“ಬದುಕೆಂಬ ನಾಟಕ ರಂಗದಲ್ಲಿ ಕತೆ ಮರುಸೃಷ್ಟಿ ‘
Team Udayavani, Apr 15, 2019, 6:30 AM IST
ಪೆರ್ಮುದೆ:ಮಕ್ಕಳ ಮನಸ್ಸು ಒದ್ದೆ ಮಣ್ಣಿನಂತೆ ಏನನ್ನು ಕೊಟ್ಟರೂ ಸ್ವೀಕರಿಸುತ್ತದೆ ಎನ್ನುವ ಮಾತಿದೆ. ಆದರೆ ಮಕ್ಕಳ ಮನಸ್ಸು ಬಂಡೆ ಕಲ್ಲಿನಂತೆ. ನಾವು ಆ ಕಲ್ಲಿನಲ್ಲಿ ಯಾವ ರೂಪ ಞವನ್ನು ಬೇಕಾದರೂ ಕೆತ್ತಬಹುದು ಎಂದು ಖ್ಯಾತ ರಂಗ ನಿಧೇìಶಕ, ಚಿತ್ರಕಲಾವಿದ ಶಿವಗಿರಿ ಕಲ್ಲಡ್ಕ ಅಭಿಪ್ರಾಯಪಟ್ಟರು.
ಅವರು ರಂಗಚೇತನ ಕಾಸರಗೋಡು ನೇತƒತ್ವದಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಮತ್ತು ಬಿ.ಪಿ.ಪಿ.ಎ.ಎಲ್.ಪಿ ಶಾಲೆ ಪೆರ್ಮುದೆ ಇದರ ಸಹಭಾಗಿತ್ವದೊಂದಿಗೆ ಪೆರ್ಮುದೆಯಲ್ಲಿ ಆಯೋಜಿಸಲಾದ ತ್ರಿದಿನ ರಂಗ ತರಬೇತಿ ಶಿಬಿರ ರಂಗೋಲಿ-2019 ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಬೇಸಗೆ ರಜೆ ಹೊಸತನ್ನು ಕಲಿಯಲು ಇರುವಂಥ ಸುವರ್ಣಾವಕಾಶ. ಪಠ್ಯೇತರ ಚಟುವಟಿಕೆಗಳಿಗೆ ಈ ಸಮಯದಲ್ಲಿ ಹೆಚ್ಚು ಒತ್ತು ನೀಡಬೇಕು. ಮಕ್ಕಳು ದೇವರಂತೆ. ಆದರೆ ಆ ದೆ„ವೀ ಗುಣವನ್ನು ಉಳಿಸ ಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದವರು ಅಭಿಪ್ರಾಯ ಪಟ್ಟರು. ಬದುಕೆಂಬ ನಾಟಕ ರಂಗದಲ್ಲಿ ಕತೆ ಮರುಸƒಷ್ಟಿ ಪಡೆಯುತ್ತದೆ ಎಂದವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಂಗಚೇತನದ ಅಧ್ಯಕ್ಷ ಬಾಲಕೃಷ್ಣ ಮಾಸ್ಟರ್ ಮಕ್ಕಳ ಮೊಬೆ„ಲ್‌ನಿಂದ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆ ವಿವರಿಸಿದರು. ಶಿಕ್ಷಕರು ಹಾಗೂ ಹೆತ್ತವರು ಆ ಬಗ್ಗೆ ಜಾಗƒತೆ ವಹಿಸುವಂತೆ ಸೂಚಿಸಿದರು.
ಹಲವಾರು ವಿಶೇಷತೆಗಳೊಂದಿಗೆ ಸಂಪನ್ನ ಗೊಂಡ ಶಿಬಿರದಲ್ಲಿ 60 ಶಿಬಿರಾರ್ಥಿಗಳು ಮೂರು ದಿನಗಳ ಕಾಲ ರಂಗಾಟ, ರಂಗಗೀತೆಗಳ ಗಾಯನ, ರಂಗ ಸಂಗೀತ, ಮೈಮ್ ಶೋ, ಪ್ರಕೃತಿ ವೀಕ್ಷಣೆ. ಗಾಳಿಪಟ ಉತ್ಸವ, ಕ್ಯಾಂಪ್ ಫೆ„ರ್, ಮುಂತಾದ ಹತ್ತಾರು ಚಟುವಟಿಕೆಗಳ ಮೂಲಕ ಅನುಭವದ ಬುತ್ತಿಯನ್ನು ತುಂಬಿಕೊಂಡರು. ಮಾಹಿತಿ ಪೂರ್ಣವಾದ ಶಿಬಿರದಲ್ಲಿ ಮನೋರಂಜನೆಯ ಕಾರ್ಯಕ್ರಮಗಳನ್ನು ಮನದಣಿಯೆ ಆಸ್ವಾದಿಸಿ ಸಂಭ್ರಮಿಸಿದರು. ಅನುಭವೀ ಕಲಾವಿದರ, ರಂಗಕರ್ಮಿಗಳ ಮಾರ್ಗದರ್ಶನ, ಅನುಭವದ ಮಾತುಗಳು ಶಿಬಿರಾರ್ಥಿಗಳಿಗೆ ಹೊಸ ಹೊಸ ವಿಷಯ ಗಳನ್ನು ಸರಳವಾಗಿ ಮನದಟ್ಟಾಗುವಂತೆ ಮಾಡಿತು.
ಶಿಬಿರದ ಕೊನೆಯ ದಿನ ಪ್ರದರ್ಶಿಸಲಾದ ಮೂರು ಮಕ್ಕಳ ನಾಟಕಗಳು ಪ್ರೇಕ್ಷಕರ ಗಮನ ಸೆಳೆದವು. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳ ನೀತಿಯುಕ್ತವಾದ ನಾಟಕಗಳು ರಂಗಪರಿಕರ, ಭಾವಾಭಿ ವ್ಯಕ್ತಿಗಳಿಂದ ವಿಭಿನ್ನವಾಗಿ ಮೂಡಿಬಂತು. ಶಿಬಿರಾರ್ಥಿಗಳು ನುರಿತ ರಂಗಕರ್ಮಿ ಗಳಾದ ಉದಯಸಾರಂಗ್ ನಿಧೇìಶನದಲ್ಲಿ ದೇವರು, ವಸಂತ ಮಾಸ್ಟರ್ ಅವರ ಜೀವಜಲ ಹಾಗೂ ಸದಾಶಿವ ಮಾಸ್ಟರ್ ನಿರ್ದೇಶನದ ಎಲ್ಲೂ ಹಾರದ ಪಕ್ಷಿಗಳು ನಾಟಕಗಳನ್ನು ಪ್ರದರ್ಶಿಸಿದರು. ಕೆಲವೇ ಗಂಟೆಗಳನ್ನು ನಾಟಕಕ್ಕಾಗಿ ಉಪಯೋಗಿಸಿದ್ದರೂ ನಾಟ ಕಗಳ ಅತ್ಯುತ್ತಮ ಪ್ರದರ್ಶನ ಈ ಶಿಬಿರದ ಯಶಸ್ಸಿಗೆ ಕೈಗನ್ನಡಿಯಾಯಿತು.
ಅಂತೆಯೇ ಉತƒಷ್ಟವಾದ ಕಥಾ ವಸ್ತುಗಳನ್ನು ಆಯ್ದುಕೊಂಡ ಮಕ್ಕಳ ಕಲಾಸಕ್ತಿ, ಅಭಿನಯ ಚತುರತೆ, ಹಾಗೂ ನಾಟಕಗಳ ಬಗೆಗಿನ ಪುಟ್ಟ ಮನಸುಗಳ ದೊಡ್ಡ ಕಲ್ಪನೆಗಳನ್ನು ತೆರೆದಿಡುವಲ್ಲಿ ಈ ಶಿಬಿರವು ಸಾರ್ಥಕವೆನಿಸಿತು.
ಶಿಬಿರಕ್ಕೆ ಪತ್ಯಕ್ಷ ಹಾಗೂ ಪರೋಕ್ಷ ಸಹಕಾರ ನೀಡಿದ ಎಲ್ಲರನ್ನೂ ಈ ಸಂದರ್ಭದಲ್ಲಿ ಗೌರವಿಸಲಾಯಿತು. ಸದಾಶಿವ ಮಾಸ್ಟರ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಚರಿತ್ರೆಯ ನಿರ್ಮಾಣ
ಗಡಿನಾಡಿನಲ್ಲಿ ಇಷ್ಟೊಂದು ಸಂಪನ್ನವಾದ. ವಸ್ತುನಿಷ್ಠವಾದ ಶಿಬಿರವನ್ನು ಆಯೋಜಿಸುವ ಮೂಲಕ ಮಹತ್ತರವಾದ ಹೆಜ್ಜೆಯನ್ನಿಟ್ಟಿರುವ ರಂಗ ಚೇತನ ಕಾಸರಗೋಡು ಮಕ್ಕಳ ರಂಗಭೂಮಿಯಲ್ಲಿ ಹೊಸ ಸಾಧ್ಯತೆಗಳನ್ನು ಸƒಷ್ಟಿಸಿದೆ. ಇದು ಒಂದು ಚರಿತ್ರೆಯ ನಿರ್ಮಾಣಕ್ಕೆ ಕಾರಣವಾಗಲಿ.
– ಶಿವಗಿರಿ ಕಲ್ಲಡ್ಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.