ಪೊಲೀಸರಿಂದಲೂ ಕಳ್ಳ ಮತ ಚಲಾವಣೆ;ದೂರು: ತನಿಖೆ
Team Udayavani, May 1, 2019, 6:02 AM IST
ಸಾಂದರ್ಭಿಕ ಚಿತ್ರ.
ಕಾಸರಗೋಡು: ಎಪ್ರಿಲ್ 23 ರಂದು ಕೇರಳದ ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ವ್ಯಾಪಕ ಕಳ್ಳಮತ ಚಲಾಯಿಸಲ್ಪಟ್ಟ ಆರೋಪಗಳು ಎದ್ದು ಬಂದ ಬೆನ್ನಲ್ಲೇ ಕಳ್ಳಮತದಾನ ತಡೆಯುವ ಹೊಣೆಗಾರಿಕೆ ಹೊಂದಿರುವ ಪೊಲೀಸರೇ ಕಳ್ಳಮತ ಚಲಾಯಿಸಿರುವ ಬಗ್ಗೆ ಹೊಸ ಆರೋಪ ಈಗ ಹುಟ್ಟಿಕೊಂಡಿದೆ.
ಲೋಕಸಭಾ ಚುನಾವಣೆ ವೇಳೆ ಕರ್ತವ್ಯದಲ್ಲಿರುವ ಪೊಲೀಸರಿಗೆ ತಮ್ಮ ಮತ ಚಲಾಯಿಸಲು ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಅಂಚೆ ಮೂಲಕ ಮತ ಚಲಾಯಿಸಲು ಅವರಿಗೆ ಅವಕಾಶ ನೀಡಲಾಗುತ್ತಿದೆ. ಕೆಲವೆಡೆಗಳಲ್ಲಿ ಪೊಲೀಸರು ಅಂಚೆ ಮತ ಚಲಾಯಿಸಿದ ಬ್ಯಾಲೆಟ್ ಪೇಪರ್ ಒಳಗೊಂಡಿರುವ ಕವರ್‌ಗಳನ್ನು ಪೊಲೀಸ್ ಅಸೋಸಿಯೇಶನ್‌ನ ಕೆಲವೊಂದು ಪದಾಧಿಕಾರಿಗಳು ನೇರವಾಗಿ ಸಂಗ್ರಹಿಸಿ ಬಳಿಕ ಆ ಕವರನ್ನು ಒಡೆದು ಅದರೊಳಗಿರುವ ಬ್ಯಾಲೆಟ್ ಪೇಪರ್‌ನಲ್ಲಿ ಯಾರಿಗೆ ಮತ ಚಲಾಯಿಸಲಾಗಿದೆ ಎಂಬುದನ್ನು ನೋಡಿ ತಮ್ಮ ಅಭ್ಯರ್ಥಿಗೆ ಅನುಕೂಲಕರವಾಗಿ ಮತ ಚಲಾಯಿಸದೇ ಇದ್ದಲ್ಲಿ ಅಂತಹ ಬ್ಯಾಲೆಟ್ ಪೇಪರ್‌ಗಳಲ್ಲಿ ಕೆಲವೊಂದು ಅವ್ಯವಹಾರ ನಡೆಸಿದ ಬಳಿಕ ಬ್ಯಾಲೆಟ್ ಪೇಪರನ್ನು ಮತ್ತೆ ಅಂಚೆ ಕವರಿನೊಳಗೆ ತುಂಬಿಸಿ ಕಳುಹಿಸಿ ಕೊಡಲಾಗಿದೆ ಎಂಬುದು ಈಗ ಉಂಟಾಗದ ಹೊಸ ಆರೋಪಗಳಾಗಿವೆ.
ಈ ಬಗ್ಗೆ ಕೆಲವು ಪೊಲೀಸರು ವಾಟ್ಸಾಪ್ ಸಂದೇಶ ರವಾನಿಸಿದ್ದು, ಆ ಸಂದೇಶವೂ ಈಗ ಹೊರಕ್ಕೆ ಬಂದಿದೆ. ಅದುವೇ ಪೊಲೀಸರು ಚಲಾಯಿಸಿದ ಅಂಚೆ ಮತದಲ್ಲಿ ಅವ್ಯವಹಾರ ನಡೆದ ಆರೋಪ ಹುಟ್ಟಿಕೊಳ್ಳಲು ಪ್ರಧಾನ ಕಾರಣವಾಗಿದೆ. ಆದರೆ ಅಂತಹ ಆರೋಪಗಳನ್ನು ಪೊಲೀಸ್ ಅಸೋಸಿಯೇಶನ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಅಲ್ಲಗಳೆದಿದ್ದಾರೆ.
ಅಂಚೆ ಮತದಲ್ಲಿ ನಡೆದಿರುವುದಾಗಿ ಹೇಳಲಾಗುತ್ತಿರುವ ಆರೋಪಗಳಿಗೂ ತಮ್ಮ ಸಂಘಟನೆಗಳಿಗೂ ಯಾವುದೇ ರೀತಿಯ ಸಂಬಂಧವೂ ಇಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಪೊಲೀಸರು ಕಳ್ಳಮತ ಚಲಾಯಿಸಿದ್ದಾರೆಂಬ ದೂರುಗಳು ಉಂಟಾಗಿರುವ ಹಿನ್ನೆಲೆಯಲ್ಲಿ ಆ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ಹಲವು ರಾಜಕೀಯ ಪಕ್ಷಗಳೂ ಈಗ ರಂಗಕ್ಕಿಳಿದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ, ಮಾಜಿ ಗೃಹ ಸಚಿವ ಕಾಂಗ್ರೆಸ್ ನೇತಾರ ತಿರುವಾಂಜೂರು ರಾಧಾಕೃಷ್ಣನ್ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.