ಕಾಸರಗೋಡು: ಅರಿವಳಿಕೆ ತಜ್ಞರ ರಾಷ್ಟ್ರೀಯ ಕಾರ್ಯಾಗಾರ
Team Udayavani, Jul 3, 2019, 5:00 AM IST
ಕಾಸರಗೋಡು: ಭಾರತೀಯ ಅರಿವಳಿಕೆ (ಐ.ಎಸ್.ಎ.) ಸಂಘಟನೆಯ ರಾಷ್ಟ್ರೀಯ ಸಮಿತಿಯ ಸಹಯೋಗದಲ್ಲಿ ಅರಿವಳಿಕೆಯ ಕುರಿತು ಏಕದಿನ ನಿರಂತರ ವೈದ್ಯಕಿಯ ವಿದ್ಯಾಭ್ಯಾಸ ಕಾರ್ಯಾಗಾರ ನಡೆಯಿತು.
ಐ.ಎಸ್.ಎ. ಕಾಸರಗೋಡು ಶಾಖೆಯು ಕಾಸರಗೋಡು ಸಿಟಿ ಟವರ್ ಹೊಟೇಲ್ನಲ್ಲಿ ಆಯೋಜಿಸಿದ ಕಾರ್ಯಾಗಾರವನ್ನು ರಾಷ್ಟ್ರೀಯ ಅಧ್ಯಕ್ಷ ಡಾ| ಎಸ್. ಬಾಲಭಾಸ್ಕರ್ ಉದ್ಘಾಟಿಸಿದರು. ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಡಾ| ಮುರಳೀಧರ್ ಜೋಶಿ, ರಾಷ್ಟ್ರೀಯ ಕಾರ್ಯದರ್ಶಿ ಡಾ| ನವೀನ್ ಮಲೊØೕತ್ರ, ರಾಷ್ಟ್ರೀಯ ಮಾಜಿ ಅಧ್ಯಕ್ಷ ಡಾ| ಕುಚೇಲ ಬಾಬು, ಡಾ| ಚಕ್ರರಾವ್, ರಾಷ್ಟ್ರೀಯ ಮಾಜಿ ಕಾರ್ಯದರ್ಶಿ ಡಾ| ವೆಂಕಟಗಿರಿ ಕೆ.ಎಂ., ಕೇರಳ ರಾಜ್ಯ ಘಟಕದ ಅಧ್ಯಕ್ಷರಾದ ಡಾ| ಸುಗು ವರ್ಗೀಸ್, ರಾಜ್ಯ ಕಾರ್ಯದರ್ಶಿ ಡಾ| ಬಿನಿಲ್ ಐಸಾಕ್ ಮ್ಯಾಥ್ಯೂ ಮೊದಲಾದವರು ಭಾಗವಹಿಸಿದರು.
ಡಾ| ವೆಂಕಟಗಿರಿ ಕೆ.ಎಂ. ಸ್ವಾಗತಿಸಿದರು. ಡಾ| ಸಂತೋಷ ಕಾಮತ್ ವಂದಿಸಿದರು.
ಚೆನ್ನೈ, ತಿರುವನಂತಪುರ, ಕಲ್ಲಿಕೋಟೆ, ಮಂಗಳೂರು, ಮಣಿಪಾಲ, ಮೈಸೂರು, ಬಳ್ಳಾರಿ, ಭುವನೇಶ್ವರ, ಬೆಂಗಳೂರು, ಹರಿಯಾಣ, ಹೈದರಾಬಾದ್ ಮುಂತಾದೆಡೆಗಳಿಂದ ಬಂದ ವೈದ್ಯಕೀಯ ಕಾಲೇಜುಗಳ ಪ್ರಾಧ್ಯಾಪಕರು ವಿವಿಧ ವಿಷಯಗಳ ಕುರಿತು ಪ್ರಬಂಧವನ್ನು ಮಂಡಿಸಿದರು.
ಕೇರಳ ಮತ್ತು ಕರ್ನಾಟಕ ರಾಜ್ಯಗಳ 75ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಅರಿವಳಿಕೆ ತಜ್ಞರು ಭಾಗವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.