ಕಾಸರಗೋಡು ಜಿಲ್ಲೆಯಲ್ಲಿ ಹರತಾಳ; ಜನಜೀವನ ಅಸ್ತವ್ಯಸ್ತ


Team Udayavani, Jul 31, 2017, 7:00 AM IST

30ksde10.jpg

ಕಾಸರಗೋಡು: ತಿರುವನಂತಪುರದಲ್ಲಿ ಆರ್‌.ಎಸ್‌.ಎಸ್‌. ಕಾರ್ಯಕರ್ತನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆಯನ್ನು ಪ್ರತಿಭಟಿಸಿ ಕೇರಳ ರಾಜ್ಯದಾದ್ಯಂತ ಕರೆ ಕೊಟ್ಟ ಹರತಾಳ ಯಶಸ್ವಿಯಾಗಿದ್ದು ಕಾಸರಗೋಡು ಜಿಲ್ಲೆಯಲ್ಲಿ ಹರತಾಳದಿಂದ ಜನಜೀವನ ಅಸ್ತವ್ಯಸ್ತಗೊಂಡಿತು.

ಆರ್‌.ಎಸ್‌.ಎಸ್‌. ತಿರುವನಂತಪುರ ಶ್ರೀಕಾರ್ಯಂ ಇಡಲ ಕ್ಕೋಡಾಟ್‌ ಶಾಖೆಯ ಕಾರ್ಯವಾಹ ತಿರುವನಂತಪುರ ಕಲ್ಲಂಬಳ್ಳಿ ವಿನಾಯಕ ನಗರದ ಕುನ್ನಿಲ್‌ ವೀಟಿಲ್‌ ರಾಜೇಶ್‌ (34) ಅವರನ್ನು ಜು. 29ರಂದು ರಾತ್ರಿ ಕಡಿದು ಕೊಲೆ ಮಾಡಿದ ಘಟನೆ ಯನ್ನು ಪ್ರತಿಭಟಿಸಿ ಬಿಜೆಪಿ-ಆರ್‌ಎಸ್‌ಎಸ್‌ ರಾಜ್ಯವ್ಯಾಪಕ ಹರತಾಳಕ್ಕೆ ಕರೆ ನೀಡಿತ್ತು. ಇದರಂತೆ ಕಾಸರಗೋಡು ಜಿಲ್ಲೆಯಲ್ಲೂ ಹರತಾಳ ಯಶಸ್ವಿಯಾಗಿದ್ದು, ರಾಜ್ಯ ಸಾರಿಗೆ ಬಸ್‌, ಖಾಸಗಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ಇತರ ವಾಹನಗಳೂ ರಸ್ತೆಗಿಳಿಯಲಿಲ್ಲ. ಕೆಲವೊಂದು ವಾಹನಗಳನ್ನು ತಡೆದು ನಿಲ್ಲಿಸಲಾಯಿತು. ಅಂಗಡಿಗಳು ಮುಚ್ಚಿದ್ದವು. ಆರ್‌ಎಸ್‌ಎಸ್‌ ಕಾರ್ಯಕರ್ತನ ಕೊಲೆ ಕೃತ್ಯವನ್ನು ಪ್ರತಿಭಟಿಸಿ ಕಾಸರಗೋಡು ನಗರದಲ್ಲಿ ಬಿಜೆಪಿ- ಆರ್‌ಎಸ್‌ಎಸ್‌ ಕಾರ್ಯಕರ್ತರು ಮೆರವಣಿಗೆ ನಡೆಸಿದರು.

ಕರಂದಕ್ಕಾಡ್‌ನ‌ಲ್ಲಿ ವಾಹನಗಳನ್ನು ತಡೆದ ಸಂದರ್ಭದಲ್ಲಿ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಬಿಜೆಪಿಯನ್ನು ಅವಮಾನಿಸಿದ್ದ ರಿಂದ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಸಿಪಿಎಂನ ಕೈಗೊಂಬೆಗಳಂತೆ ವರ್ತಿಸುತ್ತಿರುವ ಪೊಲೀಸರು ವಿನಾ ಕಾರಣ ಬಿಜೆಪಿ ಕಾರ್ಯಕರ್ತರ ವಿರುದ್ಧ ಹರಿಹಾಯುತ್ತಿದ್ದಾರೆ. ಪೊಲೀಸರು ಇನ್ನು ಇದೇ ನಿಲುವನ್ನು ಮುಂದುವರಿಸಿದರೆ ತೀವ್ರ ತಿರುಗೇಟು ನೀಡಬೇಕಾದೀತು ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ತಿರುವನಂತಪುರದ ವಿನಾಯಕನಗರದ ಗೌರಿ ಸ್ಟೋರ್‌ ಪರಿಸರದಲ್ಲಿ ಜು. 29 ರಂದು ರಾತ್ರಿ 9.30ಕ್ಕೆ ಕಲ್ಲಂಬಳ್ಳಿ ವಿನಾಯಕ ನಗರದ ಕುನ್ನಿಲ್‌ ವೀಟಿಲ್‌ ರಾಜೇಶ್‌(34) ಅವರನ್ನು ಗುಂಪೊಂದು ಕಡಿದು ಕೊಲೆ ಮಾಡಿದೆ.

ಆರ್‌ಎಸ್‌ಎಸ್‌ ಶಾಖೆ ಮುಗಿಸಿ ರಾತ್ರಿ ಮನೆಗೆ ಮರಳುವ ಸಂದರ್ಭದಲ್ಲಿ ಹಾಲು ಖರೀದಿಸಲು ಗೌರಿ ಸ್ಟೋರ್‌ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಬೈಕ್‌ ಮತ್ತು ರಿಕ್ಷಾಗಳಲ್ಲಿ ಬಂದ ಗುಂಪೊಂದು ಮಾರಕಾಯುಧಗಳಿಂದ ರಾಜೇಶ್‌ ಅವರ ಮೇಲೆರಗಿ ಯದ್ವಾತದ್ವಾ ಕಡಿದು ಗಂಭೀರ ಗಾಯಗೊಳಿಸಿ ಪಕ್ಕದ ಹಿತ್ತಿಲಿಗೆ ಎಸೆದು ಪರಾರಿಯಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಜೇಶ್‌ ಅವರನ್ನು ಸ್ಥಳೀಯರು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಬಂದು ತಿರುವನಂತಪುರದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.

ಈ ಕೃತ್ಯವನ್ನು ಸಿಪಿಎಂ-ಡಿವೈಎಫ್‌ಐ ತಂಡ ನಡೆಸಿದೆ ಎಂದು ಬಿಜೆಪಿ ಆರೋಪಿಸಿದೆ. ಎರಡು ವಾರಗಳ ಹಿಂದೆ ಅಲ್ಲೇ ಪಕ್ಕದ ಬಿಜೆಪಿ ಕಾರ್ಯಕರ್ತರೋರ್ವರ ಮನೆಗೆ ದುಷ್ಕರ್ಮಿಗಳು ದಾಳಿ ನಡೆಸಿ ಹಾನಿಗೊಳಿಸಿದ್ದರು. ಈ ಬಗ್ಗೆ ದೂರು ನೀಡಿದ್ದರೂ ಪೊಲೀಸರು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಕೊಲೆಯಾದ ರಾಜೇಶ್‌ ತಂದೆ ಸುದರ್ಶನನ್‌, ತಾಯಿ ಲಲಿತಾ, ಪತ್ನಿ ರೀನಾ, ಮಕ್ಕಳಾದ ಆದಿತ್ಯನ್‌, ಅಭಿಷೇಕ್‌ ಅವರನ್ನು ಅಗಲಿದ್ದಾರೆ.
 

ಟಾಪ್ ನ್ಯೂಸ್

1-reee

T20; ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಶಮಿಗೆ ಅವಕಾಶ

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ

1-ayodhya

Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ

kejriwal 3

Ramesh Bidhuri ಬಿಜೆಪಿಯ ಸಿಎಂ ಫೇಸ್ ಎಂದು ಅಭಿನಂದನೆ ಸಲ್ಲಿಸಿದ ಕೇಜ್ರಿವಾಲ್!

rape

Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!

Vijayendra did not go to Kalaburagi due to Priyank Kharge’s threat: MLA Yatnal

BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kumbale: ರೈಲಿನಿಂದ ಬಿದ್ದು ಯುವಕನ ಸಾವು

Kumbale: ರೈಲಿನಿಂದ ಬಿದ್ದು ಯುವಕನ ಸಾವು

Kumbale: ಸಾರ್ವಜನಿಕರಿಗೆ ಸಮಸ್ಯೆ; ಇಬ್ಬರ ಬಂಧನ

Kumbale: ಸಾರ್ವಜನಿಕರಿಗೆ ಸಮಸ್ಯೆ; ಇಬ್ಬರ ಬಂಧನ

Manjeshwar: ಬೈಕ್‌ ಢಿಕ್ಕಿ; ಗಾಯಾಳು ಯುವಕನ ಸಾವು

Manjeshwar: ಬೈಕ್‌ ಢಿಕ್ಕಿ; ಗಾಯಾಳು ಯುವಕನ ಸಾವು

Kasaragod: ರೈಲು ಪ್ರಯಾಣಿಕನ ನಗದು, ಲ್ಯಾಪ್‌ಟಾಪ್‌ ಕಳವು

Kasaragod: ರೈಲು ಪ್ರಯಾಣಿಕನ ನಗದು, ಲ್ಯಾಪ್‌ಟಾಪ್‌ ಕಳವು

Kasaragod ಭಾಗದ ಅಪರಾಧ ಸುದ್ದಿಗಳು; ಕಳ್ಳನೋಟು ಸಹಿತ ವಶಕ್ಕೆ

Kasaragod ಭಾಗದ ಅಪರಾಧ ಸುದ್ದಿಗಳು; ಕಳ್ಳನೋಟು ಸಹಿತ ವಶಕ್ಕೆ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

NZ Vs SL: 3ನೇ ಏಕದಿನ; ಲಂಕಾಕ್ಕೆ ಜಯ, 2-1ರಿಂದ ಸರಣಿ ಕಿವೀಸ್‌ ವಶ

NZ Vs SL: 3ನೇ ಏಕದಿನ; ಲಂಕಾಕ್ಕೆ ಜಯ, 2-1ರಿಂದ ಸರಣಿ ಕಿವೀಸ್‌ ವಶ

Beejadi: ಗೋ ಕಳವಿಗೆ ಯತ್ನಿಸಿದ ಆರೋಪಿಯ ಸೆರೆ

Beejadi: ಗೋ ಕಳವಿಗೆ ಯತ್ನಿಸಿದ ಆರೋಪಿಯ ಸೆರೆ

1-reee

T20; ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಶಮಿಗೆ ಅವಕಾಶ

1-chirag

Malaysia Open; ಸೆಮಿಫೈನಲ್‌ನಲ್ಲಿ ಸಾತ್ವಿಕ್-ಚಿರಾಗ್ ಜೋಡಿಗೆ ಸೋಲು

Kumbale: ರೈಲಿನಿಂದ ಬಿದ್ದು ಯುವಕನ ಸಾವು

Kumbale: ರೈಲಿನಿಂದ ಬಿದ್ದು ಯುವಕನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.