ಕಾಸರಗೋಡು ರೈಲು ನಿಲ್ದಾಣದಲ್ಲಿ ಎರಡು ಲಿಫ್ಟ್ ಸ್ಥಾಪನೆ
Team Udayavani, Jul 24, 2018, 6:00 AM IST
ಕಾಸರಗೋಡು: ಆದರ್ಶ್ ರೈಲು ನಿಲ್ದಾಣವಾಗಿ ಭಡ್ತಿಗೊಂಡಿರುವ ಕಾಸರಗೋಡು ರೈಲು ನಿಲ್ದಾಣದಲ್ಲಿ ಎರಡು ಲಿಫ್ಟ್‌ಗಳನ್ನು ಅಳವಡಿಸಲು ಯೋಜಿಸಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಲಿಫ್ಟ್ ಸಾಕಾರಗೊಂಡಲ್ಲಿ ವೃದ್ಧರಿಗೂ ರೋಗಿ ಗಳಿಗೂ, ವ್ಹೀಲ್ ಚೆಯರ್ ಪ್ರಯಾಣಿಕರಿಗೂ ಮೆಟ್ಟಲು ಹತ್ತುವ ತ್ರಾಸದಿಂದ ಮುಕ್ತಿ ದೊರೆಯಲಿದೆ.
ಕಾಸರಗೋಡು ರೈಲು ನಿಲ್ದಾಣದಲ್ಲಿ ಸ್ಥಾಪಿಸುವ ಎರಡು ಲಿಫ್ಟ್‌ಗಳಿಗಾಗಿ ಟೆಂಡರ್ ಕರೆಯಲಾಗಿದೆ. ಪ್ರಸ್ತುತ ಇರುವ ಮೇಲ್ಸೇತುವೆಗೆ ಲಿಫ್ಟ್ ಅಳವಡಿಸಲಾಗುವುದು. ಈ ಎರಡು ಲಿಫ್ಟ್‌ಗಳಿಗೆ 41.50 ಲಕ್ಷ ರೂ. ಟೆಂಡರ್ ಅಂಗೀಕರಿಸಲಾಗಿದೆ. ಆ. 8ರಂದು ಟೆಂಡರ್ ತೆರೆಯಲಾಗುವುದು. ಟೆಂಡರ್ ಅಂಗೀಕಾರಗೊಂಡಲ್ಲಿ ಎಂಟು ತಿಂಗಳೊಳಗೆ ಲಿಫ್ಟ್ ಕಾಮಗಾರಿ ಪೂರ್ತಿ ಗೊಳಿಸಬೇಕು. ಕಾಸರಗೋಡು ಸಂಸದ ಪಿ. ೂàಜನೆಯಲ್ಲಿ ಲಿಫ್ಟ್ ನಿರ್ಮಿಸಬೇಕೆಂದು ವಿನಂತಿಸಿದ್ದರು.
ಅಶಕ್ತರಿಗೆ ಪ್ರಯೋಜನಕಾರಿ
ಇನ್ನೊಂದು ಪ್ಲ್ರಾಟ್‌ಫಾರಂಗೆ ಸಾಗಲು ಇರುವ ಮೇಲ್ಸೇತುವೆ ಮೆಟ್ಟಲು ಹತ್ತಲು ಕಷ್ಟ ಪಡುತ್ತಿರುವ ರೋಗಿಗಳು, ಅಂಗ ವಿಕಲರು, ವೃದ್ಧರು, ವ್ಹೀಲ್‌ಚೆಯರ್ ಬಳಸು ವವರಿಗಾಗಿ ಈ ವ್ಯವಸ್ಥೆ ಕಲ್ಪಿಸಲಾಗುವುದು. ಲಿಫ್ಟ್ಗೆ ಜನಸಂದಣಿ ಹೆಚ್ಚಾದರೂ ಅಶಕ್ತರಿಗೆ ತೊಂದರೆಆದರೆ ಅದೇ ವೇಳೆ ಪ್ರಸ್ತುತ ಇರುವ ಮೇಲ್ಸೇತುವೆಗೆ ಲಿಫ್ಟ್ ಜೋಡಿಸುವುದರಿಂದ ಇನ್ನಷ್ಟು ಜನಸಂದಣಿ ಅಧಿಕವಾಗಲಿದೆ. ಪ್ರಯಾಣಿಕರ ಸಂದಣಿ ಮುಗಿಯುವವರೆಗೆ ಇವರು ಅಲ್ಲೇ ಕಾಯಬೇಕಾಗಿ ಬರಬಹುದು.
ದಟ್ಟಣೆಯಿದ್ದರೂ ಒಂದೇ ಮೇಲ್ಸೇತುವೆ
ಕಾಸರಗೋಡು ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಇನ್ನೊಂದು ಪ್ಲ್ರಾಟ್‌ಫಾರಂಗೆ ಸಾಗಲು ಇದೀಗ ಒಂದೇ ಮೇಲ್ಸೇತುವೆ ಇದೆ. ಅದೂ ಹದಿನೈದು ವರ್ಷಗಳ ಹಿಂದೆ ನಿರ್ಮಾಣವಾಗಿರುವಂಥದ್ದು. ಬೆಳಗ್ಗೆ ಪ್ಯಾಸೆಂಜರ್ ರೈಲು ಮತ್ತು ಮಲಬಾರ್ ರೈಲು ನಿಲ್ದಾಣಕ್ಕೆ ತಲುಪಿದಾಗ ಭಾರೀ ಸಂಖ್ಯೆಯ ಪ್ರಯಾಣಿಕರು ಈ ಮೇಲ್ಸೇತುವೆಯನ್ನೇ ಬಳಸುತ್ತಾರೆ. ಹಲವು ಮಂದಿ ಈ ಮೇಲ್ಸೇತುವೆಯ ಮೂಲಕ ಸಾಗದೇ ರೈಲು ಹಳಿ ದಾಟಿ ಅಪಾಯವನ್ನು ಎದುರು ಹಾಕಿಕೊಳ್ಳುವವರೂ ಇದ್ದಾರೆ. ಬೇಗನೇ ಹೋಗಿ ವಾಹನ ಹಿಡಿಯುವ ಆತುರದಲ್ಲಿ ಅಪಾಯ ಕಟ್ಟಿಟ್ಟಬುತ್ತಿ ಎಂದು ತಿಳಿದಿದ್ದರೂ ಮತ್ತೆ ಮತ್ತೆ ಹಳಿ ದಾಟುತ್ತಿದ್ದಾರೆ. ಈ ಲಿಫ್ಟ್ ವ್ಯವಸ್ಥೆ ಬಂದಲ್ಲಿ ಹಲವು ಪ್ರಯೋಜನಗಳು ಲಭಿಸಲಿವೆ. ಲಿಫ್ಟ್ ವ್ಯವಸ್ಥೆ ಬಂದಾಗ ಪ್ರಸ್ತುತ ಇರುವ ಮೇಲ್ಸೇತುವೆಯನ್ನು ಇನ್ನಷ್ಟು ಅಗಲಗೊಳಿಸ ಬೇಕಾಗುತ್ತದೆ. ಆದರೆ ಪ್ರಸ್ತುತ ಇರುವ ಮೇಲ್ಸೇತುವೆಯನ್ನು ಅಗಲಗೊಳಿಸಲು ಸಾಧ್ಯ ವಾಗದು ಎಂಬುದು ಎಂಜಿನಿಯರಿಂಗ್ ವಿಭಾಗದ ಅಂಬೋಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.