ಜನರನ್ನು ವಂಚಿಸಿದ ಎಡರಂಗದ ಜನಪ್ರತಿನಿಧಿಯ ವಿಧಿ ನಿರ್ಣಯವಾಗಲಿದೆ;ಸುನಿಲ್
Team Udayavani, Mar 29, 2019, 6:57 PM IST
ಬದಿಯಡ್ಕ: ಮುಂಬರುವ ಲೋಕಸಭಾ ಚುನಾವಣೆಯೂ ಕಳೆದ 30 ವರ್ಷಗಳಿಂದ ಕಾಸರಗೋಡಿನ ಜನರನ್ನು ವಂಚಿಸಿದ ಎಡರಂಗದ ಜನಪ್ರತಿನಿಧಿಯ ವಿಧಿ ನಿರ್ಣಯವಾಗಲಿದೆಯೆಂದು ಯುವಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಸುನಿಲ್ ಪಿ.ಆರ್.ರವರು ಹೇಳಿದರು. ಕಂಬಾxಜೆ ಪಂಚಾಯತಿನ ಪೊಡಿಪಳ್ಳದಲ್ಲಿ ಚುನಾವಣಾ ಸಮಿತಿ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಳೆದ 15 ವರ್ಷ ಕಾಲ ಲೋಕಸಭಾ ಪ್ರತಿನಿಧಿಯಾಗಿರುವ ಕೆ.ಕರುಣಾಕರನ್ ಅಭಿವೃದ್ಧಿ ವಿಚಾರದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಅಭಿವೃದ್ಧಿ ವಿಒಚಾರದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಅಭಿವೃದ್ಧಿ ನಡೆಸುವಲ್ಲಿ ವಿಫಲರಾದ ಇವರು ಇದೀಗ ಕೇಂದ್ರ ಸರಕಾರ ಮಾಡಿದ ಅಭಿವೃದ್ಧಿ ಕಾರ್ಯವನ್ನು ಸ್ವಂತ ಪರಿಶ್ರಮದ ಭಾಗವಾಗಿ ಬಂದಿದೆಯೆಂದು ಯಾವದೇ ಅಂಜಿಕೆಯಿಲ್ಲದೇ ಹೇಳುತ್ತಾ ನಡೆಯುವುದು ನಾಚಿಕೆಗೇಡು ಎಂದೂ ಅವರು ತಿಳಿಸಿದರು. ತಾನೇನಾದರೂ ಅಭಿವೃದ್ಧಿಯನ್ನು ಮಾಡಿದ್ದರೆ ಅದು ಕಳೆದ 5 ವರ್ಷಗಳ ಕಾಲಾವಧಿಯಲ್ಲಿ ಮಾಡಿರುವುದು ಎಂಬ ಕರುಣಾಕರನ್‌ರವರ ಕೇಳಿಕೆಯಿಂದಲೇ ಮೋದಿಯವರಿಗೆ ದೇಶದ ಅಭಿವೃದ್ಧಿಯ ಬಗ್ಗೆಯಿರುವ ಕಾಲಜಿಯನ್ನು ತಿಳಿಯಬಹುದು. ಈ ಚುನಾವಣೆಯ ಗೆಲುವು ಅಭಿವೃದ್ಧಿಯ ಪರವಾಗಿದೆ. ಅದು ನರೇಂದ್ರ ಮೋದಿಯವರ ಅಭಿವೃದ್ಧಿಯ ವಿಜಯವಾಗಲಿದೆ ಎಂದೂ ಅವರು ಹೇಳಿದರು. ಬಿಜೆಪಿ ಕುಂಬಾxಜೆ ಪಂಚಾಯತು ಸಮಿತಿ ಅಧ್ಯಕ್ಷರು ಮಾತನಾಡಿ ಕೇಂದ್ರ ಸರಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸಬೇಕು, ಅಭಿವೃದ್ಧಿಗಾಗಿ ಮತ ಎಂಬಂತೆ ಮತಯಾಚಿಸುವುದರೊಂದಿಗೆ ಕಾಸರಗೋಡಿನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಶಕ್ತಿಮೀರಿ ದುಡಿಯಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು. ಬಿಜೆಪಿ ಬೂತು ಸಮಿತಿ ಅಧ್ಯಕ್ಷರಾದ ಜನಾರ್ಧನರವರು ಅಧಯಕ್ಷತೆ ವಹಿಸಿದರು. ಬಿಜೆಪಿ ಪಂಚಾಯತು ಸಮಿತಿ ಸದಸ್ಯರಾದ ಜಯಪ್ರಕಾಶ ಶೆಟ್ಟಿ , ಶಕ್ತಿಕೇಂದ್ರದ ಪ್ರಮುಖರಾದ ರಾಮಕೃಷ್ಣ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬೂತು ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಸ್ವಾಗತಿಸಿ, ರಾಮಕೃಷ್ಣ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
1971 ಯುದ್ಧದ ಚಿತ್ರ ಮಾಣಿಕ್ ಷಾ ಕೇಂದ್ರದಲ್ಲಿ ಅಳವಡಿಕೆ: ಸೇನೆ ಹೇಳಿಕೆ
Supreme Court: ಆಡಳಿತ ವಿಳಂಬದಿಂದ ಅಕ್ರಮ ನಿರ್ಮಾಣ ಸಕ್ರಮ ಆಗುವುದಿಲ್ಲ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
Election Commission: ಮುಂದಿನ ವಾರವೇ ದಿಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ?
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.