ನಿರ್ಗತಿಕಳಂತೆ ಇಹಲೋಕ ತ್ಯಜಿಸಿದ ರಕ್ತಸಾಕ್ಷಿ ಸಹೋದರ ಪತ್ನಿ ಪೂವಕ್ಕ!


Team Udayavani, Feb 9, 2018, 8:36 PM IST

Raktasaakshi-9-2.jpg

ಕಳೆದ 50 ವರ್ಷಗಳಿಂದಲೂ ಪ್ರತಿವರ್ಷವೂ ಮೂವರು ರಕ್ತಸಾಕ್ಷಿಗಳ ಸ್ಮರಣೆಯನ್ನು ಸಾರ್ವಜನಿಕ ಸಮಾರಂಭದ ಮೂಲಕ ಅದ್ದೂರಿಯಿಂದ ಇಂದಿಗೂ ಆಚರಿಸುತ್ತಿದ್ದರೂ ಓರ್ವ ರಕ್ತಸಾಕ್ಷಿಯ ಪತ್ನಿಯಾಗಿದ್ದು ಯಾವುದೇ ಮಾನವೀಯತೆ ಇವರತ್ತ ಸುಳಿಯದಿರುವುದು ದುರಂತವೇ ಸರಿ. ಜೀವನ‌ದಲ್ಲಿ ಅಪಾರ ಕನಸನ್ನು ಹೊಂದಿದ್ದ ಪೂವಕ್ಕನವರಿಗೆ ವಿಧವಾ ಯೋಗದ ಬಳಿಕ ಬಂಧು ಬಳಗದಿಂದಲೂ ದೂರವಾಗಿ ಅಬಲೆಯಾಗಿ 50 ವರ್ಷಗಳ ಕಾಲ ಒಂಟಿ ಜೀವನ ನಡೆಸಿದ ಇವರಿಗೆ ಆಸ್ತಿಪಾಸ್ತಿಗಳಿದ್ದರೆ ಈ ಗತಿ ಬರುತ್ತಿರಲಿಲ್ಲವೇನೋ?

ಕುಂಬಳೆ: ಪೈವಳಿಕೆ ರಕ್ತಸಾಕ್ಷಿ ಸಹೋದರರಲ್ಲಿ ಮಡಿದ ಓರ್ವರ ಪತ್ನಿ ಎನಿಸಿಕೊಳ್ಳುತ್ತಿದ್ದ ಅನಾಥೆ ಪೂವಕ್ಕ ಅವರು ಕೊನೆಗೂ ಜ. 17ರಂದು ವೃದ್ಧಾಪ್ಯದಿಂದ ಪರವನಡ್ಕ ಸರಕಾರಿ ವೃದ್ಧ ಮಂದಿರದಲ್ಲಿ ಇಹಲೋಕ ತ್ಯಜಿಸಿದರು. 
1958ರಲ್ಲಿ ರೈತಪರ ಹೋರಾಟದಲ್ಲಿ ಮಡಿದ ಕಳಾಯಿ ರೈತ ಕುಟುಂಬದ ಮೂವರು ಸಹೋದರರೋರ್ವರ ದ್ವಿತೀಯ ಪತ್ನಿ ಎನಿಸಿಕೊಳ್ಳುತ್ತಿರುವ ಪೂವಕ್ಕ ಪತಿಯ ಮರಣದ ಬಳಿಕ ಅನಾಥವಾಗಿದ್ದರು. ಮಕ್ಕಳಿಲ್ಲದ ಇವರಿಗೆ ಉಪ್ಪಳದ ಕಾವೇರಿ ಅಮ್ಮ ಎಂಬ ಸ್ವಜಾತಿ ಮಹಿಳೆ ಹಲವಾರು ವರ್ಷಗಳ ಕಾಲ ಆಸರೆ ನೀಡಿದ್ದರು. ಪಕ್ಕದ ಮನೆಯ ಕಂದಾಯ ಅಧಿಕಾರಿ ಗುರುಪಾದ್‌ ಅವರು ಮತ್ತು ಬ್ಯಾಂಕ್‌ ಮ್ಯಾನೇಜರ್‌ ಚಂದ್ರಕಾಂತ್‌ ಮತ್ತು ಮನೆಯವರು ಇವರಿಗೆ ಸಾಂತ್ವನ, ಸಹಕಾರ ನೀಡುತ್ತಿದ್ದರು. ಹಿರಿಯ ಸಮಾಜಸೇವಕ ಬೇರಿಕೆ ರಾಮಯ್ಯ ನಾೖಕ್‌ ಇವರಿಗೆ ಸರಕಾರದಿಂದ ವೃದ್ಧಾಪ್ಯ ಪಿಂಚಣಿ ದೊರಕುವಂತೆ ಮಾಡಿದ್ದರು. ಬಳಿಕ ಪೂವಕ್ಕನವರ ವೃದ್ಧಾಪ್ಯ ಪಿಂಚಣಿ ಮೊಟಕುಗೊಂಡಾಗ 1995ರಲ್ಲಿ ಪೈವಳಿಕೆ ಗ್ರಾಮ ಪಂಚಾಯತ್‌ ಅಧ್ಯಕ್ಷರಾಗಿದ್ದ ಅಚ್ಯುತ ಚೇವಾರ್‌ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದು ಇದನ್ನು ಮರಳಿ ದೊರೆಯುವಂತೆ ವ್ಯವಸ್ಥೆಗೊಳಿಸಿದ್ದರು. 

2005ರಲ್ಲಿ ಕಾವೇರಿ ಅಮ್ಮನವರು ತನ್ನ ಮನೆ ಸ್ಥಳವನ್ನು ಮಾರಾಟ ಮಾಡಿದ ಕಾರಣ ಪೂವಕ್ಕನವರಿಗೆ ಎಲ್ಲಿಯಾದರೂ ಆಶ್ರಯ ನೀಡಬೇಕೆಂಬುದಾಗಿ ಚೇವಾರ್‌ ಅವರಲ್ಲಿ ವಿನಂತಿಸಿದರು. ಇದರಂತೆ ಸಮಾಜಸೇವಕ ಬಳ್ಳಂಬೆಟ್ಟು ಸಂಕಪ್ಪ ಭಂಡಾರಿ ಅವರು ಮಂಗಳೂರಿನ ಪ್ರತಿಷ್ಠಿತ ಮನೆಯೊಂದರಲ್ಲಿ ಆಶ್ರಯಕ್ಕೆ ಪೂವಕ್ಕ ಅವರನ್ನು ಕರೆದೊಯ್ದಾಗ ಪೂವಕ್ಕನವರು ಆ ಬಂಗಲೆ ಮನೆಯನ್ನು ನಿರಾಕರಿಸಿ ಭಂಡಾರಿಯವರೊಂದಿಗೆ ಮರಳಿದರು. ತಾನು ಪರರ ಆಶ್ರಯಕ್ಕೆ ಬಲಿ ಬೀಳಲಾರೆನೆಂಬ ಇವರ ಆಶಯದಂತೆ ಇವರನ್ನು 2005ರ ಆಗಸ್ಟ್‌ 30ರಂದು ಚೆಮ್ನಾಡು ಬಳಿಯ ಪರವನಡ್ಕ ಸರಕಾರಿ ವೃದ್ಧ ಮಂದಿರದಲ್ಲಿ ಅಚ್ಯುತ ಚೇವಾರ್‌ರವರು ದಾಖಲಿಸಿದರು. ಅಂದಿನಿಂದ ಜ. 17ರ ತನಕ 12 ವರ್ಷಗಳ ಕಾಲ ಪೂವಕ್ಕ ಅನಾಥಾಶ್ರಮದಲ್ಲಿದ್ದರೂ ಚೇವಾರ್‌ ಅವರು ಅಲ್ಲಿಗೆ ಆಗಾಗ ತೆರಳಿ ಇವರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು. ಸರಕಾರದ ವೃದ್ಧಾಪ್ಯ ಪಿಂಚಣಿ ಸಕಾಲದಲ್ಲಿ ಕೈಸೇರುವ ವ್ಯವಸ್ಥೆ ಮಾಡುತ್ತಿದ್ದರು. ಅಲ್ಲದೆ ತನ್ನ ಮನೆಗೆ ಕರೆತಂದು ಕೆಲಕಾಲ ಆಶ್ರಯ ನೀಡುತ್ತಿದ್ದರು. ಮಾತೃ ಮಮಕಾರ ತೋರುತ್ತಿದ್ದರು.

ಬಂಟ ಮನೆತನದವರಾಗಿದ್ದ ಪೂವಕ್ಕ ಓರ್ವ ಸ್ವಜಾತಿ ಸ್ವಾಮೀಜಿಯವರ ಪೂರ್ವಾಶ್ರಮದ ಬಂಧುವೆನಿಕೊಳ್ಳುತ್ತಿದ್ದ ಪೂವಕ್ಕನವರು ರಕ್ತಸಾಕ್ಷಿಗಳ ಸಹೋದರರೋರ್ವರ ದ್ವಿತೀಯ ಪತ್ನಿಯಾಗಿದ್ದುದರಿಂದ ಪೂವಕ್ಕ ಅವರಿಗೆ ಪತಿಯ ಮನೆಯಿಂದಾಗಲಿ ತನ್ನ ಸ್ವಂತ ತವರಿನಿಂದಾಗಲಿ ಬಂಧುಗಳಿಂದಾಗಲಿ ಯಾವುದೇ ಮಮ ತೆ ದೊರೆಯದೆ ವಿಧವೆಯಾಗಿ ಅವಗಣನೆಗೆ ಒಳಗಾಗುವಂತಾಯಿತು. ಪತಿ ಗುಂಡೇಟಿನಿಂದ ಮರಣ ಹೊಂದಿದ ಬಳಿಕ ಜೀವನದ ಕೊನೆತನಕ ನಿಧನದವರೆಗೆ ಬಂಧುಬಳಗದಿಂದ ದೂರವಾಗಿಯೇ ಉಳಿಯುವಂತಾಯಿತು. ವೃದ್ಧ ಮಂದಿರದಲ್ಲೇ ಜೀವನ ಕಳೆಯುವಂತಾಯಿತು. ಆದರೆ 90 ವರ್ಷ ಸಂದ ಹಿರಿಯ ನಾಗರಿಕೆ ಎಂಬುದಾಗಿ ಇವರನ್ನು ವೃದ್ಧ ಮಂದಿರದ ಸಮಾರಂಭದಲ್ಲಿ ಸಮ್ಮಾನಿಸಲಾಗಿತ್ತು.

ಪೂವಕ್ಕ ತನ್ನ ಮರಣದ ಬಳಿಕ ತನ್ನನ್ನು ಅನಾಥ ಶವವಾಗಿ ಕಾಣದೆ ಸಂಪ್ರದಾಯದಂತೆ ಸ್ಮಶಾನದ ಕಾಷ್ಠದಲ್ಲಿ ಉರಿಸಬೇಕು. ಧಾರ್ಮಿಕ ವಿಧಿವಿಧಾನಗಳೊಂದಿಗೆ ತನ್ನ ಉತ್ತರ ಕ್ರಿಯೆಯನ್ನು ನೆರವೇರಿಸಬೇಕೆಂಬ ಪೂವಕ್ಕನವರ ಬೇಡಿಕೆಯನ್ನು ಪರಿಗಣಿಸಿದ ಅಚ್ಯುತ ಚೇವಾರ್‌ರವರು ನಿಧನದಂದು ಇವರ ಶವವನ್ನು ವೃದ್ಧ ಮಂದಿರದಿಂದ ಆ್ಯಂಬುಲೆನ್ಸ್‌ ಮೂಲಕ ತಂದು ಕಾಸರಗೋಡು ನುಳ್ಳಿಪ್ಪಾಡಿ ಚೆನ್ನಿಕ್ಕರೆಯ ರುದ್ರಭೂಮಿಯಲ್ಲಿ ಮಿತ್ರರ ಸಹಕಾರದೊಂದಿಗೆ ದಹಿಸಿದರು. ಬಳಿಕ ಜ. 27ರಂದು ಉಪ್ಪಳ ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಆಡಳಿತ ಮೊಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರೇಂ ಕುಮಾರ್‌ ಸಹಕಾರದೊಂದಿಗೆ ನಿವೃತ್ತ ಕಂದಾಯ ಅಧಿಕಾರಿ ಗುರುಪಾದ್‌, ಕಾವೇರಿ ಅಮ್ಮ ಮತ್ತು ಕಳ್ಳಿಗೆಬೀಡು ಸಚ್ಚಿದಾನಂದ ರೈ ಹಾಗೂ ಚೇವಾರ್‌ ಅವರ ಮನೆಯವರ ಉಪಸ್ಥಿತಿಯಲ್ಲಿ ವೈದಿಕ ವಿಧಿವಿಧಾನಗಳೊಂದಿಗೆ ಉತ್ತರಕ್ರಿಯೆಯನ್ನು ವಿಧ್ಯುಕ್ತವಾಗಿ ನೆರವೇರಿಸಲಾಯಿತು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madikeri: ಕೊಟ್ಟಿಗೆಯಿಂದ ಹಸು ಕಳವು; ದೂರು ದಾಖಲು

Madikeri: ಕೊಟ್ಟಿಗೆಯಿಂದ ಹಸು ಕಳವು; ದೂರು ದಾಖಲು

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

21-sabarimala

Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.