ಕಾಸರಗೋಡು: ಜನಸೇವಾ ಕೇಂದ್ರದಲ್ಲಿ ನೌಕರರಿಲ್ಲ
Team Udayavani, May 28, 2018, 6:05 AM IST
ಕುಂಬಳೆ: ಕಾಸರಗೋಡು ಹೊಸ ಬಸ್‌ನಿಲ್ದಾಣದ ನಗರಸಭೆಯ ಕಟ್ಟಡದ ಪ್ರಥಮ ಮಹಡಿಯಲ್ಲಿ ಫ್ರೆಂಡ್ಸ್ ಜನಸೇವಾ ಕೇಂದ್ರ ಕಾರ್ಯಾಚರಿಸುತ್ತಿದೆ.ಈ ಕೇಂದ್ರದಲ್ಲಿ ವಿದ್ಯುತ್ ಬಿಲ್,ದೂರವಾಣಿ,ನೀರಿನ ಕರ ಇತ್ಯಾದಿಗಳನ್ನು ಪಾವತಿಸಬಹುದಾಗಿದೆ.ಸಾರ್ವಜನಿಕರಿಗೆ ಬಿಲ್ ಪಾವತಿಸಲು ಕಚೇರಿಯೊಳಗೆ ಸಾಲಾಗಿ ಒಂಭತ್ತು ಕೌಂಟರ್‌ಗಳಿವೆ. ಆದರೆ ಇದರಲ್ಲಿ ಕೇವಲ ಎರಡು ಸೀಟಿನಲ್ಲಿ ಮಾತ್ರ ನಿತ್ಯ ನೌಕರರನ್ನು ಕಾಣಬಹುದು.ಅದರಲ್ಲೂ ಓರ್ವರು ತಡವಾಗಿ ಆಗಮಿಸುವುದು ಸಾಮಾನ್ಯವಾಗಿದೆ.
ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಜನಸೇವಾ ಕೇಂದ್ರದೊಳಗೆ ಸಾಕಷ್ಟು ಜನರು ಸಮಯಕ್ಕೆ ಮುಂಚಿತವಾಗಿ ಹಣ ಪಾವತಿಸಲು ಆಗಮಿಸುವರು.ಬಂದವರಿಗೆ ಸೆಕ್ಯೂರಿಟಿಯೋರ್ವರು ಟೋಕನ್ ನೀಡಿ ಆಸನದಲ್ಲಿ ಕುಳ್ಳಿರಿಸುವರು.ನೌಕರರು ಆಗಮಿಸಿದ ಬಳಿಕ ಟೋಕನ್ ನಂಬ್ರ ಕರೆದು ಹಣ ಸಂಗ್ರಹಿಸಲಾಗುವುದು.ಈ ಮಧ್ಯೆ ಕಂಪ್ಯೂಟರ್ ಕೈಕೊಡುವುದೂ ಇದೆ.ಆ ತನಕ ತಾಳ್ಮೆಯಿಂದ ಕಾಯಬೇಕಾಗುವುದು.
ವಿವಿಧ ಸರಕಾರಿ ಇಲಾಖೆಯ ಕಚೇರಿಗಳಿಗೆ ತೆರಳಿ ಗಂಟೆ ಗಟ್ಟಲೆ ಕಾಯುವುದನ್ನು ತಪ್ಪಿಸುವ ಸದುದ್ದೇಶದಿಂದ ಈ ಜನಸೇವಾ ಕೇಂದ್ರವನ್ನು ತೆರೆಯಲಾಗಿದೆ.ಈ ಕಚೇರಿಗೆ ಆಯಾ ಇಲಾಖೆಯ ವತಿಯಿಂದ ನೌಕರರನ್ನು ಡೆಪ್ಯೂಟೇಶನ್ ಆಧಾರದಲ್ಲಿ ಜಿಲ್ಲಾಧಿಕಾರಿಗಳು ನೌಕರರನ್ನು ನೇಮಕಗೊಳಿಸುವರು.ಆದರೆ ಈ ನೌಕರರು ಕೆಲ ದಿನಗಳ ಬಳಿಕ ಉನ್ನತ ರಾಜಕೀಯ ನಾಯಕರ ಒತ್ತಡದ ಮೂಲಕ ಮೇಲಾಧಿಕಾರಿಗಳ ಮನ ಒಲಿಸಿ ತಮ್ಮ ಊರಿಗೆ ವರ್ಗವಾಗಿ ತೆರಳುವುದರಿಂದ ಈ ಕೇಂದ್ರದಲ್ಲಿ ನೌಕಕರ ಕೊರತೆ ಉಂಟಾಗುವುದು.
ಕಾಸರಗೋಡು ಜಿಲ್ಲೆಯ ದೂರದೂರಿನಿಂದ ಹಣ ಪಾವತಿಸಲು ಆಗಮಿಸುವ ಜನರ ಈ ಸಮಸ್ಯೆಯನ್ನು ಮಾನ್ಯ ಜಿಲ್ಲಾಧಿಕಾರಿಯವರು ಪರಿಹರಿಸಬೇಕಾಗಿದೆ.ಮಿತ್ರ ಜನಸೇವಾ ಕೇಂದ್ರದ ಒಂಭತ್ತು ಕೌಂಟರಿನಲ್ಲಿ ಕನಿಷ್ಟ ಐದು ಮಂದಿಯನ್ನಾದರೂ ನೇಮಕ ಮಾಡಿ ಜನರ ಸಂಕಷ್ಟ ವನ್ನು ಪರಿಹರಿಸಬೇಕಾಗಿದೆ.
ಬಹಿರ್ದೆಸೆಗೆ ನಿರ್ಬಂಧ
ಸುಸಜ್ಜಿತ ಹವಾನಿಯಂತ್ರಿತ ಕಚೇರಿ ಯೊಳಗಿರುವ ಇಲ್ಲಿಗೆ ಆಗಮಿಸುವ ಸಾರ್ವಜನಿಕರಿಗೆ ಬಹಿರ್ದೆಸೆಗೆ ನಿರ್ಬಂಧ ವಿರುವುದರಿಂದ ಸಂಕಷ್ಟ ಅನುಭವಿಸ ಬೇಕಾಗಿದೆ. ಕಚೇರಿ ನೌಕರರಲ್ಲಿ ವಿಚಾರಿಸಿ ದರೆ ಇಲ್ಲಿ ಸಾರ್ವಜನಿಕ ಶೌಚಾ ಲಯವಿಲ್ಲ ಕೆಳಗೆ ಬಸ್ ನಿಲ್ದಾಣ ಕಟ್ಟಡದ ಲ್ಲಿದೆ .ಅಲ್ಲಿಗೆ ತೆರಳಿ ಎಂಬ ಹಾರಿಕೆಯ ಉತ್ತರ ನೀಡುತ್ತಾರೆ.
– ಅಚ್ಯುತ ಚೇವಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kasaragod: ರಸ್ತೆಯಲ್ಲಿ ಬಿಯರ್ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು
Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Kasaragod: ಮುಖವಾಡ ಧರಿಸಿದ ವ್ಯಕ್ತಿಯಿಂದ ವಿದ್ಯಾರ್ಥಿಗೆ ಇರಿತ; ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.