ಕಾಸರಗೋಡು: ಮತ್ತೆ 6 ಮಂದಿಗೆ ಸೋಂಕು
Team Udayavani, Mar 22, 2020, 6:59 AM IST
ಕಾಸರಗೋಡು: ಜಿಲ್ಲೆಯಲ್ಲಿ ಶನಿವಾರ ಮತ್ತೆ ಆರು ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 14ಕ್ಕೇರಿದೆ.
ಕೇರಳದಲ್ಲಿ ಶನಿವಾರ ಒಟ್ಟು 12 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಒಟ್ಟು 52 ಮಂದಿಯನ್ನು ಕೋವಿಡ್-19 ಬಾಧಿಸಿದಂತಾಗಿದೆ. ಕಣ್ಣೂರು ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ತಲಾ ಮೂರರಂತೆಯೂ ಕಾಸರಗೋಡು ಜಿಲ್ಲೆಯಲ್ಲಿ ಆರು ಮಂದಿಯಲ್ಲಿ ಸೋಂಕು ದೃಢಗೊಂಡಿದೆ. ಇವರೆಲ್ಲರೂ ಕೊಲ್ಲಿ ದೇಶಗಳಿಂದ ಬಂದವರಾಗಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್-19 ದೃಢಗೊಂಡಿರುವವರಲ್ಲಿ ಐವರು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲೂ, ಒಬ್ಬರು ಎರ್ನಾಕುಳಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಣ್ಣೂರು ಜಿಲ್ಲೆಯಲ್ಲಿ ರೋಗ ದೃಢಗೊಂಡಿರುವ ಇಬ್ಬರು ತಲಶೆÏàರಿ ಜನರಲ್ ಆಸ್ಪತ್ರೆಯಲ್ಲೂ, ಒಬ್ಬರು ಕಣ್ಣೂರು ಜಿಲ್ಲಾ ಆಸ್ಪತ್ರೆಯಲ್ಲೂ ಇದ್ದಾರೆ.
ಕೇರಳದಲ್ಲಿ ಒಟ್ಟು 53,013 ಮಂದಿ ತೀವ್ರ ನಿಗಾದಲ್ಲಿದ್ದಾರೆ. ಅವರಲ್ಲಿ 52,785 ಮಂದಿ ಮನೆಗಳಲ್ಲೂ, 228 ಮಂದಿ ಆಸ್ಪತ್ರೆಯಲ್ಲೂ ನಿಗಾದಲ್ಲಿದ್ದಾರೆ. ಶನಿವಾರ 70 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. 3716 ಮಂದಿಯ ಸ್ಯಾಂಪಲ್ ಲ್ಯಾಬ್‌ಗ ಕಳುಹಿಸಲಾಗಿದೆ. 2,266 ಮಂದಿಗೆ ಕೋವಿಡ್-19 ವೈರಸ್ ತಟ್ಟಿಲ್ಲ ಎಂದು ವರದಿ ತಿಳಿಸಿದೆ.
694 ಮಂದಿ ನಿಗಾದಲ್ಲಿ
ಕಾಸರಗೋಡು ಜಿಲ್ಲೆಯಲ್ಲಿ 694 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 15 ಮಂದಿ ಆಸ್ಪತ್ರೆಗಳಲ್ಲೂ, 679 ಮಂದಿ ಅವರವರ ಮನೆಗಳಲ್ಲೂ ನಿಗಾದಲ್ಲಿರಿಸಲಾಗಿದೆ. ಇಂದು ಹೊಸದಾಗಿ ಇಬ್ಬರನ್ನು ಆಸ್ಪತ್ರೆಯಲ್ಲಿ ನಿಗಾದಲ್ಲಿರಿಸಲಾಗಿದೆ.ಹೊಸದಾಗಿ 41 ಮಂದಿಯ ಸ್ಯಾಂಪಲ್‌ಗಳನ್ನು ಲ್ಯಾಬ್‌ಗ ಕಳುಹಿಸಿಕೊಡಲಾಗಿದೆ. ಇದೀಗ 107 ಮಂದಿಯ ಪರೀಕಾ ವರದಿ ಬಂದಿದೆ.
ಕೋವಿಡ್-19 ದೃಢೀಕರಿಸಲ್ಪಟ್ಟ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದ 54 ಮಂದಿಯನ್ನು ಹೊಸದಾಗಿಪತ್ತೆಹಚ್ಚಲಾಗಿದ್ದು, ನಿಗಾದಲ್ಲಿರಿಸಲಾ ಗಿದೆ. ಕೌÒರದಂಗಡಿ ಮತ್ತು ಬ್ಯೂಟಿ ಪಾರ್ಲರ್‌ಗಳನ್ನು ಎರಡು ವಾರಗಳ ಕಾಲ ತೆರೆಯಬಾರದೆಂದು ಡಿಸಿ ಡಾ| ಡಿ. ಸಜಿತ್‌ಬಾಬು ತಿಳಿಸಿದ್ದಾರೆ.
ಕೇಸು ದಾಖಲು
ನಿರ್ಬಂಧ ಉಲ್ಲಂಘಿಸಿ ಅಂಗಡಿಗಳನ್ನು ತೆರೆದ 13 ಮಂದಿಯ ವಿರುದ್ಧ ಕೇಸು ದಾಖಲಿಸಲಾಗಿದೆ. ಸ್ವತಃ ಜಿಲ್ಲಾಧಿಕಾರಿಗಳೇ ಶನಿವಾರ ಬೆಳಗ್ಗೆ 11 ಅಂಗಡಿಗಳನ್ನು ಮುಚ್ಚಿಸಿದರು. ರಾಜಪುರ ಮತ್ತು ಹೊಸದುರ್ಗದಲ್ಲಿ ತಲಾ ಒಂದರಂತೆ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದರು. ಜಿಲ್ಲೆಯಲ್ಲಿ ಬೆಳಗ್ಗೆ 11ರಿಂದ ಸಂಜೆ 5 ಗಂಟೆಯ ವರೆಗೆ ಮಾತ್ರವೇ ಅಂಗಡಿಗಳನ್ನು ತೆರೆಯಬೇಕು ಎಂದು ಆದೇಶಿಸಲಾಗಿದೆ.
ಕೋವಿಡ್-19 ಸೋಂಕು ಪೀಡಿತನ ರೂಟ್ ಮ್ಯಾಪ್
ಕಾಸರಗೋಡು: ಕೋವಿಡ್-19 ವೈರಸ್ ಸೋಂಕು ಬಾಧಿತ ಎರಿಯಾಲ್‌ನ 47ರ ಹರೆಯದ ಯುವಕನ ರೂಟ್ ಮ್ಯಾಪ್ ಅನ್ನು ಸರಕಾರ ಪ್ರಕಟಿಸಿದೆ.
ಮಾ. 11ರಂದು ಮುಂಜಾನೆ 2.45ಕ್ಕೆ ದುಬಾೖಯಿಂದ ಐಗಿ344 ಏರ್ ಇಂಡಿಯಾದಲ್ಲಿ ಹೊರಟು ಬೆಳಗ್ಗೆ 7.45ಕ್ಕೆ ಕೋಯಿಕ್ಕೋಡ್ ವಿಮಾನ ನಿಲ್ದಾಣಕ್ಕೆ ತಲುಪಿದರು. ಅಲ್ಲಿಂದ ಆಟೋ ರಿಕ್ಷಾದಲ್ಲಿ ಮಲಪ್ಪುರಂನ ಏರ್‌ಪೋರ್ಟ್ ಜಂಕ್ಷನ್‌ನ ಜಹೀರ್ ರೆಸಿಡೆನ್ಸಿಗೆ 9.30ಕ್ಕೆ ತಲುಪಿದರು. 10 ಗಂಟೆಗೆ ಹತ್ತಿರದ ಟೀ ಸ್ಟಾಲ್‌ಗೆ ನಡೆದುಕೊಂಡು ಹೋದರು. ಅಲ್ಲಿಂದ ಕಲ್ಲಿಕೋಟೆ ಏರ್ ಪೋರ್ಟ್‌ಗೆ, ಆ ಬಳಿಕ 3.15ಕ್ಕೆ ಮೈತ್ರಿ ಹೊಟೇಲ್‌ಗೆ, ಸಂಜೆ 4ರಿಂದ ರಾತ್ರಿ 8 ಗಂಟೆಯ ವರೆಗೆ ಜಹೀರ್ ರೆಸಿಡೆನ್ಸಿಯಲ್ಲಿದ್ದರು. ರಾತ್ರಿ 8 – 12 ಗಂಟೆಯ ಮಧ್ಯೆ ಕೋಯಿಕ್ಕೋಡ್ ಏರ್‌ಪೋರ್ಟ್ ಗೆ ನಡೆದುಕೊಂಡು ಹೋಗಿ ಅಲ್ಲಿಂದ ಜಫ್ರಾನ್ ಹೊಟೇಲ್‌ಗೆ ತೆರಳಿ ಮಧ್ಯರಾತ್ರಿ (ಮಾ. 12ರಂದು) 12 ಗಂಟೆಗೆ ಆಹಾರ ಸೇವಿಸಿ, 12.30ಕ್ಕೆ ಜಹೀರ್ ರೆಸಿಡೆನ್ಸ್‌ಗೆ ತಲುಪಿದರು.
ಮುಂಜಾನೆ 2.30ಕ್ಕೆ ಕೋಯಿಕ್ಕೋಡ್ ರೈಲು ನಿಲ್ದಾಣಕ್ಕೆ ತಲುಪಿದ್ದು ಮಾವೇಲಿ ಎಕ್ಸ್‌ಪ್ರೆಸ್‌ನ ಕೋಚ್ ಎಸ್ 9ರಲ್ಲಿ ಬೆಳಗ್ಗೆ 7 ಕ್ಕೆ ಕಾಸರಗೋಡು ರೈಲು ನಿಲ್ದಾಣಕ್ಕೆ ತಲುಪಿದರು. ಆಟೋ ರಿಕ್ಷಾದಲ್ಲಿ 7.30ಕ್ಕೆ ಎರಿಯಾಲ್‌ನಲ್ಲಿರುವ ಮನೆಗೆ ತಲುಪಿದರು. ಅಲ್ಲಿಂದ ಮಾಯಿಪ್ಪಾಡಿಯಲ್ಲಿರುವ ಸಹೋದರನ ಮನೆಗೆ, ಸಂಜೆ ಗ್ರೀನ್ ಸ್ಟಾರ್ ಕ್ಲಬ್ ಸಂದರ್ಶಿಸಿದರು.
ಮಾ. 13ರಂದು ಮಕ್ಕಳೊಂದಿಗೆ ಫುಟ್ಬಾಲ್ ಆಡಿದ ನಂತರ ಕೌÒರದ ಅಂಗಡಿಗೆ, ಅಜಾದ್‌ನಗರದ ಗೆಳೆಯನ ಮನೆಗೆ ತೆರಳಿದರು. ಮಧ್ಯಾಹ್ನ ಎರಿಯಾಲ್ ಜುಮಾ ಮಸೀದಿಗೆ, ಸಿಪಿಸಿಆರ್‌ಐ ಬಳಿಯ ಹೊಟೇಲ್‌ಗೆ, ಸಿಪಿಸಿಆರ್‌ಐಯ ಎಸ್‌ಬಿಐ ಬ್ಯಾಂಕ್‌ಗೆ, ಸಂಜೆ ಎರಿಯಾಲ್‌ನ ಗ್ರೀನ್ ಸ್ಟಾರ್ ಕ್ಲಬ್‌ಗ ತೆರಳಿದ್ದರು.
ಮಾ. 14ರಂದು ಮಂಜತ್ತಡ್ಕದಲ್ಲಿ ವಿವಾಹ ಸಮಾರಂಭದಲ್ಲಿ ಭಾಗವಹಿಸಿ, ಬೆಳಗ್ಗೆ 10.06ಕ್ಕೆ ಉಳಿಯತ್ತಡ್ಕದ ಪೆಟ್ರೋಲ್ ಬಂಕ್‌ಗೆ ತೆರಳಿ ಆ ಬಳಿಕ ಆದೂರಿನಲ್ಲಿ ವಿವಾಹಕ್ಕೆ ಸಂಬಂಧಪಟ್ಟ ಸಮಾರಂಭದಲ್ಲಿ ಭಾಗವಹಿಸಿದ್ದರು. ಮಾ. 15ರಂದು ಮಧ್ಯಾಹ್ನ 12.15ಕ್ಕೆ ಮಂಜತ್ತಡ್ಕದಲ್ಲಿ ವಿವಾಹ ಸಮಾರಂಭದಲ್ಲಿ ಭಾಗವಹಿಸಿದರು. ಮಾ. 16ರಂದು ಬೆಳಗ್ಗೆ 7 ಗಂಟೆಗೆ ಎರಿಯಾಲ್ ಕುಳಂಗರದಲ್ಲಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾತ್ರಿ 9ಕ್ಕೆ ಕಾಸರಗೋಡು ನರ್ಸಿಂಗ್ ಹೋಮ್‌ಗೆ ಭೇಟಿ ನೀಡಿದರು. 17ರಂದು ಮಧ್ಯಾಹ್ನ 2.30ಕ್ಕೆ ಜನರಲ್ ಆಸ್ಪತ್ರೆಗೆ ಭೇಟಿ ನೀಡಿ, 17, 18 ಮತ್ತು 19ರಂದು ಕುಳಂಗರದ ಸಹೋದರನ ಮನೆಯಲ್ಲಿ ಇದ್ದರು. ಮಾ. 19ರಂದು ರಾತ್ರಿ 8.30ಕ್ಕೆ ಆಸ್ಪತ್ರೆಗೆ ದಾಖಲಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.