ಕಾಸರಗೋಡು: ಹೊಸ ಪ್ರಕರಣವಿಲ್ಲ
Team Udayavani, Apr 23, 2020, 9:28 AM IST
ಕಾಸರಗೋಡು: ಕೇರಳದಲ್ಲಿ ಬುಧವಾರ 11 ಮಂದಿಯಲ್ಲಿ ಕೋವಿಡ್ ಸೋಂಕು ದೃಢವಾಗಿದೆ. ಆದರೆ ಕಾಸರಗೋಡು ಜಿಲ್ಲೆಯಲ್ಲಿ ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ. ಇದೇ ವೇಳೆ ಪಾಲ್ಗಟ್‌ನ ಒಬ್ಬರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಬುಧವಾರ ದೃಢಗೊಂಡಿರುವ 11 ಮಂದಿಯ ಪೈಕಿ ಕಣ್ಣೂರು ಜಿಲ್ಲೆಯಲ್ಲಿ 7 ಮಂದಿ, ಕೋಯಿಕ್ಕೋಡ್-2, ಮಲಪ್ಪುರಂ ಮತ್ತು ಕೋಟ್ಟಯಂ ಜಿಲ್ಲೆಯಲ್ಲಿ ತಲಾ ಒಬ್ಬರನ್ನು ಕೋವಿಡ್ ವೈರಸ್ ಸೋಂಕು ಬಾಧಿಸಿದೆ. ಕೊರೊನಾ ಬಾಧಿತರಲ್ಲಿ ಐವರು ವಿದೇಶದಿಂದ ಬಂದವರು. ಮೂವರಿಗೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ. ಕೋಯಿಕ್ಕೋಡ್‌ನ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಸೋಂಕು ದೃಢವಾಗಿದೆ. ಮೆಡಿಕಲ್ ಕಾಲೇಜಿನ ಇಬ್ಬರು ಹೌಸ್ ಸರ್ಜನ್‌ಗಳು ಕೇರಳದ ಹೊರಗಿನಿಂದ ರೈಲಿನಲ್ಲಿ ಬಂದವರು.
95 ಮಂದಿ ದಾಖಲು
ಕೇರಳದಲ್ಲಿ ಈ ವರೆಗೆ 437 ಮಂದಿಗೆ ಕೋವಿಡ್ ಸೋಂಕು ದೃಢೀಕರಿಸಲಾಗಿದೆ. ಇದೀಗ ವಿವಿಧ ಆಸ್ಪತ್ರೆಗಳಲ್ಲಿ 127 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 29,150 ಮಂದಿ ನಿಗಾದಲ್ಲಿದ್ದಾರೆ. ಬುಧವಾರ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 95 ಮಂದಿ ದಾಖಲಾಗಿದ್ದಾರೆ.
4 ಗ್ರಾ.ಪಂ.ಗಳಿಗೆ ವಿನಾಯಿತಿ
ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಹಾಟ್‌ಸ್ಪಾಟ್ ಯಾದಿಯಿಂದ ನಾಲ್ಕು ಪಂಚಾಯತ್‌ಗಳನ್ನು ಕೈಬಿಡಲಾಗಿದೆ. ರೋಗ ಬಾಧಿತರಿಲ್ಲದ ಮಂಜೇಶ್ವರ, ಕೋಡೋಂ-ಬೇಳೂರು ಪಂಚಾಯತ್‌ಗಳೂ ರೋಗ ಬಾಧಿತರಿದ್ದ ಪಳ್ಳಿಕೆರೆ ಮತ್ತು ಕುಂಬಳೆ ಗ್ರಾ.ಪಂ.ಗಳನ್ನು ಈ ಯಾದಿಯಿಂದ ಕೈಬಿಡಲಾಗಿದೆ. ಇದೇ ವೇಳೆ ಮುಳಿಯಾರು ಪಂಚಾಯತನ್ನು ಹೊಸದಾಗಿ ಹಾಟ್‌ಸ್ಪಾಟ್ ಯಾದಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಹಾಟ್‌ಸ್ಪಾಟ್‌ಗಳು 11ಕ್ಕಿಳಿದಿವೆ.
148 ಪ್ರಕರಣ ದಾಖಲು
ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 148 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. 88 ಮಂದಿಯನ್ನು ಬಂಧಿಸಲಾಗಿದ್ದು, 29 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 1,446 ಕೇಸುಗಳನ್ನು ದಾಖಲಿಸಲಾಗಿದೆ. 1,864 ಮಂದಿಯನ್ನು ಬಂಧಿಸಿ, 628 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಾಹನ ಶುದ್ಧೀಕರಣ ಕೇಂದ್ರ
ಕರ್ನಾಟಕದಿಂದ ಕೇರಳಕ್ಕೆ ಪ್ರವೇಶಿಸುವ ದ್ವಾರವಾಗಿರುವ ಮಂಜೇಶ್ವರದಲ್ಲಿ ವಾಹನಗಳನ್ನು ರೋಗಾಣು ಮುಕ್ತವಾಗಿಸುವ ಕೇಂದ್ರ (ವೆಹಿಕಲ್ ಡಿಸಿನ್‌ಫೆಕ್ಷನ್ ಟನಲ್) ಎ. 23ರಂದು ಆರಂಭಗೊಳ್ಳಲಿದೆ.
ಪೋಷಣ್ ವಾಣಿ ಆರಂಭ
ಮಹಿಳಾ ಶಿಶು ಅಭಿವೃದ್ಧಿ ಇಲಾಖೆ ಮನೆಯಲ್ಲಿರುವ ಶಿಶುಗಳಿಗೆ, ಹಾಲುಣಿಸುವ ತಾಯಂದಿರಿಗೆ, ಗರ್ಭಿಣಿಯರಿಗೆ, ಯುವತಿಯರಿಗಾಗಿ ಪೋಷಣ್ ವಾಣಿ ವಾಟ್ಸ್‌ಆ್ಯಪ್ ವಾಹಿನಿ ಪ್ರಸಾರ ಆರಂಭಿಸಿದೆ. ಮಕ್ಕಳಿಗೆ ಮತ್ತು ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳಲ್ಲಿ ಈ ಪ್ರಸಾರ ಇರುವುದು.
ಜಿಲ್ಲೆಗೆ 3 ವೆಂಟಿಲೇಟರ್
ಜಿಲ್ಲೆಯ ತುರ್ತು ಪರಿಸ್ಥಿತಿ ಪರಿಶೀಲಿಸಿ ತಲಾ 7 ಲಕ್ಷ ರೂ. ಮೌಲ್ಯದ 3 ವೆಂಟಿಲೇಟರ್‌ಗಳು ಲಭ್ಯವಾಗಿವೆ. ಕಾಸರಗೋಡು ಜನರಲ್ ಆಸ್ಪತ್ರೆ, ಕಾಂಞಂಗಾಡ್ ಜಿಲ್ಲಾಸ್ಪತ್ರೆ, ಪನತ್ತಡಿ ತಾಲೂಕು ಆಸ್ಪತ್ರೆಗೆ ತಲಾ ಒಂದು ನೀಡಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ವಿ. ರಾಮದಾಸ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ರಾಜ್ಯದಲ್ಲೇ ಮೊಟ್ಟಮೊದಲ ಮೂಳೆ ದಾನ: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ
Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್
Kasaragod; ಯುವಕನ ಕೊಲೆ: 6 ಮಂದಿಗೆ ಜೀವಾವಧಿ
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.