ಕಾಸರಗೋಡು: ಬಿಜೆಪಿಯಿಂದ ವಿಜಯೋತ್ಸವ; ಸಿಹಿ ತಿಂಡಿ, ಪಾಯಸ ವಿತರಣೆ
Team Udayavani, Jun 1, 2019, 6:10 AM IST
ಕಾಸರಗೋಡು: ಕೇಂದ್ರದಲ್ಲಿ ಮೋದಿ ಸರಕಾರದ ರಚನೆ ಹಾಗೂ ಪ್ರಮಾಣ ಸ್ವೀಕಾರದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಾದ್ಯಂತ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಅಲ್ಲಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿತಿಂಡಿ, ಪಾಯಸ, ಐಸ್‌ಕ್ರೀಂ ಮೊದಲಾದವುಗಳನ್ನು ವಿತರಿಸಿದರು.
ಕಾಸರಗೋಡು ನಗರದ ಕರಂದಕ್ಕಾಡು ಮೊದಲಾದೆಡೆಗಳಲ್ಲಿ ಬಿಗ್ ಸ್ಕ್ರೀನ್ ಸ್ಥಾಪಿಸಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನು ನೇರ ಪ್ರಸಾರ ನಡೆಸಲಾಯಿತು. ಇದರ ಮುಂದೆ ಭಾರೀ ಸಂಖ್ಯೆಯಲ್ಲಿ ಜನರು ನೆರೆದಿದ್ದರು.
ಮೋದಿ ಫ್ಯಾನ್ಸ್ ಚಾರಿಟೇಬಲ್ ಟ್ರಸ್ಟ್‌ನ ಆಶ್ರಯದಲ್ಲಿ ಮೈಲಾಟಿಯಲ್ಲಿ ಸಿಹಿ ವಿತರಿಸಿದರು. ಬಿಜೆಪಿ ಜಿಲ್ಲಾ ಮೀಡಿಯಾ ಸೆಲ್ ಸಂಚಾಲಕ ವೈ.ಕೃಷ್ಣದಾಸ್ ಉದ್ಘಾಟಿಸಿದರು. ಮೋದಿ ಫ್ಯಾನ್ಸ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಕೆ.ಪ್ರತಾಪನ್ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ದಿನೇಶನ್, ಬಿಜೆಪಿ ಉದುಮ ಪಂಚಾಯತ್ ಉಪಾಧ್ಯಕ್ಷ ಸುರೇಶ್ ಎರೋಲ್, ಬಿಜೆಪಿ ಪಳ್ಳಿಕೆರೆ ಪಂಚಾಯತ್ ಕಾರ್ಯದರ್ಶಿ ಲೋಕೇಶ್ ಬಟ್ಟತ್ತೂರು, ಅನಿಲ್ ಕುಮಾರ್, ಅಶೋಕನ್, ವಿನೋದ್, ಶ್ರೀಕೇಶ್, ಪುರುಷೋತ್ತಮನ್ ಮೊದಲಾದವರು ನೇತೃತ್ವ ನೀಡಿದರು.
ಕೇಂದ್ರದಲ್ಲಿ ಮೋದಿ ಸರಕಾರ ರಚನೆ ಹಾಗೂ ಪ್ರಮಾಣ ಸ್ವೀಕಾರದ ಹಿನ್ನೆಲೆಯಲ್ಲಿ ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ವತಿಯಿಂದ ಹೊಸಂಗಡಿ ಪೇಟೆಯಲ್ಲಿ ವಿಜಯೋತ್ಸವ ಮೆರವಣಿಗೆ ನಡೆಯಿತು. ಪಟಾಕಿ ಸಿಡಿಸಿ, ಸಿಹಿತಿಂಡಿ ವಿತರಿಸಲಾಯಿತು. ಜಿಲ್ಲಾ ಸಮಿತಿ ಸದಸ್ಯ ಪದ್ಮನಾಭ ಕಡಪ್ಪುರ, ಮಂಡಲ ಕಾರ್ಯದರ್ಶಿ ಆದರ್ಶ್ ಬಿ.ಎಂ, ಒಬಿಸಿ ಮೋರ್ಚಾ ರಾಜ್ಯ ಸಮಿತಿ ಸದಸ್ಯ ನವೀನ್ ರಾಜ್ ಕೆ.ಜಿ, ದೇವರಾಜ್ ಎಂ.ಎಸ್, ದಯಾಪ್ರಸನ್ನ ಆಚಾರ್ಯ, ರಂಜಿತ್ ಬಾಬು ನೇತೃತ್ವ ನೀಡಿದರು.
ಮೀಯಪದವು ಜಂಕ್ಷನ್‌ನಲ್ಲಿ ಯುವಮೋರ್ಚಾ, ಬಿಜೆಪಿ ನೇತೃತ್ವದಲ್ಲಿ ಸಂಭ್ರಮ ಆಚರಿಸಲಾಯಿತು. ಮಜಿಬೈಲ್ನ ಪಜಿಂಗಾರ್ ಬಿಜೆಪಿ ಕಾರ್ಯಕರ್ತರು ಮೆರವಣಿಗೆ ನಡೆಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ವರ್ಕಾಡಿಯಲ್ಲಿ ಯುವಮೋರ್ಚಾ ಕಾರ್ಯಕರ್ತರು, ನಮೋ ಬಳಗ ಮಜೀರ್ಪಳ್ಳ ವತಿಯಿಂದ ಮುರತ್ತಣೆಯಿಂದ ಮಜೀರ್‌ಪಳ್ಳ ಜಂಕ್ಷನ್ ವರೆಗೆ ವಿಜಯೋತ್ಸವ ಮೆರವಣಿಗೆ ನಡೆಸಿದರು. ಮಂಜೇಶ್ವರ ಕೆದುಂಬಾಡಿಯಲ್ಲಿ, ತೂಮಿನಾಡಿನಲ್ಲಿ ವಿಜಯೋತ್ಸವ ಆಚರಿಸಲಾಯಿತು. ಮಂಗಲ್ಪಾಡಿ ಪಂಚಾಯತ್ ಬಿಜೆಪಿ ವತಿಯಿಂದ ಉಪ್ಪಳದಲ್ಲಿ ಮೆರವಣಿಗೆ ನಡೆಯಿತು. ಬೆಳ್ಳೂರು ಪಂಚಾಯತ್ ಬಿಜೆಪಿ ಸಮಿತಿ ವತಿಯಿಂದ ವಿಜಯೋತ್ಸವ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
Psychiatric ಚಿಕಿತ್ಸೆ; ಅನುಸರಣೆಯ ಅಗತ್ಯಗಳು, ನಿರ್ವಹಿಸುವ ವಿಧಾನಗಳು
Karkala: ಲೈಸೆನ್ಸ್ ಇಲ್ಲದ ವ್ಯಾಪಾರಕ್ಕೆ ಕಡಿವಾಣ
Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.