬ್ಬರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ 7 ಮಂದಿಗೆ ಸೋಂಕು ದೃಢಗೊಂಡಿದೆ. ಇದರೊಂದಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 26 ಕ್ಕೇರಿತು. ಸೋಂಕಿತರ ಪೈಕಿ 21 ಮಂದಿ ಮಹಾರಾಷ್ಟ್ರದಿಂದ ಬಂದವರು. ತಮಿಳುನಾಡು ಹಾಗೂ ಆಂಧ್ರದಿಂದ ಬಂದ ತಲಾ ಒಬ್ಬರಿಗೆ ರೋಗ ಬಾಧಿಸಿದೆ. ವಿದೇಶದಿಂದ ಬಂದ 17 ಮಂದಿಗೆ ಸೋಂಕು ದೃಢಪಟ್ಟಿದೆ. ಕಣ್ಣೂರಿನಲ್ಲಿ ಒಬ್ಬರಿಗೆ ಸಂಪರ್ಕದಿಂದ ರೋಗ ಬಂದಿದ್ದು, ಕಲ್ಲಿಕೋಟೆಯಲ್ಲಿ ಓರ್ವ ಆರೋಗ್ಯ ಕಾರ್ಯಕರ್ತೆಗೆ ರೋಗ ಬಾಧಿಸಿದೆ.
7 ಮಂದಿಗೆ ಪಾಸಿಟಿವ್
ಜಿಲ್ಲೆಯಲ್ಲಿ ಶುಕ್ರವಾರ 7 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಪುತ್ತಿಗೆ ನಿವಾಸಿಯಾಗಿರುವ 57 ವರ್ಷ ಪ್ರಾಯದ ವ್ಯಕ್ತಿ, ಮುಳಿಯಾರು ನಿವಾಸಿ 42 ವರ್ಷದ ವ್ಯಕ್ತಿ, ಕುಂಬಳೆ ನಿವಾಸಿಗಳಾದ 36, 38, 42, 56 ವರ್ಷ ಪ್ರಾಯದ ವ್ಯಕ್ತಿಗಳಿಗೆ ಸೋಂಕು ಖಚಿತಗೊಂಡಿದೆ. ಇನ್ನೊಬ್ಬರು ಕುಂಬಳೆ ನಿವಾಸಿ 42 ವರ್ಷದವರು. ಇವರೆಲ್ಲರೂ ಪುರುಷರು. ಪುತ್ತಿಗೆ ನಿವಾಸಿ ಮಹಾರಾಷ್ಟ್ರದಿಂದ ಆಗಮಿಸಿದ್ದಾರೆ. ಕುಂಬಳೆ ನಿವಾಸಿಗಳು ಒಂದೇ ವಾಹನದಲ್ಲಿ ಸಂಚರಿಸಿದ್ದು, ಆ ಮೂಲಕ ಸೋಂಕು ತಗುಲಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2,648 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 2,161 ಮಂದಿ, ಆಸ್ಪತ್ರೆಗಳಲ್ಲಿ 487 ಮಂದಿ ನಿಗಾದಲ್ಲಿದ್ದಾರೆ. ಶುಕ್ರವಾರ 60 ಮಂದಿ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.
364 ಮಂದಿ ವಿರುದ್ಧ ಕೇಸು
ಮಾಸ್ಕ್ ಧರಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 364 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ.
ಲಾಕ್‌ಡೌನ್ ಉಲ್ಲಂಘನೆ
ಲಾಕ್‌ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 5 ಪ್ರಕರಣಗಳನ್ನು ದಾಖಲಿಸಲಾಗಿದೆ. 6 ಮಂದಿಯನ್ನು ಬಂಧಿಸಲಾಗಿದ್ದು, 4 ವಾಹನಗಳನ್ನು ವಶಪಡಿಸಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 2,361 ಕೇಸು ದಾಖಲಿಸಲಾಗಿದೆ. 3,009 ಮಂದಿಯನ್ನು ಬಂಧಿಸಲಾಗಿದ್ದು, 955 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.