ಕಾಸರಗೋಡು – ತಿರುವನಂತಪುರ ಷಟ್ಪಥ ರಾ.ಹೆದ್ದಾರಿ ನಿರ್ಮಾಣ
Team Udayavani, Mar 14, 2017, 3:12 PM IST
ಕಾಸರಗೋಡು: ಚತುಷ್ಪಥ ರಸ್ತೆ ನಿರ್ಮಾಣದ ಪ್ರಾಥಮಿಕ ಪ್ರಕ್ರಿಯೆ ನಡೆಯುತ್ತಿರುವಂತೆ ಕಾಸರಗೋಡಿನಿಂದ ಆರಂಭಗೊಂಡು ತಿರುವನಂತಪುರದ ವರೆಗೆ ರಾಷ್ಟ್ರೀಯ ಹೆದ್ದಾರಿಯನ್ನು ಷಟ್ಪಥವನ್ನಾಗಿ ಅಭಿವೃದ್ಧಿಗೊಳಿಸಲು ಕೇರಳ ಸರಕಾರ ತೀರ್ಮಾನಿಸಿದೆ.
45 ಮೀಟರ್‌ನಲ್ಲಿ ಚತುಷ್ಪಥ ರಸ್ತೆ ಎಂಬ ಹಿಂದಿನ ತೀರ್ಮಾನವನ್ನು ಬದಲಾಯಿಸಿ ಮುಂದಿನ ದಿನಗಳಲ್ಲಿ ವಾಹನ ದಟ್ಟಣೆ ಅಧಿಕವಾಗುವ ಹಿನ್ನೆಲೆಯಲ್ಲಿ ಷಟ³ಥ ರಸ್ತೆ ನಿರ್ಮಿಸುವ ತೀರ್ಮಾನಕ್ಕೆ ಸರಕಾರ ಬಂದಿರುತ್ತದೆ. ನೂತನ ತೀರ್ಮಾನದಂತೆ ಎರಡು ಭಾಗಗಳಲ್ಲಾಗಿ 21 ಮೀಟರ್ ಅಗಲದಲ್ಲಿ ಷಟ³ಥ ರಸ್ತೆ ನಿರ್ಮಿಸಲಾಗುವುದು. 15 ಮೀಟರ್ ಅಗಲದಲ್ಲಿ ಚತುಷ್ಪಥ ರಸ್ತೆ ನಿರ್ಮಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಡಿವೈಡರ್, ಕಾಲು ದಾರಿಗಳ ಅಗಲವನ್ನು ಎರಡರಿಂದ ಮೂರು ಮೀಟರ್ ಕಡಿಮೆಗೊಳಿಸಲಾಗುವುದು. ಈ ಹಿಂದೆ ನಾಲ್ಕರಿಂದ ಐದು ಮೀಟರ್ ಅಗಲದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಎರಡೂ ಬದಿಗಳಲ್ಲಿರುವ ಸರ್ವೀಸ್ ರಸ್ತೆಗಳ ಅಗಲವನ್ನು 7 ಮೀಟರ್‌ನಿಂದ ಐದೂವರೆ ಮೀಟರ್‌ಗೆ ಇಳಿಸಲು ತೀರ್ಮಾನಿಸಲಾಗಿದೆ.
ಚತುಷ್ಪಥ ರಸ್ತೆ ನಿರ್ಮಾಣಕ್ಕೆ ತಗಲುವ ವೆಚ್ಚದ ಶೇ.20 ಹೆಚ್ಚಳ ಮೊತ್ತ ಷಟ³ಥ ರಸ್ತೆ ನಿರ್ಮಾಣಕ್ಕೆ ಬೇಕಾಗಲಿದೆ. ಕೇರಳ ಸರಕಾರದ ನಿರ್ದೇಶಗಳನ್ನು ಕೇಂದ್ರ ಸರಕಾರ ಅಂಗೀಕರಿಸಿದ ಹಿನ್ನೆಲೆಯಲ್ಲಿ ರಸ್ತೆಯ ನೀಲ ನಕ್ಷೆಯನ್ನು ಬದಲಾಯಿಸಲು ಆರಂಭಿಸಲಾಗಿದೆ. ಪ್ರಥಮ ಹಂತದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಷಟ³ಥ ರಸ್ತೆ ನಿರ್ಮಾಣ ಮೇ 1 ರಿಂದ ಆರಂಭಿಸಲು ಸಾಧ್ಯವಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಗೊಳಿಸಲು ಅಗತ್ಯವಾದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಶೇ.65 ರಷ್ಟು ಪೂರ್ತಿಯಾಗಿದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಶೇ.60 ರಷ್ಟು ಯಶಸ್ವಿ ಯಾದಲ್ಲಿ ಟೆಂಡರ್ ನೀಡಬಹುದೆಂದು ಕೇಂದ್ರ ಸರಕಾರ ಭರವಸೆ ನೀಡಿತ್ತು. ಕಾಸರಗೋಡು ಜಿಲ್ಲೆಯಲ್ಲಿ ಮಾತ್ರವೇ 3,000 ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಮುಂದಿನ ತಿಂಗಳ ಮಧ್ಯಾವಧಿಯಲ್ಲಿ ಆರಂಭಿಸಲಾಗುವುದು. ಜೂನ್, ಜುಲೈ ತಿಂಗಳಲ್ಲಿ ಕಣ್ಣೂರು, ಕಲ್ಲಿಕೋಟೆ ಜಿಲ್ಲೆಯಲ್ಲಿ ರಸ್ತೆ ನಿರ್ಮಾಣ ಪ್ರಕ್ರಿಯೆ ಆರಂಭಿಸಲು ಸರಕಾರ ಗುರಿಯಿರಿಸಿದೆ. ಮುಂದಿನ ಮೂರು ವರ್ಷಗಳಲ್ಲಿ ಷಟ³ಥ ರಸ್ತೆ ನಿರ್ಮಾಣ ಪೂರ್ತಿಗೊಳಿಸಲು ತೀರ್ಮಾನಿಸಲಾಗಿದೆ. ದೂರುಗಳಿರುವ ಪ್ರದೇಶಗಳಲ್ಲಿ ಅಲೈನ್‌ಮೆಂಟ್ ನವೀಕರಿ ಸುವ ಕ್ರಮವೂ ಪ್ರಗತಿಯಲ್ಲಿದೆ. ಭೂ ಸ್ವಾಧೀನ ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿಯಲ್ಲಿ ಸರಕಾರ ಕೆಲವೊಂದು ತಿದ್ದುಪಡಿಗಳಿಗೂ ಮುಂದಾಗ ಲಿದೆ ಎಂಬ ಸೂಚನೆಯೂ ಇದೆ.
ರಸ್ತೆ ಬದಿ ಫಲಕಗಳು, ಗೂಡಂಗಡಿ ತೆರವು ಪ್ರಕ್ರಿಯೆ ಆರಂಭ
ಕಾಸರಗೋಡಿನಿಂದ ತಿರುವನಂತಪುರದ ವರೆಗೆ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆಯಂತೆ ಅಗತ್ಯದ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಸುಮಾರು ಶೇ. 65ರಷ್ಟು ಪೂರ್ಣಗೊಂಡಿದೆ. ರಸ್ತೆ ಬದಿಯಲ್ಲಿ ಹಾಕಿರುವ ಅಂಗಡಿಗಳು, ವಿವಿಧ ಸಂಸ್ಥೆಗಳು ಫಲಕಗಳನ್ನು, ಫ್ಲೆಕ್ಸ್‌ಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಈ ಬಗ್ಗೆ ಕೆಲವರಿಗೆ ನೋಟಿಸ್ ಕೂಡ ಬಂದಿದೆ.ಕೆಲವು ದಿನಗಳಿಂದ ರಾಷ್ಟಿÅàಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ರಸ್ತೆ ಬದಿಯಲ್ಲಿ ಹಾಕಿರುವ ಜಾಹೀರಾತು ಫಲಕಗಳನ್ನು ತೆರವುಗೊಳಿಸುತ್ತಿದ್ದಾರೆ. ಸಂಬಂಧಪಟ್ಟವರಿಗೆ ಫಲಕಗಳನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ. ಫಲಕಗಳನ್ನು ತೆರವುಗೊಳಿಸದ ಅಂಗಡಿಗಳ, ಸಂಸ್ಥೆಗಳ ಫಲಕಗಳನ್ನು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ತೆರವುಗೊಳಿಸಿ ಕೊಂಡೊಯ್ಯುತ್ತಿದ್ದಾರೆ. ರಸ್ತೆ ಬದಿಯ ಗೂಡಂಗಡಿಗಳನ್ನು ತೆರವುಗೊಳಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.