March 22 : ಕಾಸರಗೋಡು ಕ್ರೈಂ ಸುದ್ದಿಗಳು
Team Udayavani, Mar 23, 2018, 6:45 AM IST
ಶರಣಪ್ಪ ಕೊಲೆ ಪ್ರಕರಣ : ತನಿಖೆ ಛತ್ತೀಸ್‌ಗಡ್‌ಗೆ ವಿಸ್ತರಣೆ
ಪೆರ್ಲ: ಕರ್ನಾಟಕ ಗದಗ ಜಿಲ್ಲೆಯ ಅರುಣಾಶಿಯ ದೇವಪ್ಪ ಅವರ ಪುತ್ರ ವೆಲ್ಡಿಂಗ್ ಕಾರ್ಮಿಕ ಶರಣಪ್ಪ (26) ಅವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯನ್ನು ಛತ್ತೀಸ್‌ಗಡ್‌ಗೆ ವಿಸ್ತರಿಸಲಾಗಿದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎಂಟಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಛತ್ತೀಸ್‌ಗಡ್ ನಿವಾಸಿಗಳಿಬ್ಬರು ಕೊಲೆ ಮಾಡಿದ್ದಾರೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.
ವ್ಯಾಪಾರಿ ಮನೆಯಿಂದ ಕಳವು
ಕಾಸರಗೋಡು: ಸೂರ್ಲಿನಲ್ಲಿ ಕೋಳಿ ಮಾರಾಟ ಅಂಗಡಿ ನಡೆಸುತ್ತಿರುವ ವ್ಯಾಪಾರಿ ಉಳಿಯತ್ತಡ್ಕ ನ್ಯಾಶನಲ್ ನಗರದ ಹಸೈನಾರ್ ಚಾಲಾ ಅವರ ಮನೆಯಿಂದ 20 ಪವನ್ ಚಿನ್ನದ ಆಭರಣ ಕಳವು ಮಾಡಲಾಗಿದೆ.
ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಕಳವು ಮಾಡಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಬೆರಳ ಗುರುತು ತಜ್ಞರು ಬೆರಳ ಗುರುತು ಪತ್ತೆಹಚ್ಚಿದ್ದಾರೆ.
ಬೈಕ್‌ಗೆ ಕಾರು ಢಿಕ್ಕಿ : ಕೇಸು ದಾಖಲು
ಮಂಜೇಶ್ವರ: ಪೊಸೋಟುನಲ್ಲಿ ಕಾರು ಢಿಕ್ಕಿ ಹೊಡೆದು ಬೈಕ್ ಸವಾರ ಕಯ್ನಾರು ಕಣ್ಣಂಗಾಡಿ ಹೌಸ್‌ನ ಅಂದು ಹಾಜಿ ಅವರ ಪುತ್ರ ಮೊಹಮ್ಮದ್ ಹನೀಫ್ (37) ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ಕಾರು ಚಾಲಕನ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.
ಬಸ್‌ಗಳು ಢಿಕ್ಕಿ : ವಿದ್ಯಾರ್ಥಿನಿಗೆ ಗಾಯ
ಸೀತಾಂಗೋಳಿ: ಎರಡು ಖಾಸಗಿ ಬಸ್‌ಗಳು ಢಿಕ್ಕಿ ಹೊಡೆದು ಬೇಳ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿನಿ, ಶಿರಿಬಾಗಿಲು ನಿವಾಸಿ ಶೈಲಾ ಶಿಹಾಬುದ್ದೀನ್ (16) ಗಾಯಗೊಂಡಿದ್ದಾರೆ. ಈಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಕ್ವಾರ್ಟರ್ಸ್‌ನಿಂದ ಕಳವು
ಕಾಸರಗೋಡು: ಕೋಟೆ ರಸ್ತೆಯ ಕರಿಪ್ಪೋಡಿ ನಿವಾಸಿ ಸಸಾದ್ ಖಾನ್ ಅವರ ಕ್ವಾರ್ಟರ್ಸ್‌ನಿಂದ 15 ಸಾವಿರ ರೂ. ನಗದು ಮತ್ತು ಗುರುತು ಚೀಟಿಯನ್ನು ಕಳವು ಮಾಡಲಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಯುವತಿಯರಿಬ್ಬರು ನಾಪತ್ತೆ
ಕುಂಬಳೆ: ಆರಿಕ್ಕಾಡಿ ಬನ್ನಂಗುಳ ನಿವಾಸಿ ಆಯಿಷತ್ ಮುನೈಬಾ (21) ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಮಾ.20 ರಿಂದ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಉಪ್ಪಳ ಭಗವತಿ ನಿವಾಸಿ ಅಬ್ದುಲ್ ಖಾದರ್ ಅವರ ಪುತ್ರಿ ಸಪ್ರೀನಾ (19) ಮಾ.19 ರಿಂದ ನಾಪತ್ತೆಯಾಗಿರುವುದಾಗಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ.
ಮರಳು ರಾಶಿ ಪತ್ತೆ, ವಶಕ್ಕೆ
ಕುಂಬಳೆ: ಧರ್ಮತ್ತಡ್ಕದ ನೀರಿನ ಟ್ಯಾಂಕ್ ಸಮೀಪದ ವ್ಯಕ್ತಿಯೊಬ್ಬರ ಹಿತ್ತಿಲಿನಲ್ಲಿ ರಾಶಿ ಹಾಕಿದ್ದ 30 ಲೋಡ್ ಮರಳು ಪತ್ತೆ ಹಚ್ಚಿದ ಕುಂಬಳೆ ಪೊಲೀಸರು ಮರಳು ವಶಪಡಿಸಿಕೊಂಡಿದ್ದಾರೆ. ಅಂಗಡಿಮೊಗರು ಹೊಳೆಯಿಂದ ಮರಳುಗಾರಿಕೆ ನಡೆಸಿ ರಾಶಿ ಹಾಕಲಾಗಿತ್ತು.
ಮರಳು ಸಾಗಾಟ : 3 ಲಾರಿ ವಶಕ್ಕೆ
ಕುಂಬಳೆ: ಕರ್ನಾಟಕದಿಂದ ಕೇರಳಕ್ಕೆ ಸಾಗಿಸುತ್ತಿದ್ದ 3 ಲೋಡ್ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಣಿಪುರ ರಾಷ್ಟ್ರೀಯ ಹೆದ್ದಾರಿಯಿಂದ ಎರಡು ಲೋಡ್ ಮರಳು ವಶಪಡಿಸಿಕೊಂಡು ಲಾರಿಯ ಚಾಲಕರಾದ ಶಿವಮೊಗ್ಗ ನಿವಾಸಿ ಪ್ರವೀಣ್ (24) ಮತ್ತು ವರ್ಕಾಡಿಯ ಶೇಕ್ ಅಬ್ದುಲ್ ಸಲಾಂ (24)ನನ್ನು ಕುಂಬಳೆ ಪೊಲೀಸರು ಬಂಧಿಸಿದರು.
ಮೊಗ್ರಾಲ್‌ಪುತ್ತೂರಿನಿಂದ ಇನ್ನೊಂದು ಮರಳು ಸಾಗಿಸುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡು ಕಡಂಬಾರ್‌ನ ಮೊಹಮ್ಮದ್ ಸಾಬಿರ್ (19)ನನ್ನು ಬಂಧಿಸಿದ್ದಾರೆ.
ಬಾಲಕನಿಗೆ ಕಿರುಕುಳ : ಆರೋಪಿ ನ್ಯಾಯಾಲಯಕ್ಕೆ ಶರಣು
ಕಾಸರಗೋಡು: ಹತ್ತು ವರ್ಷದ ಬಾಲಕನಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪಡನ್ನಕ್ಕಾಡು ಕರುವಳ ನಿವಾಸಿ ಕುಂಞಿಕಣ್ಣನ್ (52) ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ಶರಣಾಗಿದ್ದಾನೆ.
ಮಟ್ಕಾ : ಇಬ್ಬರ ಬಂಧನ
ಕಾಸರಗೋಡು: ಕರಂದಕ್ಕಾಡ್‌ನಲ್ಲಿ ಮಟ್ಕಾ ದಂಧೆಯಲ್ಲಿ ತೊಡಗಿದ್ದ ಕೂಡ್ಲಿನ ಜಯಪ್ರಕಾಶ್ (34) ಮತ್ತು ಅಡ್ಕತ್ತಬೈಲಿನ ಮಣಿ (32)ಯನ್ನು ಬಂಧಿಸಿ ಪೊಲೀಸರು ಇವರಿಂದ 1,460 ರೂ. ವಶಪಡಿಸಿಕೊಂಡಿದ್ದಾರೆ.
ಅಂಗಡಿಗೆ ನುಗ್ಗಿ ಹಲ್ಲೆ
ಕುಂಬಳೆ: ಮೊಬೈಲ್‌ಗೆ ರೀಚಾರ್ಜ್ ಮಾಡಲು ಬಂದ ಮಹಿಳೆಯರ ನಂಬ್ರ ನೀಡದ ದ್ವೇಷದಿಂದ ಅಂಗಡಿಗೆ ನುಗ್ಗಿ ಅಂಗಡಿ ಮಾಲಕನಿಗೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಮಂಜೇಶ್ವರ ಪೇಟೆಯಲ್ಲಿ ಕಾರ್ಯಾಚರಿಸುತ್ತಿರುವ ಮೊಬೈಲ್ ಝೋನ್ ಅಂಗಡಿಯ ಮಾಲಕ ಉಳುವಾರಿನ ಶರೀಫ್ ಅವರಿಗೆ ವ್ಯಕ್ತಿಯೋರ್ವ ಹಲ್ಲೆ ಮಾಡಿದ್ದಾನೆ. ಗಾಯಾಳು ಶರೀಫ್ ಅವರನ್ನು ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
ಯುವಕನಿಗೆ ಹಲ್ಲೆ : ಕೇಸು ದಾಖಲು
ಮಂಜೇಶ್ವರ: ಉಜಾರ್ ಉಳುವಾರ್ ತ್ರಿಕಂಡ ನಿವಾಸಿ ಮೊಹಮ್ಮದ್ ಅವರ ಪುತ್ರ ಮೊಹಮ್ಮದ್ ಶರೀಫ್ (24) ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜೇಶ್ವರ ನಿವಾಸಿ ಪೊಡಿಮೋಣು ಅವರ ಪುತ್ರ ಉಪ್ಪುಣು ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.