ಸೌರಶಕ್ತಿ ಪರಿಪೂರ್ಣತೆಯತ್ತ ಕಾಸರಗೋಡು ಜಿಲ್ಲೆ
Team Udayavani, Jan 18, 2021, 2:22 AM IST
ಕಾಸರಗೋಡು: ಸೌರಶಕ್ತಿಸಂಪನ್ಮೂಲವನ್ನು ಗರಿಷ್ಠ ಮಟ್ಟದಲ್ಲಿ ಬಳಸಿ ವಿದ್ಯುತ್ ವಲಯ ಬಲಪಡಿಸುವ ಸರಕಾರಿ ಯೋಜನೆಯ ಅಂಗವಾಗಿ ಕಾಸರಗೋಡು ಜಿಲ್ಲೆ ಸೌರಶಕ್ತಿ ಪರಿಪೂರ್ಣತೆಯತ್ತ ಸಾಗುತ್ತಿದೆ. ವಿವಿಧ ಯೋಜನೆಗಳ ಅನು ಷ್ಠಾನದ ಮೂಲಕ ರಾಜ್ಯದಲ್ಲೇ ಅತಿದೊಡ್ಡ ಸೌರಶಕ್ತಿ ಉತ್ಪಾದನೆ ಈಗ ಕಾಸರಗೋಡು ಜಿಲ್ಲೆಯಲ್ಲಿ ನಡೆಯಲಿದೆ.
ಸೋಲಾರ್ ಪಾರ್ಕ್‌ನ ದ್ವಿತೀಯ ಯೋಜನೆ ಜಿಲ್ಲೆಯ ಪೈವಳಿಕೆಯ ಕರ್ಮಂತೋಡಿಯ 250 ಎಕ್ರೆ ಜಾಗದಲ್ಲಿ ಸಿದ್ಧವಾಗಿದ್ದು, ಜ. 23ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು.ಸೌರಶಕ್ತಿಯ ಗರಿಷ್ಠ ಬಳಕೆ ಉದ್ದೇಶದಿಂದ ಕೇಂದ್ರ ಸರಕಾರದ ಯೋಜನೆ ಜವಾಹರ್ ಲಾಲ್ ನೆಹರೂ ನ್ಯಾಶನಲ್‌ಸೋಲಾರ್ ಮಿಷನ್‌ನಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ.ವಿದ್ಯುತ್ ಸಮಸ್ಯೆಗೆ ಪರಿಹಾರಪೈವಳಿಕೆಯಲ್ಲಿ ಉತ್ಪಾದಿನೆಯಾಗುವ ವಿದ್ಯುತ್ ಅನ್ನು ಕುಬಣೂರು 110 ಕೆ.ವಿ. ಸಬ್‌ಸ್ಟೇಶನ್ ಮೂಲಕ ಕೆಎಸ್‌ಇಬಿ ವಹಿಸಿಕೊಳ್ಳಲಿದೆ. ಕರ್ಮಂತೋಡಿಯಿಂದ ಕುಬಣೂರಿಗೆ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ 8.5 ಕಿ.ಮೀ. ಕವರ್ಡ್ ಕಂಟೈನರ್ ಇರುವ 33 ಕೆ.ವಿ. ಡಬಲ್ ಸರ್ಕ್ನೂಟ್ ಲೈನ್ ಸ್ಥಾಪಿಸಲಾಗಿದೆ. ಕುಬಣೂರಿನಲ್ಲಿ ಎರಡು 25 ಎಂ.ವಿ.ಎ. ಟ್ರಾನ್ಸ್ ಫಾರ್ಮರ್‌ಗಳ ಮೂಲಕ ಸ್ವೀಕರಿಸಿ ಕಾಸರಗೋಡು, ಮಂಜೇಶ್ವರ ವಲಯಕ್ಕೆ ಪೂರೈಕೆ ಮಾಡಲಾಗುವುದು ಎಂದು ಆರ್‌ಪಿಸಿಕೆಎಲ್ ಸಿಇಒ ಆಗಸ್ಟಿನ್ ಥಾಮಸ್ ತಿಳಿಸಿದ್ದಾರೆ.
ತೃತೀಯ ಹಂತ ನೆಲ್ಲತ್ತಡಂನಲ್ಲಿ :
5 ಮೆಗಾವ್ಯಾಟ್‌ನ ಮೂರನೇ ಹಂತದ ಸೋಲಾರ್ ಪಾರ್ಕ್ ಅನ್ನು ನೆಲ್ಲಿತ್ತಡಂನಲ್ಲಿ ಆರಂಭಿಸಲಾಗುವುದು. ಈ ಮೂಲಕ ಕಾಸರಗೋಡು ಜಿಲ್ಲೆ ಕೆಲವೇ ವರ್ಷಗಳಲ್ಲಿ ಸೌರಶಕ್ತಿ ವಲಯದಲ್ಲಿ ಸ್ವಾವಲಂಬಿಯಾಗಿ ಇತರ ಜಿಲ್ಲೆಗಳಿಗೂ ಸೌರ ವಿದ್ಯುತ್ ಪೂರೈಸುವಷ್ಟು ಪ್ರಬಲವಾಗಲಿದೆ.
ಪ್ರಥಮ ಸೋಲಾರ್ ಪಾರ್ಕ್ ಕಾರ್ಯಾರಂಭ :
ವಿದ್ಯುತ್ ಉತ್ಪಾದನೆಯ ಶೇ. 10 ಸೌರಶಕ್ತಿಯ ಮೂಲಕ ಎಂಬ ಗುರಿಯೊಂದಿಗೆ 105 ಮೆ.ವ್ಯಾ. ವಿದ್ಯುತ್ ಉತ್ಪಾದಿಸುವ ರಾಜ್ಯದ ಪ್ರಥಮ ಮೆಗಾ ಸೋಲಾರ್ ಪಾರ್ಕ್ ಕಾಸರಗೋಡು ಜಿಲ್ಲೆಯ ಅಂಬಲತ್ತರ ವೆಳ್ಳುಡದ 250 ಎಕ್ರೆ ಜಾಗದಲ್ಲಿ ಕಳೆದ ವರ್ಷದಿಂದ ಕಾರ್ಯಾಚರಿಸುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.