ಕಾಸರಗೋಡು ಲೋಕಸಭಾ ಕ್ಷೇತ್ರ: ಮತದಾರರ ಪಟ್ಟಿ ನವೀಕರಣ


Team Udayavani, Mar 22, 2019, 5:31 AM IST

kasargod.png

ಕಾಸರಗೋಡು: ಲೋಕಸಭೆ ಚುನಾವಣೆಗೆ ಜಿಲ್ಲೆಯಲ್ಲಿ ಸಿದ್ಧತೆ ಭರದಿಂದ ಸಾಗುತ್ತಿದ್ದರೆ, ಮತದಾರರ ಪಟ್ಟಿಯ ನವೀಕರಣ ಸಂಬಂಧ ಮಾ.18 ವರೆಗೆ ಲಭಿಸಿದ ಅರ್ಜಿಗಳು 22,576. ಇವರಲ್ಲಿ 10,403 ಮಂದಿಯ ಅರ್ಜಿಗಳು ಸ್ವೀಕೃತಗೊಂಡಿವೆ.

ಸೂಕ್ತ ದಾಖಲೆಗಳಿಲ್ಲದ, ಇತರ ರಾಜ್ಯಗಳ ಮತದಾರರ ಪಟ್ಟಿಯಲ್ಲೂ ಹೆಸರು ಹೊಂದಿರುವ, ತಪ್ಪು ಮಾಹಿತಿ ನೀಡಿ ಸಲ್ಲಿಸಿದವರ ಅರ್ಜಿ ತಿರಸ್ಕರಿಸಲಾಗಿದೆ. ಮಂಜೇಶ್ವರ ವಿಧಾನಸಭೆ ಕ್ಷೇತ್ರದಿಂದ 4,834 ಅರ್ಜಿಗಳು ಲಭಿಸಿದ್ದು, 1,759 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಕಾಸರಗೋಡು ವಿಧಾನಸಭೆ ಕ್ಷೇತ್ರದಿಂದ 4,351 ಅರ್ಜಿಗಳು ಲಭಿಸಿದ್ದು, 2,172 ಅರ್ಜಿ ಸ್ವೀಕರಿಸಲಾಗಿದೆ. ಉದುಮ ಕ್ಷೇತ್ರದಿಂದ 4527 ಅರ್ಜಿಗಳು ಲಭಿಸಿದ್ದು, 2,388 ಅರ್ಜಿಗಳನ್ನು ಸ್ವೀಕರಿಸಲಾಗಿದೆ.  ಕಾಂಞಂಗಾಡ್‌ ವಿಧಾನಸಭೆ ಕ್ಷೇತ್ರದಿಂದ 4,684 ಅರ್ಜಿಗಳು ಲಭಿಸಿದ್ದು, 2119 ಅರ್ಜಿಗಳು ಸ್ವೀಕೃತವಾಗಿವೆ. ತ್ರಿಕರಿಪುರದಿಂದ  4,180 ಅರ್ಜಿಗಳು ಲಭಿಸಿದ್ದು, 1965 ಅರ್ಜಿಗಳನ್ನು ಸ್ವೀಕರಿಸಲಾಗಿದೆ.

ಅನಿವಾಸಿ ಭಾರತೀಯರಿಂದ 975 ಅರ್ಜಿಗಳು  
ಜಿಲ್ಲೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅನಿವಾಸಿ ಭಾರತೀಯರಿಂದ ಈ ಬಾರಿ ಲಭಿಸಿದ್ದು 975 ಅರ್ಜಿಗಳು. ಇವುಗಳಲ್ಲಿ 331 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಪಟ್ಟಿಯಿಂದ ಹೆಸರು ತೆರವುಗೊಳಿಸುವಂತೆ 856 ಮಂದಿ ಅರ್ಜಿ ಸಲ್ಲಿಸಿದ್ದು, 410ನ್ನು ಸ್ವೀಕರಿಸಲಾಗಿದೆ.

ಮಂಜೇಶ್ವರ ಕ್ಷೇತ್ರದಿಂದ 172 ಅರ್ಜಿಗಳು ಲಭಿಸಿದ್ದು, 12 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಕಾಸರಗೋಡು ಕ್ಷೇತ್ರದಿಂದ 109 ಅರ್ಜಿಗಳು ಲಭಿಸಿದ್ದು, 33 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಉದುಮ ಕ್ಷೇತ್ರದಿಂದ ಲಭಿಸಿದ 167 ಅರ್ಜಿಗಳಲ್ಲಿ 33 ನ್ನು ಸ್ವೀಕರಿಸಲಾಗಿದೆ. ಕಾಂಞಂಗಾಡ್‌ ಕ್ಷೇತ್ರದಿಂದ 156 ಅರ್ಜಿಗಳು ಲಭಿಸಿದ್ದು, 39 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ತ್ರಿಕರಿಪುರದಿಂದ 371 ಅರ್ಜಿಗಳು ಲಭಿಸಿದ್ದು, 214 ಅರ್ಜಿಗಳನ್ನು ಸ್ವೀಕರಿಸಲಾಗಿದೆ.

ಮತಗಟ್ಟೆಗೆ ಬದಲಿ ಅರ್ಜಿಗಳು 785  
ವಿಧಾನಸಭೆ ಕ್ಷೇತ್ರವೊಂದರಿಂದ ಇನ್ನೊಂದು ಕ್ಷೇತ್ರಕ್ಕೆ ವಸತಿ ಬದಲಿಸಿರುವ ಮತದಾರ ಅಲ್ಲಿನ ಮತಗಟ್ಟೆಗೆ ಮತದಾನಹಕ್ಕು ಬದಲಿಸಿಕೊಳ್ಳುವ ನಿಟ್ಟಿನಲ್ಲಿ ನೀಡಿರುವ ಅರ್ಜಿಗಳ ಸಂಖ್ಯೆ 785. ಇವುಗಳಲ್ಲಿ 397 ಅರ್ಜಿಗಳ ಸ್ವೀಕೃತಿ ನಡೆದಿದೆ. ಮಂಜೇಶ್ವರ ಕ್ಷೇತ್ರದಿಂದ 174 ಅರ್ಜಿಗಳು ಲಭಿಸಿದ್ದು, 64 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಕಾಸರಗೋಡು ಕ್ಷೇತ್ರದಿಂದ 242 ಅರ್ಜಿಗಳು ಲಭಿಸಿದ್ದು, 142 ಅರ್ಜಿಗಳ ಸ್ವೀಕೃತಿ ನಡೆದಿದೆ. ಉದುಮ ಕ್ಷೇತ್ರದಿಂದ 133 ಅರ್ಜಿಗಳು ಲಭಿಸಿದ್ದು, 88 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಕಾಂಞಂಗಾಡ್‌ ಕ್ಷೇತ್ರದಿಂದ 136 ಅರ್ಜಿಗಳು ಲಭಿಸಿದ್ದು, 48 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ತ್ರಿಕರಿಪುರ ಕ್ಷೇತ್ರದಿಂದ 100 ಅರ್ಜಿಗಳು ಲಭಿಸಿದ್ದು, 55 ಅರ್ಜಿಗಳನ್ನು ಸ್ವೀಕರಿಸಲಾಗಿದೆ.

ಹೆಸರು ತಿದ್ದುಪಡಿಗೆ 2,688 ಅರ್ಜಿಗಳು 
ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆ ಸಂಬಂಧ ಹೆಸರಿನಲ್ಲಿ ತಿದ್ದುಪಡಿ ಆಗ್ರಹಿಸಿ 2,688 ಅರ್ಜಿಗಳು ಲಭಿಸಿವೆ. ಇವುಗಳಲ್ಲಿ 1,854 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಮಂಜೇಶ್ವರ ವಿಧಾನಸಭೆ ಕ್ಷೇತ್ರದಿಂದ 554 ಮಂದಿ ಅರ್ಜಿ ಸಲ್ಲಿಸಿದ್ದಾರೆ. 296 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಕಾಸರಗೋಡು ಕ್ಷೇತ್ರದಿಂದ ಲಭಿಸಿದ 577 ಅರ್ಜಿಗಳಲ್ಲಿ 428 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಉದುಮದಿಂದ 571 ಅರ್ಜಿಗಳು ಬಂದಿದ್ದು, 460ನ್ನು ಸ್ವೀಕಾರ ಮಾಡಲಾಗಿದೆ. ಕಾಂಞಂಗಾಡ್‌ನಿಂದ 533 ಅರ್ಜಿಗಳು ಲಭಿಸಿದ್ದು, 323 ಅರ್ಜಿಗಳನ್ನು ಸ್ವೀಕಾರ ನಡೆಸಲಾಗಿದೆ. ತ್ರಿಕರಿಪುರದಿಂದ 453 ಅರ್ಜಿಗಳು ಲಭಿಸಿದ್ದು, 347 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಮತದಾರ‌ರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಮಾ.25 ವರೆಗೆ ಅವಕಾಶವಿದೆ.

ಹೊಸ ಅರ್ಜಿಗಳು 17,272 
ಜಿಲ್ಲೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆಗೊಳಿಸಲು ಈ ಬಾರಿ 17,272 ಮಂದಿ ಅರ್ಜಿ ಸಲ್ಲಿಸಿ ದ್ದಾರೆ. ಇದರಲ್ಲಿ 7,411 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಮಂಜೇಶ್ವರ ವಿಧಾನಸಭೆ ಕ್ಷೇತ್ರದಿಂದ 3,612 ಅರ್ಜಿಗಳು ಲಭಿಸಿದ್ದು, 1,223 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಉದುಮ ಕ್ಷೇತ್ರದಿಂದ 3,606 ಅರ್ಜಿಗಳು ಲಭಿಸಿದ್ದು, 1,770 ಅರ್ಜಿಗಳ ಸ್ವೀಕೃತಿ ಯಾಗಿದೆ. ಕಾಂಞಂಗಾಡ್‌ ಕ್ಷೇತ್ರದಿಂದ 3,833 ಅರ್ಜಿಗಳು ಲಭಿಸಿದ್ದು, 1,700 ಸ್ವೀಕಾರವಾಗಿವೆೆ. ತ್ರಿಕರಿಪುರ ಕ್ಷೇತ್ರದಿಂದ 2,933 ಅರ್ಜಿಗಳು ಲಭಿಸಿದ್ದು, 1,249 ಸ್ವೀಕರಿಸಲಾಗಿದೆ.

ರದ್ದು ಅರ್ಜಿ 856
ಜಿಲ್ಲೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವಂತೆ ಆಗ್ರಹಿಸಿ 856 ಅರ್ಜಿಗಳು ಲಭಿಸಿವೆ. ಇವುಗಳಲ್ಲಿ 410 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಮಂಜೇಶ್ವರ ವಿಧಾನಸಭೆ ಕ್ಷೇತ್ರದಿಂದ 322 ಅರ್ಜಿಗಳು ಲಭಿಸಿದ್ದು, 164 ಅರ್ಜಿಗಳು ಸ್ವೀಕಾರವಾಗಿವೆ. ಕಾಸರಗೋಡು ಕ್ಷೇತ್ರದಿಂದ 141 ಅರ್ಜಿಗಳು ಲಭಿಸಿದ್ದು,100 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಉದುಮ ಕ್ಷೇತ್ರದಿಂದ 50 ಅರ್ಜಿಗಳು ಲಭಿಸಿದ್ದು, 37 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಕಾಂಞಂಗಾಡು ಕ್ಷೇತ್ರದಿಂದ 26 ಅರ್ಜಿಗಳು ಲಭಿಸಿದ್ದು, 9 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ತ್ರಿಕರಿಪುರ ಕ್ಷೇತ್ರದಿಂದ 317 ಅರ್ಜಿಗಳು ಲಭಿಸಿದ್ದು, 100 ಅರ್ಜಿಗಳನ್ನು ಸ್ವೀಕರಿಸಲಾಗಿದೆ. 

ಟಾಪ್ ನ್ಯೂಸ್

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

1-dharma

Dharmasthala;ಇಂದಿನಿಂದ ಲಕ್ಷದೀಪೋತ್ಸವ ಕಾರ್ಯಕ್ರಮಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

arest

Kumbla: ಯುವಕನನ್ನು ಅಪಹರಿಸಿ ಕೊಲೆಗೆ ಯತ್ನ; ಬಂಧನ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

10-madikeri

Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ

8-madikeri

Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.