ಮಗಳಿಗೆ ಕಥುವಾ ಬಾಲಕಿಯ ಹೆಸರು
Team Udayavani, Apr 15, 2018, 7:00 AM IST
ಕಾಸರಗೋಡು: ಜಮ್ಮು- ಕಾಶ್ಮೀರದ ಕಥುವಾದಲ್ಲಿ ಬುಡಕಟ್ಟು ಬಾಲಕಿಯೊಬ್ಬಳು ನಲುಗಿದ್ದಾಳೆ. ಘಟನೆ ಕ್ರೂರ, ಪ್ರತಿಭಟನೆಗೆ ನೂರು ವಿಧ; ಸಹಾನುಭೂತಿ ಸೂಚಿಸುವುದಕ್ಕೆ ಸಾವಿರ ದಾರಿ. ನೀಲೇಶ್ವರದ ಮಲಯಾಳ ಪತ್ರಕರ್ತರೊಬ್ಬರು ತನ್ನ ಮಗಳಿಗೆ ಆ ಕಾಶ್ಮೀರಿ ಬಾಲಕಿಯ ಹೆಸರು ಇರಿಸಿದ್ದಾರೆ. ಹಸುಳೆಯ ಫೋಟೋ ಜತೆಗೆ ರಜಿತ್ ರಾಂ ಮಾಡಿರುವ ಫೇಸ್‌ಬುಕ್ ಪೋಸ್ಟ್ ಎಲ್ಲರ ಅಭಿನಂದನೆಗೆ ಪಾತ್ರವಾಗಿದೆ.
ಮಗಳಿಗೆ ಆಸಿಫಾ ಎಸ್. ರಾಜ್ ಎನ್ನುವ ಹೆಸರಿಟ್ಟಿರುವುದಾಗಿ ತನ್ನ ಫೇಸ್‌ಬುಕ್ ಪುಟದಲ್ಲಿ ಪ್ರಕಟಿಸಿರುವ ರಜಿತ್ ರಾಂ ನೀಲೇಶ್ವರ ನಿವಾಸಿ, ಕಣ್ಣೂರು ಮಾತೃಭೂಮಿ ಪತ್ರಿಕೆಯ ಉಪ ಸಂಪಾದಕ. ಅಮಾನುಷವಾಗಿ ಕೊಲೆಗೈಯಲ್ಪಟ್ಟ ಕಾಶ್ಮೀರಿ ಬಾಲಕಿಗೆ ನ್ಯಾಯ ದೊರಕಬೇಕು ಎಂಬ ಏಕ ದೃಷ್ಟಿಯಿಂದ ತಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ರಜಿತ್ ರಾಂ ಹೇಳಿದ್ದಾರೆ. ದೂರದ ಕಾಶ್ಮೀರದಲ್ಲಿಯೂ ಅವರ ಪೋಸ್ಟ್ ಸುದ್ದಿ ಮಾಡಿದೆ, ಪ್ರಶಂಸೆ ಮತ್ತು ಚರ್ಚೆಗೆ ಕಾರಣವಾಗಿದೆ.
“ಹೆಸರಿಟ್ಟೆ; ಅದೇ, ಅದೇ ಹೆಸರು. ಆಸಿಫಾ ಎಸ್. ರಾಜ್. ನನ್ನ ಮಗಳವಳು’ ಎಂದು ರಜಿತ್ ರಾಂ ಬರೆದುಕೊಂಡಿದ್ದಾರೆ. ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ 25,000 ಲೈಕ್ಸ್, 16,024ದಷ್ಟು ಶೇರ್ ಆಗಿದೆ. ಫೆಬ್ರವರಿ ತಿಂಗಳಲ್ಲಿ ರಜಿತ್ ರಾಂಗೆ ಎರಡನೇ ಮಗಳು ಜನಿಸಿದ್ದು. ಹೆಸರು ಹುಡುಕುತ್ತಿದ್ದ ಸಂದರ್ಭ ಕಾಶ್ಮೀರದಲ್ಲಿ ಎಂಟು ವರ್ಷದ ಬಾಲೆ ಆಸಿಫಾಳ ಘಟನೆ ಬೆಳಕಿಗೆ ಬಂದಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.