ಕಾಸರಗೋಡು – ತಿರುವನಂತಪುರ ಹೈಸ್ಪೀಡ್ ರೈಲು: ಮುಂದಿನ ವರ್ಷ ಕಾಮಗಾರಿ ಆರಂಭ
Team Udayavani, May 7, 2019, 6:30 AM IST
ಕಾಸರಗೋಡು: ಕೇರಳದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ವಾಗಲಿರುವ ಮಹತ್ವಾಕಾಂಕ್ಷೆಯ ಹೈಸ್ಪೀಡ್ ರೈಲು ಯೋಜನೆಯ ನಿರ್ಮಾಣ ಕಾಮಗಾರಿಗೆ ಮುಂದಿನ ವರ್ಷ ಚಾಲನೆ ನೀಡಲಾಗುವುದು.
60,000 ಕೋ. ರೂ. ವೆಚ್ಚ ಅಂದಾಜಿಸಿರುವ ಈ ಯೋಜನೆಯ ಸಮಗ್ರ ಯೋಜನ ವರದಿಯನ್ನು ಮುಂದಿನ ವಾರ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗುವುದು. ಆ ಮೂಲಕ ಈ ಯೋಜನೆಗೆ ಅಗತ್ಯದ ಭೂಸ್ವಾಧೀನ ಇತ್ಯಾದಿ ಪ್ರಕ್ರಿಯೆಗಳಿಗೂ ಚಾಲನೆ ನೀಡಲಾಗುವುದು. ಯೋಜನೆ ಸಾಕ್ಷಾತ್ಕಾರಗೊಂಡಲ್ಲಿ ಕಾಸರಗೋಡಿನಿಂದ ತಿರುವನಂತಪುರಕ್ಕೆ 4-5 ಗಂಟೆ ಅವಧಿಯಲ್ಲಿ ತಲುಪಬಹುದು. ಈಗ ಕಾಸರಗೋಡಿ ನಿಂದ ತಿರುವನಂತಪುರಕ್ಕೆ ರೈಲಿನಲ್ಲಿ ತಲುಪಲು 15 ತಾಸುಗಳು ಬೇಕು. ಫ್ರೆಂಚ್ ಎಂಜಿನಿಯರಿಂಗ್ ಸಂಸ್ಥೆಯಾದ “ಸೈಸೂ’ ಈ ಯೋಜನೆ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಪ್ರೋಜೆಕ್ಟ್ ವರದಿ ತಯಾರಿಸಿದೆ. ಅದಕ್ಕಾಗಿ ಆ ಸಂಸ್ಥೆಯೊಂದಿಗೆ 27 ಕೋಟಿ ರೂ. ಗಳ ಒಡಂಬಡಿಕೆಗೂ ಸಹಿ ಹಾಕಲಾಗಿದೆ. ಈ ಯೋಜನೆಗೆ ಭಾರತೀಯ ರೈಲ್ವೇ ಇಲಾಖೆ ಈಗಾಗಲೇ ತಾಂತ್ರಿಕ ಅಂಗೀಕಾರ ನೀಡಿದೆ. ವೆಚ್ಚವನ್ನೂ ಸಮಾನವಾಗಿ ವಹಿಸಿಕೊಳ್ಳಲು ರೈಲ್ವೇ ಅಭಿವೃದ್ಧಿ ನಿಗಮವೂ ಒಡಂಬಡಿಕೆ ಮಾಡಿಸಿಕೊಂಡಿದೆ. ಇನ್ನು ಟ್ರಾಫಿಕ್ ಪ್ರೊಜೆಕ್ಷನ್ ವರದಿಗೂ ಅಂಗೀಕಾರ ಲಭಿಸಲು ಬಾಕಿ ಇದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.