ರಾಷ್ಟ್ರೀಯ ಹೆದ್ದಾರಿಯಿಂದಲೇ ಕಟಪಾಡಿಯಲ್ಲಿ ಸಮಸ್ಯೆ: ಆರೋಪ
Team Udayavani, Nov 30, 2018, 1:45 AM IST
ಕಟಪಾಡಿ: ಇಲ್ಲಿನ ಹೆಚ್ಚಿನ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣವೇ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಾಗಿದ್ದು, ಗ್ರಾಮಸ್ಥರ ಸಮಸ್ಯೆ ಆಲಿಸಲು ಹೆದ್ದಾರಿ ಇಲಾಖೆ ಅಥವಾ ಹೆದ್ದಾರಿ ಗುತ್ತಿಗೆದಾರ ನವಯುಗದ ಅಧಿಕಾರಿಗಳು ಬಂದಿಲ್ಲ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಯಿತು. ಗುರುವಾರ ಪಂಚಾಯತ್ ಸಭಾಂಗಣದಲ್ಲಿ ಜರಗಿದ 2018-19ರ ಸಾಲಿನ ಪ್ರಥಮ ಹಂತದ ಕಟಪಾಡಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರಿಂದ ಈ ರೀತಿ ಆಕ್ರೋಶ ವ್ಯಕ್ತವಾಗಿದೆ. ಕಟಪಾಡಿಯಲ್ಲಿ ಹೆದ್ದಾರಿಯವರು ಸ್ವಾಧೀನಪಡಿಸಿಕೊಂಡ ಜಾಗವನ್ನು ಸಂಪೂರ್ಣವಾಗಿ ತೆರವುಗೊಳಿಸಿದಲ್ಲಿ ಜನ ಸಂಚಾರಕ್ಕೆ, ವಾಹನ ನಿಲುಗಡೆಗೂ ಅವಕಾಶ ಸಿಗುತ್ತದೆ. ಈ ಬಗ್ಗೆ ಗ್ರಾಮ ಸಭೆಯು ನಿರ್ಣಯ ಕೈಗೊಂಡು ಸೂಕ್ತ ಕ್ರಮ ಜರಗಿಸುವಂತೆ ಒತ್ತಾಯಿಸಿದ್ದಾರೆ.
ಕುಡಿಯುವ ನೀರಿಗೆ ಆಗ್ರಹ ಜೆ.ಎನ್. ನಗರದಲ್ಲಿ ಕುಡಿಯುವ ನೀರಿನ ತತ್ವಾರ ನೀಗಿಸಲು ಶಾಶ್ವತ ಕ್ರಮಕ್ಕೆ ಒತ್ತಾಯಿಸಿದ ಗ್ರಾಮಸ್ಥರು, ಕೊಳಚೆ ನೀರಿನ ಸಮಸ್ಯೆಗೆ ಮುಕ್ತಿ ಕಲ್ಪಿಸಲು ವಿನಂತಿಸಿದರು. ಇದಕ್ಕುತ್ತರಿಸಿದ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಎಂ.ಸುವರ್ಣ ಈಗಾಗಲೇ 8 ಲಕ್ಷ ರೂ. ಅನುದಾನ ಬಳಸಿಕೊಂಡು ಕುಡಿಯುವ ನೀರಿನ ಯೋಜನೆ ಒದಗಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಓವರ್ ಹೆಡ್ ಟ್ಯಾಂಕ್ ನಿಷ್ಪ್ರಯೋಜಕ
ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಅವರ ಅವಧಿಯಲ್ಲಿ ಶೇಖರ್ ಎಂಬವರ ಮನೆ ಬಳಿ ನಿರ್ಮಿಸಿದ ನೀರಿನ ಓವರ್ ಹೆಡ್ ಟ್ಯಾಂಕ್ ನಿಷ್ಪ್ರಯೋಜಕವಾಗಿದೆ. ಸದ್ಬಳಕೆ ಮಾಡದಿದ್ದಲ್ಲಿ ತೆರವುಗೊಳಿಸುವಂತೆ ಗ್ರಾಮಸ್ಥರೊಬ್ಬರು ಆಗ್ರಹಿಸಿದರು. ಪೇಟೆಯ ಬಸ್ಸು ತಂಗುದಾಣಕ್ಕೆ ಬಸ್ಸು ಬರಲಿ ಬಸ್ಸುಗಳನ್ನು ಸರ್ವೀಸ್ ರಸ್ತೆಯಲ್ಲಿ ಸಂಚಾರ ಆರಂಭಿಸಿದ ಅನಂತರದಲ್ಲಿ ಕಟಪಾಡಿ ಪೇಟೆ ಒಳಗಿನ ತಂಗುದಾಣಕ್ಕೆ ಬಸ್ಸುಗಳು ಬರುತ್ತಿಲ್ಲ. ಕನಿಷ್ಟ ಕಾಪು -ಶಿರ್ವ ಕಡೆಯಿಂದ ಬರುವ ಬಸ್ಸುಗಳನ್ನಾದರೂ ಪೇಟೆಯೊಳಗೆ ಬರುವಂತೆ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಜತೆಗೆ ಸಾರ್ವಜನಿಕ ಶೌಚಾಲಯದ ಬೇಡಿಕೆ ಇರಿಸಿದ್ದಾರೆ. ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ಗಳಿಗೆ ಸೂಕ್ತ ತಂಗುದಾಣದ ಬೇಡಿಕೆ. ಅಚ್ಚಡ-ಏಣಗುಡ್ಡೆ ಭಾಗದಲ್ಲಿ ದಾರಿದೀಪದ ಬೇಡಿಕೆ. ಹಿತ್ಲು ಹೌಸ್ ಬಳಿ ರಸ್ತೆಗೆ ಬೇಡಿಕೆ. ಉಪ್ಪು ನೀರಿನ ಹಾವಳಿ ತಡೆಗೆ ಹಲಗೆ ಸರಿಪಡಿಸಲು ಒತ್ತಾಯಗಳು ಕೇಳಿಬಂದವು.
ಸಭೆಯಲ್ಲಿ ಉಪಸ್ಥಿತರಿದ್ದ ಇಲಾಖಾ ಅಧಿಕಾರಿಗಳು ಇಲಾಖಾ ಮಾಹಿತಿಗಳನ್ನು ನೀಡಿದರು. ಅಂತರ್ಜಲ ಮರುಪೂರಣ ತರಬೇತುದಾರ ಜೋಸೆಫ್ ಬಿ.ಎಂ. ರೆಬೆಲ್ಲೋ ಅವರಿಂದ ಜಲ ಮರುಪೂರಣದ ಬಗ್ಗೆ ಸಾಕ್ಷé ಚಿತ್ರ ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಲಾಯಿತು. ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೂಲಿಯೆಟ್ ವೀರಾ ಡಿಸೋಜಾ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶೋಭಾ ವಿ. ನಾಡಕರ್ಣಿ ನೋಡಲ್ ಅಧಿಕಾರಿಯಾಗಿದ್ದರು.
ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಎಂ.ಸುವರ್ಣ, ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಪೂಜಾರಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರಭಾ ಬಿ. ಶೆಟ್ಟಿ,, ಕಾಪು ಪೊಲೀಸ್ ಠಾಣಾ ಪ್ರಭಾರ ಉಪನಿರೀಕ್ಷಕ ಬಿ. ಲಕ್ಷ್ಮಣ, ಮೆಸ್ಕಾಂ ಅಧಿಕಾರಿ ರಾಜೇಶ್, ಕೃಷಿ ಇಲಾಖಾಧಿಕಾರಿ ವಾದಿರಾಜ ರಾವ್, ಪಶುಸಂಗೋಪನಾ ಇಲಾಖೆಯ ಚಂದ್ರಶೇಖರ್, ಸಿಂಡ್ ಆರ್ಸೆಟಿ ಇದರ ಶ್ರೇಯಾ, ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ವಿಭಾಗದ ಸಂತೋಷ ಕುಮಾರ್ ಬೇಕಲ್, ಗ್ರಾಮ ಕರಣಿಕ ಡೇನಿಯಲ್ ಡೊಮ್ನಿಕ್ ಡಿಸೋಜ, ಗ್ರಾಮ ಪಂಚಾಯತ್ ಸದಸ್ಯರು, ಸಿಬಂದಿವರ್ಗ ಉಪಸ್ಥಿತರಿದ್ದರು. ಕಾರ್ಯದರ್ಶಿ ಗಾಯತ್ರೀ ಸ್ವಾಗತಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೆ.ಎನ್. ಇನಾಯತ್ ಉಲ್ಲಾ ಬೇಗ್ ವರದಿ ನೀಡಿದರು. ಲೆಕ್ಕ ಸಹಾಯಕಿ ಸುಲೋಚನಾ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Manada Kadalu: ಯುವ ಜೋಡಿಗಳ ʼಮನದ ಕಡಲುʼ; ಮತ್ತೆ ಒಂದಾದ ಮುಂಗಾರು ಮಳೆ ಟೀಂ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.