ಕಾಸರಗೋಡು ನಗರಸಭೆ: ಮತ್ತೆ ಐಕ್ಯರಂಗ ಅಧಿಕಾರಕ್ಕೆ

ಕಾಂಞಂಗಾಡ್‌, ನೀಲೇಶ್ವರ ನಗರಸಭೆಯಲ್ಲಿ ಮತ್ತೆ ಎಲ್‌ಡಿಎಫ್‌ ಆಡಳಿತ

Team Udayavani, Dec 16, 2020, 10:50 PM IST

ಕಾಸರಗೋಡು ನಗರಸಭೆ: ಮತ್ತೆ ಐಕ್ಯರಂಗ ಅಧಿಕಾರಕ್ಕೆ

ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಮೆರವಣಿಗೆ ನಡೆಸಿದರು.

ಕಾಸರಗೋಡು: ಜಿಲ್ಲೆಯಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಕಾಸರಗೋಡು, ಕಾಂಞಂ ಗಾಡ್‌, ನೀಲೇಶ್ವರ ನಗರಸಭೆ ಚುನಾವಣೆ ಫ‌ಲಿತಾಂಶ ಹೊರಬಿದ್ದಿದೆ. ಕಾಸರಗೋಡು ನಗರಸಭೆಯು ಐಕ್ಯರಂಗದ ಪಾಲಾದರೆ, ಕಾಂಞಂಗಾಡ್‌, ನೀಲೇಶ್ವರ ನಗರ ಸಭೆಯಲ್ಲಿ ಮತ್ತೆ ಎಲ್‌ಡಿಎಫ್‌ ಅಧಿಕಾರಕ್ಕೇರಿದೆ.

ಕಾಸರಗೋಡು: ಐಕ್ಯರಂಗಕ್ಕೆ 21 ಸ್ಥಾನ
ಕಾಸರಗೋಡು ನಗರಸಭೆಯ 38 ವಾರ್ಡ್‌ಗಳ ಪೈಕಿ 21 ಸ್ಥಾನಗಳನ್ನು ಐಕ್ಯರಂಗ ಪಡೆದುಕೊಂಡು ಅಧಿಕಾರಕ್ಕೇರಿದೆ. ಉಳಿದ 14 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂ ಡಿದೆ. ಸಿಪಿಎಂ-1, ಮುಸ್ಲಿಂ ಲೀಗ್‌ ಬಂಡಾಯ-1, ಸ್ವತಂತ್ರ-1 ಸ್ಥಾನಗಳನ್ನು ಪಡೆದುಕೊಂಡಿವೆ. 21 ಸೀಟುಗಳನ್ನು ಗೆದ್ದು ಐಕ್ಯರಂಗ ಅಧಿಕಾರ ಉಳಿಸಿಕೊಂಡಿದೆ. ಬಿಜೆಪಿ 14 ಸೀಟುಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.

ಕಾಸರಗೋಡು ನಗರಸಭೆಯ ಚೇರಂಗೈ ಕಡಪ್ಪುರದಲ್ಲಿ ಮುಸ್ಲಿಂ ಲೀಗ್‌ನ ಮುಸ್ತಾಫಾ, ಚೇರಂಗೈ ಈಸ್ಟ್‌ನಲ್ಲಿ ಅಬ್ಟಾಸ್‌ ಬೀಗಂ, ಅಡ್ಕತ್ತಬೈಲ್‌ ವಾರ್ಡ್‌ನಲ್ಲಿ ಶಂಸೀದಾ ಫಿರೋಜ್‌, ತಾಳಿಪಡು³ನಲ್ಲಿ ಅಶ್ವಿ‌ನಿ, ಕರಂದಕ್ಕಾಡ್‌ನ‌ಲ್ಲಿ ಹೇಮಲತಾ ಎ., ಆನೆಬಾಗಿಲಿನಲ್ಲಿ ಪವಿತ್ರಾ ಕೆ.ಜಿ., ನುಳ್ಳಿಪ್ಪಾಡಿಯಲ್ಲಿ ವರಪ್ರಸಾದ್‌ ಕೋಟೆಕಣಿ, ನುಳ್ಳಿಪ್ಪಾಡಿ ನಾರ್ತ್‌ನಲ್ಲಿ ಶಾರದಾ, ಅಣಂಗೂರಿನಲ್ಲಿ ಪಿ. ರಮೇಶ್‌, ನೆಲ್ಕಳದಲ್ಲಿ ಸವಿತಾ ಟೀಚರ್‌, ಫಿಶ್‌ ಮಾರ್ಕೆಟ್‌ನಲ್ಲಿ ಹಸೀನಾ ನೌಶಾದ್‌, ಹೊನ್ನೆಮೂಲೆಯಲ್ಲಿ ಶಕೀನಾ ಮೊದೀನ್‌, ತೆರುವತ್‌ನಲ್ಲಿ ಅಫೀಲಾ ಬಶೀರ್‌, ಪಳ್ಳಿಕ್ಕಾಲ್‌ನಲ್ಲಿ ಸಫಿಯಾ ಮೊದೀನ್‌, ಖಾಸೀಲೈನ್‌ನಲ್ಲಿ ವಿ.ಎಂ. ಮುನೀರ್‌, ತಳಂಗರೆ ಬಾಂಗೋಡಿನಲ್ಲಿ ಇಕ್ಬಾಲ್‌ ಬಾಂಗೋಡು, ತಳಂಗರೆ ಜದೀದ್‌ ರೋಡ್‌ನ‌ಲ್ಲಿ ಸಹೀರ್‌ ಆಸಿಫ್‌, ತಳಂಗರೆ ಕಂಡತ್ತಿಲ್‌ ವಾರ್ಡ್‌ನಲ್ಲಿ ಸಿದ್ಧೀಕ್‌ ಚಕ್ಕರ, ತಳಂಗರೆ ಕೆ.ಕೆ. ಪುರಂನಲ್ಲಿ ರೀತಾ ಆರ್‌., ತಳಂಗರೆ ಪಡಿಂಞರ್‌ನಲ್ಲಿ ಸುಮಯ್ಯ ಮೊದೀನ್‌, ತಳಂಗರೆ ದೀನಾರ್‌ ನಗರ್‌ನಲ್ಲಿ ಸಕರಿಯಾ ಎಂ. ತಾಯಲಂಗಾಡಿ ವಾರ್ಡ್‌ನಲ್ಲಿ ಮಹಮ್ಮದ್‌ ಕುಂಞಿ ತಾಯಲಂಗಾಡಿ ಜಯಗಳಿಸಿದರು.

ಜಿಲ್ಲೆಯ 10 ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
ಕಾಸರಗೋಡು, ಡಿ. 16: ಚುನಾವಣೆ ಫಲಿತಾಂಶ ಪ್ರಕಟಗೊಳ್ಳುವ ಹಿನ್ನೆಲೆಯಲ್ಲಿ ಕಾನೂನು-ಶಾಂತಿ ಪಾಲನೆ ಖಚಿತಪಡಿಸುವ ನಿಟ್ಟಿನಲ್ಲಿ ಜಿಲ್ಲೆಯ 10 ಪೊಲೀಸ್‌ ಠಾಣೆಗಳ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಆದೇಶ ಪ್ರಕಟಿಸಿದ್ದಾರೆ. ಡಿ. 17 ರಂದು ರಾತ್ರಿ 12 ಗಂಟೆ ವರೆಗೆ ಸಿ.ಆರ್‌. ಪಿ.ಸಿ. 144 ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕಾಸರಗೋಡು, ವಿದ್ಯಾನಗರ, ಮೇಲ್ಪರಂಬ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ, ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲಿ ಪೂರ್ಣರೂಪದಲ್ಲಿ, ಕುಂಬಳೆ ಪೊಲೀಸ್‌ ಠಾಣೆ ವ್ಯಾಪ್ತಿಯ ಕುಂಬಳೆ ಪೇಟೆ, ಬಂದ್ಯೋಡು, ಅಡ್ಕ, ಸೀತಾಂಗೋಳಿ, ಉಳುವಾರು, ಮೊಗ್ರಾಲ್‌, ಬಂಬ್ರಾಣ, ಮಂಜೇಶ್ವರ ಪೊಲೀಸ್‌ ಠಾಣೆ ವ್ಯಾಪ್ತಿಯ ಉಪ್ಪಳ, ಮಂಜೇಶ್ವರ, ಹೊಸಂಗಡಿ, ಕುಂಜತ್ತೂರು, ಆದೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಬೋವಿಕ್ಕಾನ, ಇರಿಯಣ್ಣಿ, ಅಡೂರು, ಹೊಸದುರ್ಗ ಪೊಲೀಸ್‌ ಠಾಣೆ ವ್ಯಾಪ್ತಿಯ ಕಾಂಞಂಗಾಡ್‌ ನಗರಸಭೆ, ಅಜಾನೂರು ಗ್ರಾ.ಪಂ., ಬೇಕಲ ಪೊಲೀಸ್‌ ಠಾಣೆ ವ್ಯಾಪ್ತಿಯ ಪುಲ್ಲೂರು-ಪೆರಿಯ ಗ್ರಾ.ಪಂ., ಚಂದೇರ ಪೊಲೀಸ್‌ ಠಾಣೆ ವ್ಯಾಪ್ತಿಯ ಪಡನ್ನ, ಚೆರುವತ್ತೂರು, ಪಿಲಿಕೋಡ್‌ ಗ್ರಾ.ಪಂ., ನೀಲೇಶ್ವರ ಪೊಲೀಸ್‌ ಠಾಣೆ ವ್ಯಾಪ್ತಿಯ ನೀಲೇಶ್ವರ ನಗರಸಭೆ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಂಡಿದೆ.

ಟಾಪ್ ನ್ಯೂಸ್

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್‌ ಬೆಳ್ಳುಳ್ಳಿ ವಶಕ್ಕೆ

Garlic: ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್‌ ಬೆಳ್ಳುಳ್ಳಿ ವಶಕ್ಕೆ

Pakistan: ಬಲೂಚ್‌ನಲ್ಲಿ ಆತ್ಮಾಹುತಿ ದಾಳಿ: 6 ಸಾವು, 25 ಮಂದಿಗೆ ಗಾಯ

Pakistan: ಬಲೂಚ್‌ನಲ್ಲಿ ಆತ್ಮಾಹುತಿ ದಾಳಿ: 6 ಸಾವು, 25 ಮಂದಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

1-ksde

CPCRI; ಅಡಿಕೆ ಉತ್ಪನ್ನ ಬಗ್ಗೆ ಸಂಶೋಧನೆ

Fraud case: ಸಚಿತಾ ರೈ ವಿರುದ್ಧ ಇನ್ನೊಂದು ಕೇಸು ದಾಖಲು

Fraud case: ಸಚಿತಾ ರೈ ವಿರುದ್ಧ ಇನ್ನೊಂದು ಕೇಸು ದಾಖಲು

Kasargod: ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ ಸಹೋದರಿಯ ಪತಿ ಪೋಕ್ಸೋ ಪ್ರಕಾರ ಬಂಧನ

Kasargod: ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ ಸಹೋದರಿಯ ಪತಿ ಪೋಕ್ಸೋ ಪ್ರಕಾರ ಬಂಧನ

Kasargod: ಹೊಳೆಯಲ್ಲಿ ನೀಲೇಶ್ವರ ನಗರಸಭಾ ಅಧ್ಯಕ್ಷೆಯ ಪತಿಯ ಮೃತದೇಹ ಪತ್ತೆ

Kasargod: ಹೊಳೆಯಲ್ಲಿ ನೀಲೇಶ್ವರ ನಗರಸಭಾ ಅಧ್ಯಕ್ಷೆಯ ಪತಿಯ ಮೃತದೇಹ ಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.