ಕಾಸರಗೋಡು ಮೆಡಿಕಲ್ ಕಾಲೇಜ್ ಕಟ್ಟಡಕ್ಕೆ 80 ಕೋ. ರೂ.ಮಂಜೂರು
Team Udayavani, Jul 8, 2018, 6:30 AM IST
ಕಾಸರಗೋಡು: ನನೆಗುದಿಗೆ ಬಿದ್ದಿರುವ, ಉಕ್ಕಿನಡ್ಕದಲ್ಲಿ ನಿರ್ಮಿಸಲು ಉದ್ದೇಶಿಸಿದ ಕಾಸರಗೋಡು ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣ ಪ್ರಕ್ರಿಯೆಗೆ ಮತ್ತೆ ಜೀವ ಬಂದಿದ್ದು, ಆಸ್ಪತ್ರೆ ಬ್ಲಾಕ್‌ಗೆ 80 ಕೋಟಿ ರೂ. ಮಂಜೂರು ಮಾಡಲಾಗಿದೆ. ಗುತ್ತಿಗೆ ಒಪ್ಪಂದ ಪ್ರಕ್ರಿಯೆ ಪೂರ್ತಿಗೊಳಿಸಿ ಜು.11 ರಂದು ತಿರುವನಂತಪುರದಲ್ಲಿ ನಡೆಯಲಿರುವ ಟೆಕ್ನಿಕಲ್ ಸಮಿತಿ ಅಂಗೀಕಾರ ನೀಡಲಿದೆ.
ಕಾಸರಗೋಡು ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣ ಗಾಮಗಾರಿ ನಡೆಸಿ ಶೀಘ್ರದಲ್ಲೇ ಜನರ ಸೇವೆಗೆ ತೆರೆದುಕೊಡಬೇಕೆಂದು ಆಗ್ರಹಿಸಿ ಹಲವು ರಾಜಕೀಯ ಪಕ್ಷಗಳು, ಸಂಘಟನೆಗಳು ನಿರಂತರವಾಗಿ ಚಳವಳಿ ನಡೆಸಿತ್ತು. ಜು.5 ರಂದು ಬಿಜೆಪಿ ಕಾಸರಗೋಡು ಮತ್ತು ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಉಕ್ಕಿನಡ್ಕದ ಅಪೂರ್ಣ ಮೆಡಿಕಲ್ ಕಾಲೇಜು ಸಮುತ್ಛಯದಲ್ಲಿ ಹಟ್ಟಿ ನಿರ್ಮಿಸಿ ಜಾನುವಾರುಗಳನ್ನು ಕಟ್ಟಿ ಹಾಕಿ ಸರಕಾರದ ವಿಳಂಬ ನೀತಿಯನ್ನು ಪ್ರತಿಭಟಿಸಿತ್ತು. ಈ ಬೆನ್ನಿಗೆ 80 ಕೋಟಿ ರೂ. ಅನುಮತಿ ಲಭಿಸಿದೆ.
ತತ್‌ಕ್ಷಣ ಕಾಮಗಾರಿ ಆರಂಭ
ಚೆನ್ನೈ ಕೇಂದ್ರೀಕರಿಸಿ ಕಾರ್ಯಾ ಚರಿಸುವ ಆರ್.ಆರ್.ಬಿಲ್ಡರ್ಸ್ ಎಂಬ ಸಂಸ್ಥೆಗೆ ಕಟ್ಟಡ ನಿರ್ಮಾಣ ಗಾಮಗಾರಿಯನ್ನು ವಹಿಸಿಕೊಡಲಾಗಿದೆ. ಕೆಲವು ದಿನಗಳ ಹಿಂದೆ ಸಂಸ್ಥೆಯ ಪ್ರಮುಖರು ಮೆಡಿಕಲ್ ಕಾಲೇಜು ಸಮುತ್ಛಯಕ್ಕೆ ಬಂದಿದ್ದು, ಭೂಮಿ ಪೂಜೆ ನಡೆಸಿದ್ದರು. ಮಳೆ ಕಡಿಮೆಯಾದ ತತ್‌ಕ್ಷಣ ನಿರ್ಮಾಣ ಕಾಮಗಾರಿ ಆರಂಭಿಸಲಿದೆ.
ಕಾಸರಗೋಡು ವಿಧಾನಸಭಾ ಕ್ಷೇತ್ರದ ಬದಿಯಡ್ಕ ಗ್ರಾಮ ಪಂ. ನ ಉಕ್ಕಿನಡ್ಕದಲ್ಲಿ ಕಾಸರಗೋಡು ಮೆಡಿಕಲ್ ಕಾಲೇಜು ನಿರ್ಮಾಣ ಕಾಮಗಾರಿ ಆರಂಭಿಸಿ ಅರ್ಧದಲ್ಲೇ ಮೊಟಕುಗೊಂಡಿದೆ. ಈ ಹಿಂದೆ ಈ ಕಾಲೇಜಿಗೆ ಕಾಸರಗೋಡು ಪ್ಯಾಕೇಜ್‌ನಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಆಡ್ಮಿನಿಸ್ಟ್ರೇಟಿವ್ ಬ್ಲಾಕ್ ನಿರ್ಮಾಣ ಕಾರ್ಯ ಆರಂಭಿಸಲಾಗಿದ್ದರೂ, ಆ ಬಳಿಕ ಕಾಮಗಾರಿ ನಿಲುಗಡೆಗೊಳಿಸಲಾಗಿತ್ತು.
ನಬಾರ್ಡ್‌ನಿಂದ ಲಭಿಸಿದ 69 ಕೋಟಿ ರೂ.ಗೆ ಟೆಂಡರ್ ಆಗಿದ್ದರೂ, ಆ ಬಳಿಕ ರದ್ದುಗೊಳಿಸಲಾಗಿತ್ತು. ತಾಂತ್ರಿಕ ಕಾರಣದ ನೆಪದಲ್ಲಿ ಟೆಕ್ನಿಕಲ್ ಸಮಿತಿ ಟೆಂಡರ್ ರದ್ದುಗೊಳಿಸಿತ್ತು. ಇದರೊಂದಿಗೆ ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ ನಿಲುಗಡೆಗೊಂಡು ಈ ಕಾಲೇಜು ಇಲ್ಲಿಂದ ಬೇರೆಡೆಗೆ ಸ್ಥಳಾಂತರಗೊಳ್ಳುವ ಆತಂಕಕ್ಕೂ ಕಾರಣವಾಗಿತ್ತು. ಇದೀಗ ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣಕ್ಕೆ 80,26,77,000 ರೂ. ಅನುಮತಿ ಲಭಿಸಿದೆ.
ಉಕ್ಕಿನಡ್ಕದ ಆರು ಎಕರೆ ಸ್ಥಳದಲ್ಲಿ ಎಂಡೋ ಸಂತ್ರಸ್ತರ ಮತ್ತು ಇತರರ ಚಿಕಿತ್ಸೆಗಾಗಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಯೋಜಿಸಲಾಗಿತ್ತು. 2013ರ ನ. 30 ರಂದು ಅಂದಿನ ಮುಖ್ಯಮಂತ್ರಿ ಉಮ್ಮನ್‌ಚಾಂಡಿ ಮೆಡಿಕಲ್ ಕಾಲೇಜಿಗೆ ಶಿಲಾನ್ಯಾಸ ಮಾಡಿದ್ದರು. ಎರಡು ವರ್ಷದೊಳಗೆ ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣಗೊಳ್ಳಲಿದೆ ಎಂದು ಘೋಷಿಸಲಾಗಿತ್ತು. ಅಂದು ಮೂಲ ಸೌಕರ್ಯ ಕಲ್ಪಿಸಲು ಒಂದು ಕೊನಿರ್ಮಾಣ ಕಾಮಗಾರಿ ಮೊಟಕುಗೊಂಡಿತ್ತು.
ನಿರಂತರ ಹೋರಾಟ
ನಿರಂತರ ಹೋರಾಟ ನಡೆದಿದ್ದರೂ, ಪ್ರಯೋಜನವಾಗಲಿಲ್ಲ. ಬಿಜೆಪಿ ನೇತೃತ್ವದಲ್ಲಿ ಹಟ್ಟಿ ನಿರ್ಮಿಸಿ ಜಾನುವಾರು ಗಳನ್ನು ಕಟ್ಟಿ ಹಾಕುವ ಮೂಲಕ ನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿತ್ತು.
385 ಕೋಟಿ ರೂ ವೆಚ್ಚ ನಿರೀಕ್ಕೆ
ಕಾಸರಗೋಡು ಮೆಡಿಕಲ್ ಕಾಲೇಜಿಗೆ ಒಟ್ಟು 385 ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗಿದೆ. ವಿದ್ಯುದ್ದೀಕರಣಕ್ಕೆ ಆರು ಕೋಟಿ ರೂ., ರೆಸಿಡೆನ್ಶಿಯಲ್ ಸೌಕರ್ಯಗಳಿಗೆ ಮತ್ತು ಹಾಸ್ಟೆಲ್ ಮೊದಲಾದ ಕಟ್ಟಡಗಳ ನಿರ್ಮಾಣಕ್ಕೆ 150 ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.