ಕಾಸರಗೋಡು: ಬಿಗುಗೊಳಿಸಿದ ವಾಹನ ತಪಾಸಣೆ
Team Udayavani, Feb 23, 2017, 4:07 PM IST
ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ವ್ಯಾಪಕ ಹಿಂಸೆ, ಅಮಲು ಪದಾರ್ಥ ಸಾಗಾಟವನ್ನು ಹತ್ತಿಕ್ಕಲು ಕಾಸರಗೋಡು ಜಿಲ್ಲೆಯಾದ್ಯಂತ ಪೊಲೀಸರು ವಾಹನ ತಪಾಸಣೆ ಬಿಗುಗೊಳಿಸಿದ್ದು, ಇದರ ಪರಿಣಾಮ ವಾಗಿ ಹಲವಾರು ವಾಹನಗಳು ಸಾರಿಗೆ ಉಲ್ಲಂಘಿಸಿ ಪ್ರಯಾಣಿಸುವ ಮತ್ತು ಅಕ್ರಮ ನಂಬ್ರ ಪ್ಲೇಟ್ ಬಳಸಿ ಸಾಗುವ ಬೈಕ್‌ಗಳನ್ನು ಪತ್ತೆಹಚ್ಚಲು ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಾಹನ ತಪಾಸಣೆಯನ್ನು ಇನ್ನಷ್ಟು ಬಿಗುಗೊಳಿಸಿದ್ದಾರೆ.
ಜಿಲ್ಲೆಯ ಎಲ್ಲ ಪೊಲೀಸ್ ಠಾಣೆ ಗಳ ವ್ಯಾಪ್ತಿಯಲ್ಲಿ ಹಿಂಸಾ ಕೃತ್ಯಗಳು ಅಧಿಕವಾಗುತ್ತಿದ್ದು, ಮಾದಕ ವಸ್ತುಗಳ ಸಾಗಾಟ, ವಿತರಣೆ ವ್ಯಾಪಕವಾಗುತ್ತಿದೆ. ವಿವಿಧ ಮಾಫಿಯಾ ಗ್ಯಾಂಗ್‌ಗಳು ಸಕ್ರಿಯವಾಗಿದ್ದು ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾರೆ. ಇವುಗಳನ್ನು ಹತ್ತಿಕ್ಕಲು ಪೊಲೀಸರು ಕಠಿನ ಕ್ರಮ ತೆಗೆದುಕೊಂಡಿದ್ದು, ಈ ಪೈಕಿ ವಾಹನ ತಪಾಸಣೆಯನ್ನು ಬಿಗುಗೊಳಿಸಲು ಪ್ರಮುಖ ಆದ್ಯತೆ ನೀಡಿದೆ.
ಸರಿಯಾದ ದಾಖಲೆ ಪತ್ರಗಳಿಲ್ಲದ, ವಿಮೆ ಪಾಲಿಸಿ ಪಾವತಿಸದ, ಲೈಸನ್ಸ್ ಇಲ್ಲದ, ಅತೀ ವೇಗದಲ್ಲಿ ಚಲಾಯಿ ಸುವ, ಹೆಲ್ಮೆಟ್ ಧರಿಸದ, ಮಿತಿಮೀರಿ ಪ್ರಯಾಣಿಕರನ್ನು ತುಂಬಿಸಿ ಸಾಗುವ ವಾಹನಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ. ಇನ್ನೂ ಕೆಲವು ವಾಹನಗಳಿಗೆ ಸ್ಥಳದಲ್ಲೇ ದಂಡ ನಿಗದಿ ಪಡಿಸುವುದೂ ಇದೆ. ವಾಹನ ತಪಾ ಸಣೆಯ ಸಂದರ್ಭ ವಶಪಡಿಸಿಕೊಂಡ ಬೈಕ್‌ಗಳಿಗೆ ನಕಲಿ ನಂಬ್ರ ಅಳವಡಿಸಿದ್ದು ಪತ್ತೆಯಾಗಿದೆ. ವಶಪಡಿಸಿಕೊಂಡ ಇಂತಹ ವಾಹನಗಳು ಕಾಸರ ಗೋಡು ಠಾಣೆ ಸಹಿತ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲೂ ಇವೆ. ಇವುಗಳಲ್ಲಿ ಬೈಕ್‌ಗಳೇ ಹೆಚ್ಚು.
ಡಾಕ್ಟರ್‌ಗಳ, ನ್ಯಾಯವಾದಿಗಳ, ಉದ್ಯಮಿಗಳ ವಾಹನಗಳ ನಂಬ್ರ ಪ್ಲೇಟ್‌ಗಳನ್ನು ತಯಾರಿಸಿ ಬೈಕ್‌ನ ನಂಬ್ರದ ಬದಲು ಈ ನಂಬ್ರ ಪ್ಲೇಟ್‌ಗಳನ್ನು ಜೋಡಿಸಿ ಸಂಚರಿಸುತ್ತಿರುವ ಬೈಕ್‌ಗಳು ಸಾಕಷ್ಟು ಪತ್ತೆಯಾಗಿವೆ. ಇಂತಹ ನಕಲಿ ನಂಬ್ರದ ಬೈಕ್‌ಗಳನ್ನು ವಿವಿಧೆಡೆಗಳಿಂದ ಕಳವು ಮಾಡಿದ್ದಾಗಿರಬೇಕೆಂದು ಶಂಕಿಸಲಾಗಿದೆ. ವಶಪಡಿಸಿಕೊಂಡ ಬೈಕ್‌ಗಳನ್ನು ಹಿಂಪಡೆಯಲು ಬಾರದಿರುವುದರಿಂದ ಠಾಣೆಗಳಲ್ಲಿ ವಾಹನ ಇರಿಸಲು ಸ್ಥಳವಿಲ್ಲದಂತಾಗಿದೆ.
ಜಿಲ್ಲೆಯಲ್ಲಿ ವ್ಯಾಪಕ ಹಿಂಸೆ ನಡೆಯು ತ್ತಿದ್ದು, ಬೈಕ್‌ಗಳಲ್ಲಿ ಆರೋಪಿಗಳು ಪರಾರಿಯಾಗುತ್ತಿದ್ದಾರೆ. ಹಲ್ಲೆ, ಅಂಗಡಿಗಳಿಗೆ ದಾಳಿ, ಬಸ್‌ಗಳಿಗೆ ಕಲ್ಲೆಸೆತ ಹೀಗೆ ಅಪರಾಧ ಕೃತ್ಯಗಳಲ್ಲಿ ತೊಡಗುವ ಯುವಕರ ತಂಡ ಕೃತ್ಯ ನಡೆಸಿದ ಬಳಿಕ ಬೈಕ್‌ಗಳಲ್ಲಿ ಪರಾರಿ ಯಾಗುತ್ತಿದ್ದು, ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಳ್ಳುತ್ತಿದ್ದಾರೆ. ಉಪ್ಪಳ, ಮಂಜೇಶ್ವರ, ಬದಿಯಡ್ಕ, ಕಾಸರಗೋಡು, ಮುಳ್ಳೇರಿಯ ಮೊದಲಾದೆಡೆ ನಿರಂತರ ಹಲ್ಲೆ ಸಹಿತ ಹಿಂಸಾ ಕೃತ್ಯಗಳು ವ್ಯಾಪಕ ವಾಗಿ ನಡೆಯುತ್ತಿದ್ದು, ಇಂತಹ ಕೃತ್ಯಗಳಿಗೆ ಮಾಫಿಯಾ ತಂಡಗಳ ಪ್ರಚೋ ದನೆಯೂ ಇದೆ. ಸಾಕಷ್ಟು ಹಣವನ್ನು ನೀಡಿ ಹಿಂಸಾ ಕೃತ್ಯದಲ್ಲಿ ತೊಡಗಿಸಿ ಕೊಳ್ಳಲು ಪ್ರಚೋದನೆ ನೀಡುವ ಮಾಫಿಯಾ ತಂಡಗಳು ಕೇಸು ಗಳಿಂದ ಪಾರಾಗುತ್ತಾರೆ. ಮಾಫಿಯಾ ತಂಡ ಗಳನ್ನು ಮುಟ್ಟು ಗೋಲು ಹಾಕುವ ಹಿನ್ನೆಲೆಯಲ್ಲಿ ವಾಹನ ತಪಾಸಣೆ ಬಿಗುಗೊಳಿಸಲಾಗಿದೆ. ಸಾಕಷ್ಟು ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಆದರೆ ಇವರಲ್ಲಿ ಕೆಲವರು ನಕಲಿ ವಿಳಾಸ ನೀಡಿದ್ದು, ಅವರ ಪತ್ತೆಗೆ ಸಾಧ್ಯವಾಗುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.