ಮತದಾನ ಹಕ್ಕಿನ ಮಹತ್ವ ತಿಳಿಸಲು ಬೈಕೇರಿದ ಜಿಲ್ಲಾಧಿಕಾರಿ
ಕಾಸರಗೋಡು ಲೋಕಸಭೆ ಚುನಾವಣೆ ಕ್ಷೇತ್ರ
Team Udayavani, Mar 29, 2019, 6:54 AM IST
ಬದಿಯಡ್ಕ: ಮತದಾನ ಹಕ್ಕಿನ ಮಹತ್ವ ತಿಳಿಸಲು ಕಾಸರಗೋಡು ಜಿಲ್ಲಾಧಿಕಾರಿ ಬೈಕೇರಿ ಪರ್ಯಟನೆ ನಡೆಸಿದ್ದಾರೆ. ನನ್ನ ಮತದಾನ ನನ್ನ ಹಕ್ಕು ಎಂಬ ಸಂದೇಶದೊಂದಿಗೆ ಚುನಾವಣೆ ಆಯೋಗದ ಪ್ರಚಾರ ವಿಭಾಗವಾಗಿರುವ ಸ್ವೀಪ್ ವತಿಯಿಂದ ಬೋವಿಕ್ಕಾನದಲ್ಲಿ ಬುಲ್ಲೆಟ್ ಬೈಕ್ ರ್ಯಾಲಿ ನಡೆದಿದ್ದು , ಇದರ ಉದ್ಘಾಟನೆ ಹೊಣೆ ಹೊತ್ತಿದ್ದ ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು ಬೈಕ್ ಏರಿ ಸಂಚಾರ ನಡೆಸುವ ಮೂಲಕ ತಮ್ಮ ಕರ್ತವ್ಯ ನಡೆಸಿದ್ದಾರೆ. ಸ್ವೀಪ್ ನೋಡೆಲ್ ಅಧಿಕಾರಿ ವಿ. ಮಹಮ್ಮದ್ ನೌಷಾದ್ ಮತದಾನದ ಸಂದೇಶ ನೀಡಿದರು. ಕಾಸರಗೋಡಿನಿಂದ ವಿವಿಧ ಬೈಕ್ ರೈಡರ್ಸ್ ಕ್ಲಬ್ ಪ್ರತಿನಿಧಿಗಳಾದ 15 ಮಂದಿ ಸವಾರರು ಯಾತ್ರೆಯಲ್ಲಿ ಭಾಗವಹಿಸಿದರು.
ಜಿಲ್ಲೆಯ ಮಲೆನಾಡ ಪ್ರದೇಶಗಳಲ್ಲಿ ಈ ರ್ಯಾಲಿ ನಡೆಯಿತು. ಕುತ್ತಿಕೋಲು, ಪನತ್ತಡಿ, ಮಾವುಂಗಾಲ್ ಕಾಞಂಗಾಡ್, ಮೇಲ್ಪರಂಬ, ಕಾಸರಗೋಡು ಪ್ರದೇಶಗಳಲ್ಲಿ ಮತದಾನ ಸಂದೇಶ ನೀಡಲಾಯಿತು. ಸಹಕಾರಿ ಇನ್ಸ್‌ಪೆಕ್ಟರ್‌ರಾದ ಪಿ.ಬೈಜು ರಾಜ್, ಕೆ.ಸಿ.ಸತೀಶ್ ಅವರ ನೇತೃತ್ವದಲ್ಲಿ ಬೈಕ್ ರ್ಯಾಲಿ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಫೆ.21ರಂದು ತೆರೆಗೆ ಬರಲಿದೆ ʼವಿಷ್ಣು ಪ್ರಿಯಾʼ
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.