ಕಾಸರಗೋಡು ಭಾಗದ ಅಪರಾಧ ಸುದ್ದಿಗಳು
Team Udayavani, May 11, 2019, 6:00 AM IST
ನಕಲಿ ಚಿಕಿತ್ಸೆ : ನಕಲಿ ವೈದ್ಯನ ವಿರುದ್ಧ ಕೇಸು ದಾಖಲು
ಪೆರ್ಲ: ವಿವಿಧ ರೋಗಗಳಿಗೆ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯನ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.ಪೆರ್ಲ ಇಡಿಯಡ್ಕದಲ್ಲಿ ನಾಲ್ಕು ವರ್ಷಗಳಿಂದ ಚಿಕಿತ್ಸೆ ನೀಡುತ್ತಿದ್ದ ಕರ್ನಾಟಕ ನಿವಾಸಿ ಸಯ್ಯಿದ್ ಆಬಿದ್ ತಂಙಳ್ (55) ವಿರುದ್ಧ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ಅವರ ಆದೇಶದಂತೆ ಕೇಸು ದಾಖಲಿಸಲಾಗಿದೆ.
ಮರಳು ಸಾಗಾಟ : ಪೊಲೀಸರಿಗೆ ದೂರು ನೀಡಿದ್ದಕ್ಕೆ ಮನೆಗೆ ನುಗ್ಗಿ ತಂಡದಿಂದ ದಂಪತಿಗೆ ಹಲ್ಲೆ
ಕುಂಬಳೆ: ನಿರಂತರವಾಗಿ ಮರಳು ಸಾಗಾಟ ಬಗ್ಗೆ ಪೊಲೀಸರಿಗೆ ನೀಡಿದ ದೂರು ಸೋರಿಕೆಯಾಗಿದೆ. ಇದರಿಂದ ದೂರು ನೀಡಿದ ಮನೆಯವರಿಗೆ ತಂಡವೊಂದು ಹಲ್ಲೆ ಮಾಡಿದ ಘಟನೆ ನಡೆದಿದೆ. ಮಂಜೇಶ್ವರ ಹೊಸಬೆಟ್ಟು ಕಡಪ್ಪುರ ನಿವಾಸಿ ಅಬ್ದುಲ್ ಹಕೀಂ (37) ಮತ್ತು ಪತ್ನಿ ನಸೀಮಾ (30) ಅವರಿಗೆ ತಂಡವೊಂದು ಮನೆಗೆ ನುಗ್ಗಿ ಹಲ್ಲೆ ಮಾಡಿದೆ. ಮೇ 9ರಂದು ರಾತ್ರಿ 9.30 ಕ್ಕೆ ಮನೆಗೆ ನುಗ್ಗಿದ ಮೂರು ಮಂದಿಯ ತಂಡ ಮೂವರು ಮಕ್ಕಳ ಮುಂದೆಯೇ ಕಬ್ಬಿಣದ ಸರಳಿನಿಂದ ಹೊಡೆದು ಹಲ್ಲೆ ಮಾಡಿದೆ.
ಗಾಯಾಳುಗಳು ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೊಸಬೆಟ್ಟು ಕಡಪ್ಪುರದಿಂದ ಮರಳು ಕಳ್ಳ ಸಾಗಾಟ ನಡೆಯುತ್ತಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತೆನ್ನಲಾಗಿದೆ.
ಕಾರು ಢಿಕ್ಕಿ : ಮೀನು ಕಾರ್ಮಿಕ ಸಾವು
ಕಾಸರಗೋಡು: ಬೇಕಲ ಸೇತುವೆ ಬಳಿ ಕಾರು ಢಿಕ್ಕಿ ಹೊಡೆದು ಮೀನು ಕಾರ್ಮಿಕ ಬೇಕಲ ತಂಬುರಾನ್‌ವಳಪ್ ವೇಲಿಪುರಂ ಹೌಸ್‌ನ ಕಣ್ಣನ್ ಅವರ ಪುತ್ರ ಬಾಬು ಕೆ. (58) ಸಾವಿಗೀಡಾದರು.
ನೀರು ವಿತರಿಸುತ್ತಿದ್ದ
ಟ್ಯಾಂಕರ್ ಪಲ್ಟಿ : ಇಬ್ಬರಿಗೆ ಗಾಯ
ಉಪ್ಪಳ: ನೀರು ವಿತರಿಸುತ್ತಿದ್ದ ಟ್ಯಾಂಕರ್ ಲಾರಿಯೊಂದು ಹಿಂಬದಿಯ ಆ್ಯಕ್ಸಿಲ್ ತುಂಡಾಗಿ ಪಲ್ಟಿಯಾದ ಘಟನೆ ಬಂದ್ಯೋಡು ಪಂಜದಲ್ಲಿ ಮೇ 10ರಂದು ಬೆಳಗ್ಗೆ ನಡೆದಿದೆ.ಟ್ಯಾಂಕರ್‌ನಲ್ಲಿದ್ದ ಚಾಲಕ ಪಚ್ಲಂಪಾರೆ ನಿವಾಸಿ ನಿಶಾಂತ್(25) ಮತ್ತು ಸಹಾಯಕ ಅಜೇಶ್ ಗಾಯಗೊಂಡಿದ್ದಾರೆ. ಅವರನ್ನು ಬಂದ್ಯೋಡ್‌ನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಸಾರಾಯಿ ಸಹಿತ ಬಂಧನ
ಅಡೂರು: 10 ಲೀಟರ್ ಸಾರಾಯಿ ಸಹಿತ ಬಳ್ಳಕಾನ ನಿವಾಸಿ ಕೃಷ್ಣೇಶ್ (37) ನನ್ನು ಅಬಕಾರಿ ಅಧಿಕಾರಿಗಳು ಬಳ್ಳಕಾನದಿಂದ ಬಂಧಿಸಿದ್ದಾರೆ.
ಸ್ಕೂಟರ್ ಢಿಕ್ಕಿ : ಗಾಯ
ಉಪ್ಪಳ: ಅಂಗಡಿಪದವಿನಲ್ಲಿ ಬೈಕ್ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಅಂಗಡಿಪದವು ಶಾಂತಿನಗರ ನಿವಾಸಿ ಅಂದುಂಞಿ ಅವರ ಪುತ್ರ ಅಬ್ದುಲ್ ರಹಿಮಾನ್ (47) ಗಾಯಗೊಂಡಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಪೊದೆಗೆ ಬೆಂಕಿ
ಉಪ್ಪಳ: ದೈಗೋಳಿಯಲ್ಲಿ ಡಾ| ಶಾರದಾ ಅವರ ಹಿತ್ತಿಲಿನಲ್ಲಿ ಪೊದೆಗೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದ್ದು ಅಗ್ನಿಶಾಮಕ ದಳ ಬೆಂಕಿಯನ್ನು ಆರಿಸಿತು.
ಸೋಂಕಾಲು ಗುಳಿಗ ಬನದ ಪರಿಸರದಲ್ಲಿ ಪೊದೆಗೆ ಬೆಂಕಿ ಹತ್ತಿಕೊಂಡಿದ್ದು ಉಪ್ಪಳದ ಅಗ್ನಿಶಾಮಕ ದಳ ಬೆಂಕಿಯನ್ನು ಆರಿಸಿತು.
ಮುಳ್ಳು ಹಂದಿ ಬೇಟೆ : ಇಬ್ಬರು ಶರಣು
ಕಾಸರಗೋಡು: 2018 ಜ.26 ರಂದು ವಿದ್ಯಾನಗರ ಪಡುವಡ್ಕದ ಖಾಸಗಿ ಹಿತ್ತಿಲೊಂದರಿಂದ ಮುಳ್ಳುಹಂದಿಯನ್ನು ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಕುತ್ತಿಕ್ಕೋಲ್ ನುರುವೀಟಿಲ್ ಅಂಬುಜಾಕ್ಷನ್ (45) ಮತ್ತು ಮುನ್ನಾಡಿನ ರಾಮಚಂದ್ರನ್ ಯಾನೆ ಪೊಕ್ಕನ್ (60) ಕಾಸರಗೋಡು ರೇಂಜ್‌ನ ಅರಣ್ಯ ಪಾಲಕರ ಮುಂದೆ ಶರಣಾಗಿದ್ದಾರೆ.
ಬಸ್‌ನಿಂದ ಮದ್ಯ ವಶಕ್ಕೆ
ಉಪ್ಪಳ: ವಾಮಂಜೂರು ಅಬಕಾರಿ ಚೆಕ್‌ಪೋಸ್ಟ್ ನಲ್ಲಿ ವಾಹನ ತಪಾಸಣೆ ವೇಳೆ ಬಸ್‌ನಿಂದ ವಾರೀಸುದಾರರಿಲ್ಲದ 3 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi: ನಕಲಿ ಕೇಸ್ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!
Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ
Mudhol: ಮರಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ; ಓರ್ವ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.